ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ, ಹಳೇ ದ್ವೇಷಕ್ಕೆ ತಂದೆ ಬಲಿಪಶು, ಕಣ್ಣೀರಿಟ್ಟ ಉನ್ನಾವೋ ಕೇಸ್ ಆರೋಪಿ ಪುತ್ರಿ, ಐಶ್ವರ್ಯ ಸೆನೆಗರ್ ಮಾಧ್ಯಮದ ಮುಂದೆ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ಒಂದೇ ಒಂದು ಸಾಕ್ಷ್ಯ ನೀಡಲಿ ಸಾಕು ಎಂದಿದ್ದಾರೆ.
ಉನ್ನಾವೋ (ಡಿ.29) ಉನ್ನಾವೋ ರೇP ಪ್ರಕರಣ ಇದೀಗ ಭಾರಿ ಚರ್ಚೆಯಾಗುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಮಾಜಿ ಶಾಸಕ ಕುಲ್ದೀಪ್ ಸಿಂಗ್ ಸೆನೆಗರ್‌ಗೆ ಹೈಕೋರ್ಟ್ ಜಾಮೀನು ನೀಡಿತ್ತು. ಭಾರಿ ಪ್ರತಿಭಟನೆ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಜಾಮೀನು ಆದೇಶಕ್ಕೆ ತಡೆ ನೀಡಿದೆ. ಮತ್ತೊಂದೆಡೆ ಆರೋಪಿಗೆ ಗಲ್ಲು ಶಿಕ್ಷೆ ವರೆಗೂ ಹೋರಾಟ ನಡೆಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಈ ಬೆಳವಣಿಗೆ ನಡುವೆ ಪ್ರಕರಣದ ಆರೋಪಿ ಕುಲ್ದೀಪ್ ಸಿಂಗ್ ಸೆನೆಗರ್ ಪುತ್ರಿ ಐಶ್ವರ್ಯ ಸೆನೆಗರ್ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ನನ್ನ ತಂದೆ ಒಂದು ತಪ್ಪು ಮಾಡಿದ್ದರೂ ಗಲ್ಲಿಗೇರಿಸಿ. ಆದರೆ ಪ್ರಕರಣ ಸಂತ್ರಸ್ತೆ ಎಂದು ಹೇಳಿರುವ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ಹಳೇ ದ್ವೇಷವಿದೆ. ಇದೇ ಕಾರಣದಿಂದ ನನ್ನ ತಂದೆ ಬಲಿಪಶುವಾಗಿದ್ದಾರೆ ಎಂದು ಐಶ್ವರ್ಯ ಸೆನೆಗರ್ ಹೇಳಿದ್ದಾರೆ.
ಸಂತ್ರಸ್ತೆ ಆರೋಪದಲ್ಲಿ ಸ್ಪಷ್ಟತೆ ಇಲ್ಲ
ನನ್ನ ತಂದೆ ಈ ತಪ್ಪು ಮಾಡಿಲ್ಲ. ಸಂತ್ರಸ್ತೆ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ಇರುವ ಹಳೇ ದ್ವೇಷದಿಂದ ತಂದೆ ಇದೀಗ ನರಕ ಅನುಭವಿಸುವಂತಾಗಿದೆ. ಘಟನೆ ಕುರಿತು ಸಂತ್ರಸ್ತೆ ಮೂರು ಬಾರಿ ಸಮಯ ಬದಲಿಸಿ ಹೇಳಿಕೆ ನೀಡಿದ್ದಾರೆ. ಘಟನೆ ನಡೆದಿದ್ದು ಮೊದಲು ಮಧ್ಯಾಹ್ನ ಎಂದಿದ್ರು. ಬಳಿಕ ಸಂಜೆ, ನಂತ್ರ ರಾತ್ರಿ ಎಂದಿದ್ರು. ಕೊನೆಗೆ ದೂರಿನಲ್ಲಿ ಸಂಜೆ ಎಂದು ಉಲ್ಲೇಖಿಸಿದ್ದಾರೆ. ನನ್ನ ತಂದೆ ಈ ಸಮಯದಲ್ಲಿ ಎಲ್ಲಿದ್ದರೂ ಘಟನಾ ಸ್ಥಳದಿಂದ ಎಷ್ಟು ದೂರದಲ್ಲಿದ್ದರು ಅನ್ನೋದಕ್ಕೆ ಸಾಕ್ಷ್ಯಗಳಿವೆ. ಫೋನ್‌ನಲ್ಲಿ ಮಾತಾಡಿದ ದಾಖಲೆ ಇದೆ. ಲೋಕೇಶನ್ ಇದೆ. ಎಲ್ಲಾ ದಾಖಲೆಗಳು ನಮ್ಮಲ್ಲಿದೆ. ನಮ್ಮ ಮಾತನ್ನು ಕನಿಷ್ಠ ಕೇಳಿ ಎಂದು ಐಶ್ವರ್ಯ ಸೆನೆಗರ್ ಮನವಿ ಮಾಡಿದ್ದಾರೆ.
ಆರೋಪ ಮಾಡುವಂತೆ ಯಾವುದೇ ಒಂದು ದಾಖಲೆ ಇದ್ದರೆ ಗಲ್ಲಿಗೇರಿಸಿ
ಸಂತ್ರಸ್ತೆ ಹಾಗೂ ಆಕೆಯ ಪರವಾಗಿ ಆರೋಪ ಮಾಡುವವರು ಭಾವನಾತ್ಮಕವಾಗಿ ಈ ವಿಚಾರವನ್ನು ದೇಶದ ಮುಂದಿಟ್ಟಿದ್ದಾರೆ. ಆದರೆ ಸತ್ಯಗಳು ಯಾರಿಗೂ ಬೇಡವಾಗಿದೆ. ತಂದೆ ಈ ಪ್ರಕರಣದ ಆರೋಪಿ ಎನ್ನಲು ಒಂದು ಸಾಕ್ಷ್ಯ, ದಾಖಲೆ ಏನಾದರೂ ನೀಡಲಿ. ಇದ್ದರೆ ಗಲ್ಲಿಗೇರಿಸಲಿ. ಆದರೆ ಯಾವುದೇ ದಾಖಲೆ ಇಲ್ಲ, ಸಾಕ್ಷ್ಯ ಇಲ್ಲ. ತಂದೆ ಮೇಲೆ ವಿನಾಕಾರಣ ಆರೋಪ ಮಾಡಿ ಸುಲುಕಿಸಿದ್ದಾರೆ ಎಂದು ಐಶ್ವರ್ಯ ಸೆನೆಗೆರ್ ಹೇಳಿದ್ದಾರೆ.
2 ತಿಂಗಳ ಬಳಿ ತಂದೆ ವಿರುದ್ದ ದೂರುು
ಘಟನೆ ಬಳಿಕ ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ಎರಡೂವರೆ ತಿಂಗಳ ಬಳಿಕ ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ತಂದೆ ಹೆಸರು ಸೇರಿಸಿ ಪ್ರಕರಣಕ್ಕೆ ತಿರುವು ನೀಡಿದ್ದಾರೆ. ನನ್ನ ತಂದೆ ಸಂತ್ರಸ್ತೆಯನ್ನು ಕೆಟ್ಟ ದೃಷ್ಟಿಯಿಂದ ನೋಡಿದ್ದರೂ ನೀವು ಗಲ್ಲಿಗೇರಿಸಿ. ಆದರೆ ಸುಖಾಸುಮ್ಮನೆ ಆರೋಪ ಮಾಡಿ ಪ್ರಕರಣದಲ್ಲಿ ಸಿಲುಕಿಸಿದ್ದೀರಿ. ಪೋಕ್ಸೋ ಕೇಸ್ ದಾಖಲಿಸಿ ನಮ್ಮ ವಾದವನ್ನು ಆಲಿಸಲು ಅವಕಾಶವಲ್ಲದಂತೆ ಮಾಡಲಾಗಿದೆ. ಎಮ್ಸ್ ದಾಖಲೆ ಪ್ರಕರಾ ಘಟನೆ ವೇಳೆ ಸಂತ್ರಸ್ತೆ 18 ವರ್ಷಕ್ಕಿಂತ ಮೇಲ್ಪಟ್ಟಿದ್ದರು ಅನ್ನೋ ದಾಖಲೆ ಇದೆ. ಸಂತ್ರಸ್ತೆ ಹೇಳಿದ ಘಟನೆ ಸಮಯದಲ್ಲಿ ಆಕೆ ಫೋನ್ ಕರೆಯಲ್ಲಿರುವ ದಾಖಲೆ ಇದೆ ಎಂದು ಐಶ್ವರ್ಯ ಸೆನೆಗರ್ ಹೇಳಿದ್ದಾರೆ
ಕಳೆದ 8 ವರ್ಷದಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಬಹುತೇಕ ಸಂದರ್ಭದಲ್ಲಿ ನಮ್ಮ ವಾದವೇ ಆಲಿಸುತ್ತಿಲ್ಲ. ನಮ್ಮಲ್ಲಿರುವ ದಾಖಲೆ ಪರಿಶೀಲಿಸಿ. ಬಳಿಕ ನ್ಯಾಯ ಸಮ್ಮತ ತೀರ್ಪು ನೀಡಿ ಎಂದು ಸೆನೆಗರ್ ಪತ್ರಿ ಕಣ್ಣೀರಿಟ್ಟಿದ್ದಾರೆ. ಈ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿದೆ


