ರವಿ ಬೆಳಗೆರೆ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪರ ವಕೀಲರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು (ಡಿ.08): ರವಿ ಬೆಳಗೆರೆ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪರ ವಕೀಲರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಕರಣದ ಎಲ್ಲಾ ಅಂಶಗಳು ಕೂಡಾ ಸತ್ಯಕ್ಕೆ ದೂರವಾಗಿದ್ದು. ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ತನಿಖೆಗೆ ಎಲ್ಲಾ ಸಹಕಾರವನ್ನು ರವಿ ಬೆಳಗೆರೆ ಣೀಡುತ್ತಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸವಿದೆ. ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆಯಿದೆ. ಅವರು ನಡೆಸುವ ಎಲ್ಲಾ ವಿಚಾರಣೆ. ತನಿಖೆಗೆ ಸಹಕರಿಸಲು ರವಿ ಬೆಳಗೆರೆಯವರು ಸಿದ್ಧರಿದ್ದಾರೆ ಎಂದು ರವಿ ಬೆಳಗೆರೆ ಪರ ವಕೀಲರು ಹೇಳಿದ್ದಾರೆ.
ರವಿ ಬೆಳಗೆರೆಯನ್ನು ನ್ಯಾಯಾಲಯಕ್ಕೆ ಇನ್ನು ಕೆಲವೇ ಕ್ಷಣಗಳಲ್ಲಿ ಹಾಜರುಪಡಿಸಲು ಸಿಸಿಬಿ ಪೊಲೀಸರು ಕರೆದೊಯ್ದಿದ್ದಾರೆ. ಅವರ ಜೊತೆ ಪುತ್ರಿ ಚೇತನಾ ಬೆಳಗೆರೆ ಇದ್ದಾರೆ.
