ಸಿನಿಮಾ ಆಫರ್`ಗಳು ಸಿಗದೇ ಬೇಸರಗೊಂಡಿದ್ದ ನೈನಾ, ಒಂದೆರಡು ತಿಂಗಳ ಹಿಂದೆ ಹಾಟ್ ಫೋಟೋಶೂಟ್ ಮಾಡಿಕೊಂಡು, ಆನ್‌ಲೈನ್‌ಗೆ ಬಿಟ್ಟಿದ್ದರು. ಅಲ್ಲಿ ನೈನಾ ಸ್ನಾನ ಮಾಡುವ ಬಿಸಿಬಿಸಿ ಫೋಟೋಗಳು ಅಮಲೇರಿಸುವಂತಿದ್ದವು. ಟು ಪೀಸ್‌ನಲ್ಲಿಯೇ ದೇಹಸಿರಿಯ ಮುನ್ನುಡಿ ಹಾಡಿದ್ದರು. ಈ ಹಾಟ್ ಫೋಟೋಶೂಟ್ ಅನ್ನು ಯೂಟ್ಯೂಬ್‌ನಲ್ಲಿ ಕಂಡ ವರ್ಮಾ ತಡಮಾಡದೆ, ನೈನಾಳ ಹೊಕ್ಕಳಿನ ಅಂದವನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಅದಾಗಿ ನಾಲ್ಕೇ ದಿನದಲ್ಲಿ ‘ವಂಗವೀಟಿ’ಗೆ ಈಕೆಯೇ ನಾಯಕಿ ಎಂದು ಘೋಷಿಸಿದ್ದಾರೆ. ಆದರೆ, ಚಿತ್ರದ ಟ್ರೈಲರ್‌ನಲ್ಲಿ ಮಾತ್ರ ನೈನಾಳನ್ನು ಹಾಟ್ ಆಗಿ ತೋರಿಸದೆ, ಗೌರಮ್ಮ ರೀತಿ ನಮ್ಮ ಮುಂದಿಟ್ಟಿದ್ದಾರೆ. ನೈನಾ ಈ ಚಿತ್ರದಲ್ಲಿ ಮೋಹನ ರಂಗನಿಗೆ ಪತ್ನಿಯಾಗಿ ನಟಿಸುತ್ತಿದ್ದಾರೆ.
ಹೊಸ ನಟಿ, ಮಾದಕ ರೂಪದರ್ಶಿ ಅಂದ್ರೆ ರಾಮ್ಗೋಪಾಲ್ ವರ್ಮಾಗೆ ಸೆಳೆತ ಹೆಚ್ಚು. ಆಕೆಯ ಹಾಟ್ ಫೋಟೋ ಹಾಕಿ, ತಲೆಯಲ್ಲಿ ಹುಳ ಬಿಡುವಂತೆ ಟ್ವೀಟ್ ಮಾಡದಿದ್ದರೆ ಅವರಿಗೆ ಸಮಾಧಾನವೇ ಇರೋದಿಲ್ಲ. ಈಗೊಬ್ಬಳು ಚೆಲುವೆ ವರ್ಮಾ ಅವರ ಕಳ್ಳಮನಸ್ಸನ್ನು ಸೆಳೆದಿದ್ದಾಳೆ. ವರ್ಮಾ ಅವರನ್ನು ಮೋಡಿ ಮಾಡಿದ್ದಷ್ಟೇ ಅಲ್ಲ, ಅವರ ಸಿನಿಮಾದಲ್ಲಿ ಆರನ್ನೂ ಗಿಟ್ಟಿಸಿಕೊಂಡಿದ್ದಾಳೆ. ಆರ್ಜಿವಿಯ ಮುಂದಿನ ಚಿತ್ರ ‘ವಂಗವೀಟಿ’ಯ ಟ್ರೈಲರ್ ನೋಡಿದರೆ ಅಲ್ಲಿ ಈ ಸುಂದರಿಯಿದ್ದಾಳೆ. ಲಕ್ಷಣವಾಗಿ ಸೀರೆಯುಟ್ಟು, ಹಣೆಗೆ ಅಗಲ ಕುಂಕುಮ ಇಟ್ಟುಕೊಂಡು, ಸಾಂಪ್ರದಾಯಿಕ ಹೆಣ್ಣಾಗಿ ಗಮನ ಸೆಳೆಯುತ್ತಾಳೆ.
ಆಕೆ ನೈನಾ ಗಂಗೂಲಿ. ಸಿನಿಮಾ ಆಫರ್`ಗಳು ಸಿಗದೇ ಬೇಸರಗೊಂಡಿದ್ದ ನೈನಾ, ಒಂದೆರಡು ತಿಂಗಳ ಹಿಂದೆ ಹಾಟ್ ಫೋಟೋಶೂಟ್ ಮಾಡಿಕೊಂಡು, ಆನ್ಲೈನ್ಗೆ ಬಿಟ್ಟಿದ್ದರು. ಅಲ್ಲಿ ನೈನಾ ಸ್ನಾನ ಮಾಡುವ ಬಿಸಿಬಿಸಿ ಫೋಟೋಗಳು ಅಮಲೇರಿಸುವಂತಿದ್ದವು. ಟು ಪೀಸ್ನಲ್ಲಿಯೇ ದೇಹಸಿರಿಯ ಮುನ್ನುಡಿ ಹಾಡಿದ್ದರು. ಈ ಹಾಟ್ ಫೋಟೋಶೂಟ್ ಅನ್ನು ಯೂಟ್ಯೂಬ್ನಲ್ಲಿ ಕಂಡ ವರ್ಮಾ ತಡಮಾಡದೆ, ನೈನಾಳ ಹೊಕ್ಕಳಿನ ಅಂದವನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಅದಾಗಿ ನಾಲ್ಕೇ ದಿನದಲ್ಲಿ ‘ವಂಗವೀಟಿ’ಗೆ ಈಕೆಯೇ ನಾಯಕಿ ಎಂದು ಘೋಷಿಸಿದ್ದಾರೆ. ಆದರೆ, ಚಿತ್ರದ ಟ್ರೈಲರ್ನಲ್ಲಿ ಮಾತ್ರ ನೈನಾಳನ್ನು ಹಾಟ್ ಆಗಿ ತೋರಿಸದೆ, ಗೌರಮ್ಮ ರೀತಿ ನಮ್ಮ ಮುಂದಿಟ್ಟಿದ್ದಾರೆ. ನೈನಾ ಈ ಚಿತ್ರದಲ್ಲಿ ಮೋಹನ ರಂಗನಿಗೆ ಪತ್ನಿಯಾಗಿ ನಟಿಸುತ್ತಿದ್ದಾರೆ.
ವರ್ಮಾ ನಟಿಯನ್ನು ಟ್ವಿಟ್ಟರಿನಲ್ಲಿ ಹೊಗಳಿದರೆಂದರೆ, ಅವರ ಸಿನಿಮಾದಲ್ಲಿ ಆ ನಟಿ ಇರ್ತಾರೆಂಬುದು ಇದು ಎರಡನೇ ಸಲ ಸಾಬೀತಾಗುತ್ತಿದೆ. ಈಗ ‘ಸರ್ಕಾರ್ 3’ಯ ತಂಡದಲ್ಲಿರುವ ಯಾಮಿ ಗೌತಮಿ ಮೇಲೂ ವರ್ಮಾ ಟ್ವೀಟ್ ಮಾಡಿದ್ದರು. ‘ಯಾಮಿ ಗೌತಮಿಯಂಥ ಹಾಟ್ ಬ್ಯೂಟಿ ಜಾಹೀರಾತಿನಲ್ಲಿ ಮಿನುಗುತ್ತಿರೋದು ಫೇರ್ ಆ್ಯಂಡ್ ಲವ್ಲಿಯ ಅದೃಷ್ಟ’ ಎಂದಿದ್ದರು. ಹೀಗೆ ಟ್ವೀಟ್ ಮಾಡಿ ತಿಂಗಳ ನಂತರ, ಯಾಮಿ ಗೌತಮಿಗೆ ‘ಸರ್ಕಾರ್ 3’ಯ ಆರ್ ಹೋಗಿದೆ.
ಒಟ್ಟಿನಲ್ಲಿ ಈ ರಾಮ್ ಏಕಸಖಿ ವ್ರತಸ್ಥ ಅಂತೂ ಖಂಡಿತಾ ಅಲ್ಲ. ಊರ್ಮಿಳಾ ಮಾತೊಂಡ್ಕರ್, ನಿಶಾ ಕೊಠಾರಿ, ಅಂತರಾ ಮಾಲಿ, ಜಿಯಾ ಖಾನ್, ನಟಾಲಿಯಾ ಕೌರ್, ಮಧುಶಾಲಿನಿ, ಅನೈಕಾ ಇವರೆಲ್ಲರನ್ನು ಸಿನಿಮಾಕ್ಕೆ ಪರಿಚಯಿಸುವ ಮುನ್ನ ವರ್ಮಾ, ಆ ನಟಿಯರ ಬ್ಯೂಟಿಗೆ ಮರುಳಾಗಿದ್ದು ಗೊತ್ತೇ ಇದೆ. ಇನ್ನು ನಮ್ಮ ಕನ್ನಡತಿ ನಿಶಾ ಯೋಗೀಶ್ವರ್ ರೂಪವನ್ನು ಮೆಚ್ಚಿ ಟ್ವೀಟಿಸಿದ್ದರು
ನಿಶಾಗೆ ಆರ್ಜಿವಿ ಯಾವ ಚಿತ್ರದ ಆಫರೂ ಇಲ್ಲಿಯ ತನಕ ಬಂದಿಲ್ಲ. ಆದರೆ, ವರ್ಮಾ ಹೊಸ ನಟಿಯರ ವಿಚಾರದಲ್ಲಿ ಸುಮ್ಮಸುಮ್ಮನೆ ಟ್ವೀಟಿಸುವುದಿಲ್ಲ ಎನ್ನುವುದಂತೂ ಸತ್ಯ.
