ರಾಜ್ಯದಲ್ಲಿ ಪಕ್ಷ ಕಟ್ಟುವುದು ಮತ್ತು ಪ್ರಚಾರಕ್ಕೆ ಪ್ರಮುಖ ಪಾತ್ರ ವಹಿಸಿರು ಇವರು ಆಮ್ ಆದ್ಮಿ ಪಕ್ಷದಿಂದ ಸಂಪೂರ್ಣವಾಗಿ ಹೊರ ಬಂದಿದ್ದಾರೆ.
ಬೆಂಗಳೂರು(ನ.19): ಕೆಲ ದಿನಗಳ ಹಿಂದೆ ಆಮ್ ಆದ್ಮಿ ಪಕ್ಷದಿಂದ ರಾಜ್ಯ ಸಂಚಾಲಕ ಹುದ್ದೆಯಿಂದ ಬಿಡುಗಡೆಯಾಗಿದದ ರವಿಕೃಷ್ಣಾರೆಡ್ಡಿ, ಪಕ್ಷದ ಪ್ರಾರ್ಥಮಿಕ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಪಕ್ಷ ಕಟ್ಟುವುದು ಮತ್ತು ಪ್ರಚಾರಕ್ಕೆ ಪ್ರಮುಖ ಪಾತ್ರ ವಹಿಸಿರು ಇವರು ಆಮ್ ಆದ್ಮಿ ಪಕ್ಷದಿಂದ ಸಂಪೂರ್ಣವಾಗಿ ಹೊರ ಬಂದಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಪಕ್ಷ ಬೆಳೆಸುವ ಉದ್ದೇಶ ರಾಷ್ಟ್ರ ಸಮಿತಿಗೂ ಇಲ್ಲ. ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿರುವ ನಾಯಕರಿಗೆ ಆ ಬಗ್ಗೆ ಆಸಕ್ತಿ ಇಲ್ಲ. ಇದರಿಂದಾಗಿ ಪಕ್ಷ ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಇತ್ತೀಚಿನ ಕೆಲವು ನಿರ್ಧಾರಗಳು ಪಕ್ಷದ ಮೂಲಭೂತ ಉದ್ದೇಶಗಳಿಂದ ದೂರವಾಗುತ್ತಿದೆ. ಜತೆಗೆ ಜನರಿಂದಲೂ ದೂರವಾಗುತ್ತದೆ ಎಂಬ ಆತಂಕ ಪಕ್ಷದ ಕಾರ್ಯಕರ್ತರಲ್ಲಿ ಮೂಡಿದೆ. ಹಾಗಾಗಿ ಅತ್ಯಂತ ನೋವಿನಿಂದ ಪಕ್ಷ ಪ್ರಾರ್ಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.
