Me Too ಎಲ್ಲೆಡೆ ಜೋರಾಗಿ ಸದ್ದು ಮಾಡುತ್ತಿದೆ. ಬಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್ ಗಳಲ್ಲಿಯೂ ಕೂಡ ನಟಿಯರು ತಮಗಾದ ಕರಾಳ ಅನುಭವಗಳನ್ನು ಬಿಚ್ಚಿಡುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ನಟಿ ರಶ್ಮಿಕಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಬೊಮ್ಮನಹಳ್ಳಿ: ಇತ್ತೀಚೆಗೆ ಭಾರಿ ಸುದ್ದಿಯಾಗಿರುವ ಮೀ ಟೂ ಅಭಿಯಾನದ ಬಗ್ಗೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯ ಖಾಸಗಿ ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀ ಟೂ ಅಭಿಯಾನದಿಂದಾಗಿಯೇ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮೀ ಟೂ ಅಭಿಯಾನದಿಂದ ಎಲ್ಲರೂ ಅವರ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಇದರಿಂದ ತುಂಬ ಖುಷಿ ಆಗುತ್ತಿದೆ ಎಂದು ತಿಳಿಸಿದರು.

ನಟ ಅರ್ಜುನ್‌ ಸರ್ಜಾ ಹಾಗೂ ನಟಿ ಶೃತಿ ಹರಿಹರನ್‌ ವಿವಾದದ ಬಗ್ಗೆ ಪ್ರಶ್ನಿಸಿದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅರ್ಜುನ್‌ ಸರ್ಜಾ - ಶೃತಿ ಪ್ರಕರಣ ನಾನೇನು ಹೇಳಲಿ ಎಂದು ನುಣುಚಿಕೊಂಡರು.