ತಾವೇ ಬೆಂಬಲಿಸಿದ ಹಿಂಸೆಗೆ ಪತ್ರಕರ್ತೆ ಗೌರಿ ಲಂಕೇಶ್ ಬಲಿಯಾದರು ಎಂದು ಪತ್ರಿಕೋದ್ಯಮ ಉಪನ್ಯಾಸಕ ರವೀಂದ್ರ ರೇಷ್ಮೆ ವ್ಯಾಖ್ಯಾನಿಸಿದ್ದಾರೆ.
ಮೂಡುಬಿದಿರೆ: ತಾವೇ ಬೆಂಬಲಿಸಿದ ಹಿಂಸೆಗೆ ಪತ್ರಕರ್ತೆ ಗೌರಿ ಲಂಕೇಶ್ ಬಲಿಯಾದರು ಎಂದು ಪತ್ರಿಕೋದ್ಯಮ ಉಪನ್ಯಾಸಕ ರವೀಂದ್ರ ರೇಷ್ಮೆ ವ್ಯಾಖ್ಯಾನಿಸಿದ್ದಾರೆ.
ನುಡಿಸಿರಿಯಲ್ಲಿ ಭಾಗವಹಿಸಿ ಮಾತನಾಡಿದ ರೇಷ್ಮೆ, 2005ರಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಪೊಲೀಸರಿಂದ ಹತ್ಯೆಯಾದಾಗ ಗೌರಿ ಲಂಕೇಶ್ ಬಹಳ ಸಂಕಟಪಟ್ಟಿದ್ದರು. ಈ ಹತ್ಯೆಗೆ ಪ್ರತೀಕಾರವಾಗಿ ನಕ್ಸಲರು ಪಾವಗಡದಲ್ಲಿ ಪೊಲೀಸರ ಕೊಂದು ಹಾಕಿದಾಗ ನಕ್ಸಲರ ಬೆಂಬಲಿಸಿದ್ದರು. ಆದರೆ 12 ವರ್ಷಗಳ ನಂತರ ಗೌರಿ ಅಂತಹದ್ದೇ ಹಿಂಸೆಗೆ ಬಲಿಯಾದರು ಎಂದರು.
