ಲೋಕಸಭಾ ಚುನಾವಣೆ ಕೊನೆ ಹಂತ ತಲುಪಿದೆ. ಇತ್ತ ಫಲಿತಾಂಶದತ್ತ ಕಣ್ಣಿಟ್ಟಿರುವ ಆಡಳಿತ ಪಕ್ಷ ಮತ್ತು ವಿಪಕ್ಷಗಳು ತಂತ್ರ ಪ್ರತಿತಂತ್ರಕ್ಕೆ ತಯಾರಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ, ಪಟನಾ ಸಾಹಿಬ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವಿಶಂಕರ್ ಪ್ರಸಾದ್ ಚುನಾವಣಾ ಫಲಿತಾಂಶ, ತೃತೀಯ ರಂಗ ರಚನೆ ಇತ್ಯಾದಿ ಕುರಿತಾಗಿ ‘ದಿ ಎಕನಾಮಿಕ್ ಟೈಮ್ಸ್ ’ ಮತ್ತು ‘ಟೈಮ್ಸ್ ನೌ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

ಮೇ 23 ರ ಫಲಿತಾಂಶ ಏನಾಗಿರಬಹುದು?

ಬಿಜೆಪಿಗೆ ಬಹುಮತ ಬಂದೇ ಬರುತ್ತದೆ. ಎನ್‌ಡಿಎಯೂ ಸೇರಿ ಅತಿ ಹೆಚ್ಚು ಸೀಟುಗಳು ನಮಗೆ ಲಭ್ಯವಾಗುತ್ತವೆ. ಪುಲ್ವಾಮಾ ಭಯೋ ತ್ಪಾದಕ ದಾಳಿಯ ನಂತರ ನಡೆದ ಏರ್‌ಸ್ಟ್ರೈಕ್ ದೇಶದ ಸ್ವಗೌರವವನ್ನು ಹೆಚ್ಚಿಸಿದೆ. ತೆರಿಗೆ ಕ್ಷೇತ್ರದಲ್ಲಿ ತಂದ ಬಹುದೊಡ್ಡ ಸುಧಾರಣೆಯಾದ ಜಿಎಸ್‌ಟಿ ಸೇರಿದಂತೆ ಎನ್‌ಡಿಎ ಅವಧಿಯಲ್ಲಿ ಜಾರಿಗೆ ತರಲಾದ ಅಗಾ ಧ ಪ್ರಮಾಣದ ಅಭಿವೃದ್ಧಿ ಕಾರ‌್ಯಗಳು ದೇಶವನ್ನು ಮತ್ತೊಂದು ಮೈಲಿ ಗಲ್ಲಿಗೆ ತಲುಪಿಸಿವೆ.

ನಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ 1500 ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ಅಳಿಸಿಹಾಕಿದ್ದೇವೆ ಮತ್ತು ಭಾರತದ ಡಿಜಿಟಲ್ ಆರ್ಥಿಕತೆಯು 200 ಬಿಲಿಯನ್ ಡಾಲರ್ ತಲುಪಿದೆ. ಈ ವಿಕಾಸವನ್ನು ನೋಡಿ ಜನರು ಬಿಜೆಪಿಗೆ ಮತ ಹಾಕಿರುತ್ತಾರೆ.

ಆಂತರಿಕ ಭದ್ರತೆಯು ಪ್ರಚಾರದ ಪ್ರಮುಖ ವಿಷಯವಾಗುತ್ತಿದೆ. ಏಕೆ?

ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ಭಯೋತ್ಪಾದಕ ಕ್ಯಾಂಪ್ ಮೇಲೆ ಏರ್‌ಸ್ಟ್ರೈಕ್ ನಡೆಸುವುದು ಸರ್ಕಾರದ ಜವಾಬ್ದಾರಿ ಯಾಗಿತ್ತು. ರಾಷ್ಟ್ರೀಯ ಭದ್ರತೆ ಎನ್ನುವುದು ಪ್ರಮುಖ ವಿಚಾರ. ಪುಲ್ವಾಮಾ ದಾಳಿ ಬಳಿಕ ಸಶಸ್ತ್ರ ಪಡೆಗಳ ಧೈರ್ಯವನ್ನು ಕಾಂಗ್ರೆಸ್ ಪಕ್ಷ ಪ್ರಶ್ನೆ ಮಾಡುವ ಮೂಲಕ ಅವರಿಗೆ ಅವಮಾನ ಮಾಡಿತು. ಅನಂತರ ಆಂತರಿಕ ಭದ್ರತಾ ವಿಚಾರ ಪ್ರಮುಖ ವಿಷಯವಾಯಿತು.

ಬಿಜೆಪಿಯು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಕೋಟಾವನ್ನು ಕಸಿದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆಯಲ್ಲಾ?

ಹಿಂದುಳಿದ ವರ್ಗಗಳ ಆಯೋಗಕ್ಕೆ ಬಿಜೆಪಿಯು ಸಂವಿಧಾನಾತ್ಮಕ ಸ್ಥಾನಮಾನವನ್ನೇ ನೀಡಿದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಾಗಿ ಹಲ ವಾರು ಕಾರ‌್ಯಗಳನ್ನು ಕೈಗೊಂಡಿದ್ದೇವೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10 ರಷ್ಟು ಮೀಸಲಾತಿ ಕಲ್ಪಿಸಿದ್ದೇವೆ. ಕಾಂಗ್ರೆಸ್ ಸೇರಿ ದಂತೆ ವಿರೋಧ ಪಕ್ಷಗಳು ಸುಳ್ಳು ಭರವಸೆ ನೀಡುತ್ತಿವೆ.

ಚುನಾವಣಾ ಆಯೋಗ ಅವರ ನಿಷ್ಪ್ರಯೋಜಕ ಆರೋಪಗಳನ್ನು ರಂಜಿಸದಿದ್ದಾಗ ಅವರ ಪಾಲಿಗೆ ಚುನಾವಣಾ ಆಯೋಗವೇ ತಪ್ಪಾಗಿ ಕಾಣುತ್ತದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಅವರು ಗೆದ್ದಾಗ ವಿ ದ್ಯುನ್ಮಾನ ಮತ ಯಂತ್ರದಲ್ಲಿ ಯಾವುದೇ ದೋಷ ಇರಲಿಲ್ಲ.

ಅವರು ಸೋತಾಗ ಮಾತ್ರ ಇವಿಎಂಗಳಲ್ಲಿ ದೋಷ ಕಾಣಿಸುತ್ತದೆ. ವಿಶೇಷ ಎಂದರೆ, ಈ ಬಾರಿ ಲೋಕಸಭಾ ಚುನಾವಣೆ ಮುಗಿಯುವ ಮುನ್ನವೇ ಇವಿಎಂ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಎನ್‌ಡಿಎ ಎನ್ನುವುದು ರಾಜಕೀಯ ಮೈತ್ರಿ ಅಲ್ಲ, ಅದೊಂದು ಸಾಮಾಜಿಕ ಮೈತ್ರಿ.

ಚಂದ್ರಬಾಬು ನಾಯ್ಡು ಅವರು ತೃತೀಯ ರಂಗ ರಚಿಸಲು ಪ್ರಯತ್ನಿಸುತ್ತಿದ್ದಾರೆ.

ನಾಯ್ಡು ಅವರು ಹಗಲುಗನಸು ಕಾಣುತ್ತಿದ್ದಾರೆ. ಅವರ ರಾಜ್ಯ ದಲ್ಲೇ ಅವರ ಪಕ್ಷಕ್ಕೆ ಸೋಲುವ ಭೀತಿ ಇದೆ. ಮೇ 23 ಕ್ಕೆ ಜನರೇ ಅವರನ್ನು ಹೊರ ಹಾಕುತ್ತಾರೆ.

ಪ್ರಧಾನಿ ಮೋದಿ ಈ ಚುನಾವಣೆಯನ್ನು ಅಧ್ಯಕ್ಷೀಯ ಚುನಾವಣೆಯಂತೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆಯಲ್ಲಾ?

ಇದು ಕೇವಲ ಒಂದು ಕುಟುಂಬದ ಆರೋಪ. ಯಾವಾಗ ಅಣ್ಣ (ರಾಹುಲ್ ಗಾಂಧಿ) ಸೋತರೋ ಅವರ ತಂಗಿ ಬರುತ್ತಾರೆ. ಅದೂ ಸಾಕಾಗದೆ ಈಗ ಅಕ್ಕನ ಗಂಡ (ರಾಬರ್ಟ್ ವಾದ್ರಾ) ಕೂಡ ಬರುವ ಸೂಚನೆ ನೀಡುತ್ತಿದ್ದಾರೆ. ಅವರೆಲ್ಲರ ಅಜೆಂಡಾ ಒಂದೇ- ಮೋದಿ ಹಟಾವೋ (ಮೋದಿಯನ್ನು ತೊಲಗಿಸುವುದು)

 ‘ನ್ಯಾಯ್’(ಕನಿಷ್ಠ ಆದಾಯ ಯೋಜನೆ) ಗೇಮ್ ಚೇಂಜರ್ ಆಗಲಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ.

ಜವಾಹರ್ ಲಾಲ್ ನೆಹರೂ ಅವರ ಅಧಿಕಾರಾವಧಿಯನ್ನು ಹೊರಗಿಟ್ಟರೂ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು 10 ವರ್ಷದ ಮನಮೋಹನ್ ಸಿಂಗ್ ಅವರ ಆಡಳಿತ ಸೇರಿದರೆ ಕಾಂಗ್ರೆಸ್ ಸುಮಾರು 23 ವರ್ಷಗಳ ಕಾಲ ದೇಶವನ್ನು ಆಳಿದೆ. 10 ವರ್ಷ ಇದೇ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸರ್ಕಾರದ ಪ್ರಮುಖ ಭಾಗವಾಗಿದ್ದರು.

ಈ 23 ವರ್ಷ ಅವರೇನು ಮಾಡಿದರು? ‘ಗರೀಬಿ ಹಟಾವೋ’ ಘೋಷಣೆ ಏನಾಯಿತು? ಈ ಅನ್ಯಾಯಕ್ಕೆ ಹೊಣೆ ಯಾರು ಅವರೇ ಉತ್ತರಿಸಬೇಕು. ನಾವು ಉಜ್ವಲಾ ಯೋಜನೆ ಪ್ರಾರಂಭಿಸಿದೆವು. ಅತಿ ವೇಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ‌್ಯಗಳು ನಡೆದವು. ಆಯುಷ್ಮಾನ್ ಭಾರತ್ ಯೋಜನೆಯಿಂದ ಹಿಡಿದು ನೇರ ನಗದು ವರ್ಗಾವಣೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಡಿಜಿಟ ಲೀಕರಣ ಯೋಜನೆಗಳು ದೇಶವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 

ಕಾಂಗ್ರೆಸ್ ನಿಮ್ಮ ವಿರುದ್ಧ ಎರಡು ಬಾರಿ ಸಂಸದರಾದ ಶತೃಘ್ನ ಸಿನ್ಹಾ ಅವರನ್ನು ಕಣಕ್ಕಿಳಿಸಿದೆ.

ಮೂರನೇ ತರಗತಿ ಓದುತ್ತಿದ್ದಾಗಿಂತಲೂ ನಾನು ಸ್ವಯಂಸೇವಕನಾಗಿದ್ದೆ. ಸುಮಾರು 8 ರಾಜ್ಯಗಳಲ್ಲಿ ಪಕ್ಷದ ಮುಖ್ಯಸ್ಥನಾಗಿ ಕೆಲಸ ಮಾಡಿದ್ದೇನೆ. ನಾನೊಬ್ಬ ರಾಜಸಭಾಸ ಸದಸ್ಯನಾಗಿ ಲೋಕಸಭಾ ಸಂಸದರಿ ಗಿಂತಲೂ ಹೆಚ್ಚು ಕ್ರಿಯಾಶೀಲನಾಗಿದ್ದೇನೆ. ಈ ಕ್ಷೇತ್ರವು ಬಿಜೆಪಿಯ ಸಾಂಪ್ರದಾಯಿಕ ಭದ್ರಕೋಟೆ.

ಅಲ್ಲದೆ ಪಟನಾದ 150 ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಜನರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬ ಬಯಕೆ ಇದೆ. ಕೇಂದ್ರದಲ್ಲಿ ನಾನು ಮಂತ್ರಿಯಾಗಿರಬಹುದು. ಆದರೆ ಬಿಹಾರದ ಪಟನಾದಲ್ಲಿ ನಾನೊಬ್ಬ ಪಕ್ಷದ ಸಾಮಾನ್ಯ ಕಾರ‌್ಯಕರ್ತ. ಈ ಬಾರಿ ನನಗೆ ಐತಿಹಾಸಿಕ ಗೆಲವು ಲಭಿಸಲಿದೆ. ನಾನು ಅಲ್ಲಿನ ಜನರ ಧ್ವನಿಯಾಗುತ್ತೇನೆ.

1987 ರ ರಾಜೀವ್ ಗಾಂಧಿ ಹಾಲಿ ಡೇ ಟ್ರಿಪ್ ವಿಷಯ ಈಗ ಏಕೆ? ಪ್ರಸ್ತುತ ಸನ್ನಿವೇಶಕ್ಕೂ ಅದಕ್ಕೂ ಏನು ಸಂಬಂಧ?

ಸಂಬಂಧ ಇದೆ. ರಾಜಕೀಯ ಅರ್ಹತೆ ಕುರಿತ ಚರ್ಚೆ ನಡೆಯಲಿ ಎಂದರೆ, ಪ್ರಧಾನಿ ವಿರುದ್ಧ ‘ಗಾಲಿ’ ಪಾಲಿಟಿಕ್ಸ್ ಮಾಡಲಾಗುತ್ತಿದೆ. ಕಾಂಗ್ರೆಸ್ ಸಾಕ್ಷಿಯೇ ಇಲ್ಲದೆ ಪ್ರಧಾನ ಮಂತ್ರಿಯನ್ನು ‘ಚೋರ್’ ಎಂದು ಆಕ್ರಮಣ ಮಾಡುತ್ತಿದೆ. ಆದರೆ ದೇಶದ ಸಂಪನ್ಮೂಲವನ್ನು ಕಾಂಗ್ರೆಸ್ ದುರುಪಯೋಗ ಪಡಿಸಿಕೊಳ್ಳುತ್ತಿರುವಾಗ ಅದನ್ನು ಪ್ರಶ್ನೆ ಮಾಡಬಾರದೆ? ಯುದ್ಧನೌಕೆಯನ್ನು ವೈಯಕ್ತಿಕ ಟ್ರಿಪ್‌ಗೆ ಏಕೆ ಬಳಸಿಕೊಳ್ಳಬೇಕಿತ್ತು? ಹಾಲಿ ಡೇ ಕಳೆಯಲು ಟ್ರಿಪ್ ಹೋಗಲು ಏನೂ ಸಮಸ್ಯೆ ಇಲ್ಲ. ಆದರೆ ಸೇನಾ ನೌಕೆ ಬಳಕೆ ಮಾಡಿಕೊಂಡಿದ್ದು ಏಕೆ? ಇದು ರಾಷ್ಟ್ರೀಯ ಭದ್ರತೆಯೊಂದಿಗೆ ಮಾಡಿಕೊಂಡ ರಾಜಿಯಲ್ಲವೇ?

ಜಿಡಿಪಿ ಬೆಳವಣಿಗೆ ತಗ್ಗಿದೆ, ಉದ್ಯೋಗ ನಿರ‌್ಮಾಣ ಕುಗ್ಗುತ್ತಿದೆ. ಬಿಹಾರದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ.

ಭಾರತದ ಆರ್ಥಿಕತೆ ವಿಶ್ವದಲ್ಲೇ ಅತಿ ವೇಗದಲ್ಲಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಾಗಿದೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ೨ನೇ ಸ್ಥಾನ ಪಡೆದಿದೆ. ಮುದ್ರಾ ಯೋಜನೆಯಡಿ 15 ಕೊಟಿ ಭಾರತೀಯರಿಗೆ 7 ಕೋಟಿ ರು. ನೀಡಲಾಗಿದೆ.

ಅದರಲ್ಲಿ 4-5 ಕೋಟಿ ಉದ್ಯಮಿಗಳು ಹೊಸಬರು. ಸಿಐಐ ಅಂಕಿಅಂಶಗಳ ಪ್ರಕಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ 3 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಎನ್‌ಎಎಸ್‌ಎಸ್‌ಸಿಒಎಂ(ನಾಸ್‌ಕಾಂ) ವರದಿ ಪ್ರಕಾರ ಐಟಿ ಕ್ಷೇತ್ರದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ.

ಆದರೆ ಉದ್ಯೋಗ ಕುರಿತ ದತ್ತಾಂಶಗಳು ಮತ್ತು ರಫೇಲ್ ಕುರಿತ ಸಾಕ್ಷ್ಯಾಧಾರಗಳನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದೆ. ಬಿಜೆಪಿ ಪಾರದರ್ಶಕತೆಗೆ ವಿರುದ್ಧವಾಗಿದೆ ಎನ್ನಲಾಗುತ್ತಿದೆಯಲ್ಲಾ?

ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಕುರಿತ ದತ್ತಾಂಶವನ್ನು ಪಾರ್ಲಿಮೆಂಟ್‌ನಲ್ಲಿಯೇ ಬಹಿರಂಗಪಡಿಸಿದ್ದಾರೆ. ನಾಸ್‌ಕಾಂ ವರದಿ ನೋಡಿ, ಅಲ್ಲಿ ಐಟಿ ಕ್ಷೇತ್ರದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂಬ ಸ್ಪಷ್ಟ ಮಾಹಿತಿ ಇದೆ.

ಪಟನಾವೊಂದರಲ್ಲಿಯೇ 8 ಬಿಪಿಒಗಳು ಲೋಕಾರ್ಪಣೆಗೊಂಡಿವೆ. ಕೆಲವರಿಗೆ ಸತ್ಯ ಕಣ್ಣಿಗೆ ಕಾಣುತ್ತಿಲ್ಲ. ನಾಸ್ ಕಾಂ, ಸಿಐಐ,ಇಪಿಎಫ್‌ಒ ದತ್ತಾಂಶಗಳು ಲಭ್ಯವಿವೆ. ಮುದ್ರಾ ಯೋಜನೆಯ ದಾಖಲೆಗಳಿವೆ. ಆದರೆ ಅದನ್ನು ಪರಿಗಣನೆಗೇ ತೆಗೆದುಕೊಳ್ಳುತ್ತಿಲ್ಲ.

ಇನ್ನು ರಫೇಲ್ ವಿಚಾರವನ್ನು ಬಹಿರಂಗಪಡಿಸಿ ನಮ್ಮ ಸಾಮರ್ಥ್ಯ, ಗೌಪ್ಯತೆಯನ್ನು ಪಾಕ್‌ಗೆ ಬಿಟ್ಟುಕೊಡಬೇಕೇ? ಭದ್ರತಾ ವಿಷಯದಲ್ಲಿ ಸೂಕ್ಷ್ಮತೆ ಇರಬೇಕು. ಚೀನಾ, ಪಾಕಿಸ್ತಾನಕ್ಕೆ ನಾವೇನು ಕೊಂಡುಕೊಂಡಿದ್ದೇವೆಂದು ತಿಳಿಯಬಾರದು.