ಇಬ್ಬರ ಶೂರಿಟಿ ಹಾಗೂ 1 ಲಕ್ಷ ರೂ. ಬಾಂಡ್'ನೊಂದಿಗೆ ಜಮೀನು ನೀಡಲಾಗಿದ್ದು, ಸಾಕ್ಷಿ ನಾಶಪಡಿಸದಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಬೆಂಗಳೂರು(ಡಿ.13): ಸಹೋದ್ಯೋಗಿಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆಗೆ ಸಿವಿಲ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನಾರೋಗ್ಯವಿರುವದರಿಂದ ಚಿಕಿತ್ಸೆ ಅಗತ್ಯವಿದ್ದು ಜಾಮೀನು ನೀಡಬೇಕೆಂದು ಬೆಳಗೆರೆ ಪರ ವಕೀಲರಾದ ದಿವಾಕರ್ ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟ ನಂತರ ಜಾಮೀನು ನೀಡಲಾಗಿದೆ.

ಇಬ್ಬರ ಶೂರಿಟಿ ಹಾಗೂ 1 ಲಕ್ಷ ರೂ. ಬಾಂಡ್'ನೊಂದಿಗೆ ಜಮೀನು ನೀಡಲಾಗಿದ್ದು, ಸಾಕ್ಷಿ ನಾಶಪಡಿಸದಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಜಾಮೀನು ಅವಧಿ ಡಿ.16 ಅಂದರೆ 3 ಅವಧಿಗಳ ಕಾಲ ಅನ್ವಯವಾಗಲಿದೆ.