ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ರವಿಶಂಕರ್ ಗುರೂಜಿ ಮಧ್ಯಸ್ಥಿಕೆಗೆ ಧರ್ಮ ಸಂಸದ್ ನಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಳೆ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ರವಿಶಂಕರ್ ಗುರೂಜಿ ಭಾಗಿಯಾಗಿವುದು ಅನುಮಾನವಾಗಿದೆ.
ಬೆಂಗಳೂರು (ನ.25): ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ರವಿಶಂಕರ್ ಗುರೂಜಿ ಮಧ್ಯಸ್ಥಿಕೆಗೆ ಧರ್ಮ ಸಂಸದ್ ನಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಳೆ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ರವಿಶಂಕರ್ ಗುರೂಜಿ ಭಾಗಿಯಾಗಿವುದು ಅನುಮಾನವಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಮಧ್ಯಸ್ಥಿಕೆಗೆ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಇಂದಿನ ಮಂಗಳೂರಿನ ಕಾರ್ಯಕ್ರಮವನ್ನು ರವಿಶಂಕರ್ ಗುರೂಜಿ ರದ್ದುಗೊಳಿಸಿದ್ದಾರೆ. ನಾಳೆಯ ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ರವಿಶಂಕರ್ ಗುರೂಜಿ ಭಾಗಿ ನಿಗದಿಯಾಗಿತ್ತು. ಸಾಧು- ಸಂತರ ವಿರೋಧ ಹಿನ್ನೆಲೆಯಲ್ಲಿ ರವಿಶಂಕರ್ ಗುರೂಜಿ ಭೇಟಿ ಅನುಮಾನವಾಗಿದೆ. ಶ್ರೀ ಶ್ರೀಗಳು ಧರ್ಮ ಸಂಸದ್ -ಹಿಂದೂ ಸಮಾಜೋತ್ಸವದಿಂದ ಅಂತರ ಕಾಯ್ದುಕೊಂಡಿದ್ದಾರೆ. ಮುಖಭಂಗ ತಪ್ಪಿಸಿಕೊಳ್ಳಲು ಕಾರ್ಯಕ್ರಮದಿಂದ ದೂರ ಉಳಿಯುವ ನಿರ್ಧಾರವೇ ಎಂಬ ಪ್ರಶ್ನೆ ಉದ್ಭವವಾಗಿದೆ.
ರವಿಶಂಕರ್ ಗುರೂಜಿ ರಾಮಮಂದಿರ ಆಂದೋಲನದ ಭಾಗವಾಗಿರಲಿಲ್ಲ ಎಂಬ ಆರೋಪ ನಿನ್ನೆ ನಡೆದ ಧರ್ಮ ಸಂಸದ್ ಗೋಷ್ಠಿಗಳಲ್ಲಿ ಕೇಳಿ ಬಂದಿತ್ತು.
