ಫೇಕ್ ಅಕೌಂಟ್ ಬಗ್ಗೆ ಉಪದೇಶ ಕೊಟ್ಟ ರಮ್ಯಾಗೆ ಮಂಗಳೂರಿನ ಯುವಕ ಚಾಲೆಂಜ್ : ​​ವಿಡಿಯೋ ಹಾಕಿದ್ದವನು ಈತನೇ

Ramya Fake Account Controversy
Highlights

ಆದರೆ ಇದು ವಿವಾದ ಆಗುತ್ತಾ ಇದ್ದಂತೆ ರಮ್ಯಾ ಅವರು ಈ ವೀಡಿಯೋ ಬಗ್ಗೆ ರೀಟ್ವೀಟ್ ಮಾಡಿದ್ದು, ತಮಗೆ ಬೇಕಾದ ಹಾಗೆ ಎಡಿಟ್ ಮಾಡಲಾಗಿದೆ, ಎಂಜಾಯ್ ಮಾಡಿ ಎಂದಿದ್ದಾರೆ.

ಮಂಗಳೂರು(ಫೆ.08): ವಿಕ್ರಮ್ ಹೆಗ್ಡೆ ಎಂಬಾತ ರಮ್ಯಾಗೆ ಟ್ವಿಟ್ಟರ್’ನಲ್ಲೇ ಓಪನ್ ಚಾಲೆಂಜ್ ಮಾಡಿದ್ದು, ಫೇಕ್ ಆಗಿದ್ರೆ ನನ್ನ ಮೇಲೆ ಕೇಸ್ ಹಾಕಿ ಬಂಧಿಸಿ ಅಂತ ಬಹಿರಂಗ ಸವಾಲು ಹಾಕಿದ್ದಾನೆ. ಕಾಂಗ್ರೆಸ್ ಸಭೆಯಲ್ಲಿ ರಮ್ಯಾ ನೀಡಿದ್ದ ಹೇಳಿಕೆಯನ್ನು ಅಲ್ಲೇ ಇದ್ದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದ. ಬಳಿಕ ಅದನ್ನ ಮಹೇಶ್ ವಿಕ್ರಮ್ ಹೆಗ್ಡೆಯವರರ ಪೋಸ್ಟ್ ಕಾರ್ಡ್ ಅನ್ನೋ ವೆಬ್’ಸೈಟ್ ಸಂಪರ್ಕಿಸಿ ಅವರಿಗೆ ಕಳುಹಿಸಿ ಕೊಟ್ಟಿದ್ದಾನೆ. ಹೀಗಾಗಿ ವಿಡಿಯೋ ಸಿಕ್ಕ ತಕ್ಷಣ ಈ ಬಗ್ಗೆ ಪರಿಶೀಲಿಸಿದ ಹೆಗ್ಡೆ ಬಳಿಕ ತಮ್ಮ ವೆಬ್’ಸೈಟ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದು, ಕ್ಷಣಾರ್ಧದಲ್ಲಿ ಲಕ್ಷಾಂತರ ಜನರನ್ನ ತಲುಪುವ ಮೂಲಕ ವಿಡಿಯೋ ವೈರಲ್ ಆಗಿದೆ.

ಆದರೆ ಇದು ವಿವಾದ ಆಗುತ್ತಾ ಇದ್ದಂತೆ ರಮ್ಯಾ ಅವರು ಈ ವೀಡಿಯೋ ಬಗ್ಗೆ ರೀಟ್ವೀಟ್ ಮಾಡಿದ್ದು, ತಮಗೆ ಬೇಕಾದ ಹಾಗೆ ಎಡಿಟ್ ಮಾಡಲಾಗಿದೆ, ಎಂಜಾಯ್ ಮಾಡಿ ಎಂದಿದ್ದಾರೆ. ಆದರೆ ಈ ಟ್ವಿಟ್ ವಿರುದ್ದ ಕೌಂಟರ್ ಕೊಟ್ಟಿರೋ ಮಹೇಶ್ ವಿಕ್ರಮ್ ಹೆಗ್ಡೆ, ರಮ್ಯಾಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಒಂದು ವೇಳೆ ವೀಡಿಯೋ ನಕಲಿ ಆಗಿದ್ದರೆ ನೀನು ಯಾಕೆ ನನ್ನ ಮೇಲೆ ಕೇಸು ಹಾಕಿಲ್ಲ, ನಾನು ಕಾಯುತ್ತಿದ್ದೇನೆ ಅಂತ ರಮ್ಯಾಗೆ ರೀಟ್ವೀಟ್ ಮಾಡಿದ್ದಾರೆ. ಆದ್ರೆ ಇವರ ಸವಾಲಿಗೆ ರಮ್ಯಾ ಪ್ರತಿಕ್ರಿಯಿಸದೇ ಸುಮ್ಮನಾಗಿದ್ದು, ತನ್ನ ಎಡವಟ್ಟಿಗೆ ಪಾಠ ಕಲಿತಂತಾಗಿದೆ.

loader