ಪತ್ರಕರ್ತ ರವಿ ಬೆಳಗೆರೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸ್ ಕಸ್ಟಡಿ ಅವಧಿ ನಾಳೆಗೆ ಅಂತ್ಯವಾಗಲಿದ್ದು, ನಾಳೆ ನ್ಯಾಯಾಧೀಶರ ಮುಂದೆ ರವಿ ಬೆಳಗೆರೆ ಹಾಜರು ಪಡಿಸಲಾಗುತ್ತದೆ. ರವಿ ಬೆಳಗೆರೆಯನ್ನು ಮತ್ತೆ ಕಸ್ಟಡಿಗೆ ನೀಡಲು ಈ ವೇಳೆ ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಮನವಿ ಮಾಡುವ ಸಾಧ್ಯತೆಗಳಿದೆ.
ಬೆಂಗಳೂರು(ಡಿ.10): ಪತ್ರಕರ್ತ ರವಿ ಬೆಳಗೆರೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸ್ ಕಸ್ಟಡಿ ಅವಧಿ ನಾಳೆಗೆ ಅಂತ್ಯವಾಗಲಿದ್ದು, ನಾಳೆ ನ್ಯಾಯಾಧೀಶರ ಮುಂದೆ ರವಿ ಬೆಳಗೆರೆ ಹಾಜರು ಪಡಿಸಲಾಗುತ್ತದೆ. ರವಿ ಬೆಳಗೆರೆಯನ್ನು ಮತ್ತೆ ಕಸ್ಟಡಿಗೆ ನೀಡಲು ಈ ವೇಳೆ ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಮನವಿ ಮಾಡುವ ಸಾಧ್ಯತೆಗಳಿದೆ.
ಇನ್ನು ಇದೇ ವೇಳೆ ಸುಪಾರಿ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ವಿಜು ಬಡಿಗೇರ್'ಗಾಗಿ ಪೊಲೀಸರು ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜು ಬಡಿಗೇರ್ ಅತ್ಯವಶ್ಯಕ ವ್ಯಕ್ತಿಯಾಗಿದ್ದು, ಶಶಿಧರ್ ಬಂಧನದ ನಂತರ ವಿಜು ಬಡಿಗೇರ್'ಗಾಗಿ ಸತತವಾಗಿ ಹುಡುಕಾಟ ನಡೆಸಲಾಗುತ್ತಿದೆ.
ಸುನಿಲ್ ಹೆಗ್ಗರವಳ್ಳಿ ಕೊಲ್ಲಲು ಶಶಿಧರ್ ಜೊತೆ ಬಡಿಗೇರ್ ಕೂಡ ತೆರಳಿದ್ದರು ಎನ್ನಲಾಗಿದ್ದು, ಮುಂದಿನ ತನಿಖೆ ನಡೆಸಲು ವಿಜು ಅವಶ್ಯಕತೆ ಹೆಚ್ಚಿದೆ. ಬಡಿಗೇರ್ ಸಿಕ್ಕ ನಂತರವಷ್ಟೇ ತನಿಖೆಗೆ ವೇಗ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ವಿಜು ಬಡಿಗೇರ್ ಗಾಗಿ ಉತ್ತರ ಕರ್ನಾಟಕದಲ್ಲಿ ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
