ಮಿತಿ ಮೀರಿದ ವೇಗ ಹಾಗೂ ನಿರ್ಲಕ್ಷ್ಯ ಚಾಲನೆಗೆ ಕಠಿಣ ಶಿಕ್ಷೆ ನೀಡುವ ಹಾಗೆ ಕಾಯ್ದೆಯನ್ನು ತಿದ್ದುಪಡಿ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ತಾಕೀತು ಮಾಡಿದೆ.

ನವದೆಹಲಿ (ಡಿ.06): ಮಿತಿ ಮೀರಿದ ವೇಗದ ವಾಹನ ಚಾಲನೆಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್ ಚಿಂತನೆ ನಡೆಸಿದೆ. 

ಮಿತಿ ಮೀರಿದ ವೇಗ ಹಾಗೂ ನಿರ್ಲಕ್ಷ್ಯ ಚಾಲನೆಗೆ ಕಠಿಣ ಶಿಕ್ಷೆ ನೀಡುವ ಹಾಗೆ ಕಾಯ್ದೆಯನ್ನು ತಿದ್ದುಪಡಿ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ತಾಕೀತು ಮಾಡಿದೆ.

“ ದುಡುಕು ವಾಹನ ಚಾಲನೆಯಿಂದ ರಸ್ತೆ ಅಪಘಾತಗಳಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ. ವಾಹನ ಚಾಲಕರಿಗೆ ಕಾನೂನಿನ ಭಯವಿಲ್ಲದಂತಾಗಿದೆ. ಇಂತವರಿಗೆ ಕಾನೂನಿನ ಭಯ ಹುಟ್ಟಿಸುವ ಅಗತ್ಯವಿದೆ" ಎಂದು ನ್ಯಾ. ದೀಪಕ್ ಮಿಶ್ರಾ ಅಧ್ಯಕ್ಷೀಯ ಪೀಠ ಅಭಿಪ್ರಾಯಪಟ್ಟಿದೆ.

ಭಾರತದಲ್ಲಿ ದಿನವೊಂದಕ್ಕೆ 400 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವುದಕ್ಕೆ ಸುಪ್ರೀಂ ಕಳವಳ ವ್ಯಕ್ತಪಡಿಸಿದೆ.