ಬೆಂಗಳೂರು, [ನ.02]: ಕೊಡಗಿನ ಪ್ರವಾಹ ಸಂತ್ರಸ್ತರ ನೆರವಿಗಾಗಿ ಈಗಾಗಲೇ ಸಾವಿರಾರೂ ಮನಗಳು ಮಿಡಿದಿವೆ.

ಮೆಡಿಕಲ್ ಕಿಟ್ ಅಭಿಯಾನ, ಗ್ಯಾಸ್ ಗೀಸರ್ ಅಭಿಯಾನ, ಇ-ಟಾಯ್ಲೆಟ್ ಅಭಿಯಾನ ಸೇರಿಂದತೆ ಇನ್ನು ಹಲವು ಅಭಿಯಾನಗಳು ಕೊಡಗಿನ ಮರು ನಿಮಾರ್ಣದ ಹಾದಿಗೆ ಮುನ್ನುಡಿ ಬರೆದಿವೆ.

ಇದೀಗ ಕೊಡಗಿನೆಡೆಗೆ ಹರಿಯುತ್ತಿರುವ ಮನುಷ್ಯತ್ವವನ್ನು ಸದಾ ಜಾಗೃತವಾಗಿಡಲು ನಿರಾಶ್ರಿತರ ಮಕ್ಕಳಿಗೆ ಸಹಾಯ ಹಸ್ತ ಚಾಚುವ ಸಲುವಾಗಿ 'ಕೊಡಗಿಗಾಗಿ ರಂಗಸಪ್ತಾಹ' ಶಪತವೊಂದು ಮಾಡಿದೆ.

'ಕೊಡಗಿಗಾಗಿ ರಂಗಸಪ್ತಾಹ' ಮೂಲಕ ಇದೇ ನವೆಂಬರ್ 11ರಿಂದ ನ.16ರ ವರೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಸಂಗೀತಾ ಜಾತ್ರೆ ಮತ್ತು ನಿರಾಶ್ರಿತರೊಂದಿಗೆ ಮಾತುಕತೆಗೆ ಸಿದ್ಧವಾಗಿದೆ. 

ಈ 'ಕೊಡಗಿಗಾಗಿ ರಂಗಸಪ್ತಾಹ'ದಲ್ಲಿ ಸಂಗೀತ ಜಾತ್ರೆ ಇರಲಿದೆ. ಅಂದರೆ, ಜಾನಪದ ಗೀತೆ, ವಚನ ವಿಶೇಷ, ಅನುಭಾವಿ ಗೀತೆಗಳು, ಸುಗಮ ಸಂಗೀತ ಗಾಯನ, ಗಝಲ್ ಇರಲಿದೆ.

ಆರು ದಿನಗಳ ವರೆಗೆ ನಡೆಯುವ ಕೊಡಗಿಗಾಗಿ ರಂಗಸಪ್ತಾಹದ ಮೊದಲ ದಿನದ ಉದ್ಘಾಟನೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂನಾಥ ಮಹಾಸ್ವಾಮೀಜಿ ಮಾಡಲಿದ್ದಾರೆ.

 ಕೊಡಗಿಗಾಗಿ ರಂಗಸಪ್ತಾಹ ಸಂಗೀತ ಜಾತ್ರೆಗೆ ನೀವೂ ಬನ್ನಿ, ನಿಮ್ಮವರನ್ನು ಕರೆತನ್ನಿ.

ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದಲ್ಲಿ ಅಥವಾ ಎನಾದರು ಈ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕಿದ್ದರೆ 9008033336, 9900008002,8748003718 ಈ ನಂಬರ್ ಗೆ ಕರೆ ಮಾಡಿ.