ಮಂಡ್ಯ(ಸೆ.10): ಕಾವೇರಿ ಹೋರಾಟದ ಕುರಿತು ದಿನಕ್ಕೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಾ, ಟ್ವೀಟ್ ಮೂಲಕವೇ ಮಾತನಾಡುತ್ತಿರುವ ನಟಿ, ಮಾಜಿ ಸಂಸದೆ ರಮ್ಯಾ ವಿರುದ್ಧ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ತೀವ್ರ ಅಸಮಾಧಾನಗೊಂಡಿದ್ದಾರೆ. 

ಕಾವೇರಿ ನೀರಿಗಾಗಿ ಆಗ್ರಹಿಸಿ ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ಮಾಜಿ ಸಂಸದೆ ರಮ್ಯಾ, ಹೋರಾಟದ ಕುರಿತು ಅಸಂಬದ್ಧ ಹೇಳಿಕೆ ನೀಡುತ್ತಿದ್ದು, ಇದರಿಂದ ಅಸಮಾಧಾನಗೊಂಡಿರುವ ಜಿ ಮಾದೇಗೌಡ ಬೇಜವಾಬ್ದಾರಿ ಹೇಳಿಕೆ ನೀಡುವವರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಾದೇಗೌಡ, ರಮ್ಯಾಗೆ ಅನುಭವ ಕಮ್ಮಿ,ರಾಜಕೀಯದಲ್ಲಿ ಕಲಿಕಬೇಕಾದ್ದು ಭಾರಿ ಇದೆ. ಈ ಹಿಂದೆ ಆಕೆ ನನ್ನನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಂಡ್ಯಗೆ ಬಂದು ಕಾವೇರಿ ಹೋರಾಟದಲ್ಲಿ ಭಾಗವಹಿಸುವಂತೆ ತಿಳಿಸಿದ್ದೇ, ಆದರೆ ಪ್ರತಿಭಟನೆಯಲ್ಲಿ ಅವರು ಕಾಣಿಸಿಕೊಂಡಿಲ್ಲ ಹಾಗಾಗಿ ಆ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

ಸಮಯ ಬಂದಾಗ ಜನರೇ ರಮ್ಯಾಗೆ ಸರಿಯಾದ ರೀತಿಯಲ್ಲಿ ಉತ್ತರ ನೀಡುತ್ತಾರೆ, ಸುಮ್ಮನೆ ನಾನೇಕೆ ಈಗ ಪ್ರತಿಕ್ರಿಯಿಸಲಿ ಎನ್ನುವ ಮೂಲಕ ರಮ್ಯಾ ಮಾಡುತ್ತಿರುವುದು ಸರಿ ಇಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.