ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು ಇದರಿಂದ ಅವರನ್ನು ಗೌರವಯುತವಾಗಿ ಕೆಳಗಿಳಿಸಲು ಯೋಜನೆ ರೂಪಿಸುತ್ತಿರುವ ಬಿಜೆಪಿ, ಈ ಹುದ್ದೆಗೆ ಮೂವರು ಪ್ರಮುಖ ನಾಯಕರ ಹೆಸರನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ.

ಪಣಜಿ: ಅನಾರೋಗ್ಯದಿಂದ ಬಳಲುತ್ತಿರುವ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರನ್ನು ಗೌರವಯುತವಾಗಿ ಕೆಳಗಿಳಿಸಲು ಯೋಜನೆ ರೂಪಿಸುತ್ತಿರುವ ಬಿಜೆಪಿ, ಈ ಹುದ್ದೆಗೆ ಮೂವರು ಪ್ರಮುಖ ನಾಯಕರ ಹೆಸರನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ ಎನ್ನಲಾಗಿದೆ.

 ರಾಜ್ಯದ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ, ವಿಧಾನಸಭೆಯ ಸ್ಪೀಕರ್‌ ಪ್ರಮೋದ್‌ ಸಾವಂತ್‌ ಮತ್ತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿನಯ್‌ ತೆಂಡುಲ್ಕರ್‌ ಹೆಸರು ಪ್ರಮುಖವಾಗಿ ಚರ್ಚಿತವಾಗಿದೆ ಎಂದು ಹೇಳಲಾಗಿದೆ. 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಗುರುವಾರ ದೆಹಲಿಯಲ್ಲಿ ಗೋವಾ ಸರ್ಕಾರದ ಪಾಲುದಾರ ಪಕ್ಷಗಳಾದ ಎಂಜಿಪಿ, ಜಿಎಫ್‌ಪಿ ಜೊತೆಗೆ ಹಾಗೂ ಬಳಿಕ ಪ್ರತ್ಯೇಕವಾಗಿ ರಾಜ್ಯ ಬಿಜೆಪಿ ಕೋರ್‌ಕಮಿಟಿ ಸದಸ್ಯರೊಂದಿಗೆ ನಡೆಸಿದ ಚರ್ಚೆ ವೇಳೆ ಈ ಮೂವರ ಹೆಸರು ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ.