ಬೆಂಗಳೂರಿನಲ್ಲಿ  ಸುವರ್ಣ ನ್ಯೂಸ್ ಜೊತೆ ಎಕ್ಸ್’ಕ್ಲ್ಯೂಸಿವ್ ಆಗಿ ಮಾತನಾಡಿದ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ಕೇಳಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು. 

ಬೆಂಗಳೂರು (ಜ.25): ಆದಾಯ ತೆರಿಗೆ ಇಲಾಖೆಯವರು ಕೊಟ್ಟಿರುವ ಮಾಹಿತಿ ಎಲ್ಲ ಸತ್ಯವಲ್ಲವೆಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುವರ್ಣ ನ್ಯೂಸ್ ಜೊತೆ ಎಕ್ಸ್’ಕ್ಲ್ಯೂಸಿವ್ ಆಗಿ ಮಾತನಾಡಿದ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ಕೇಳಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು. 

ಈವರೆಗೆ ಸಿಎಂ ಆಗಲಿ, ಕೆಪಿಸಿಸಿ‌ ಅಧ್ಯಕ್ಷರಾಗಲಿ ರಾಜೀನಾಮೆ ಅಥವಾ ವಿವರಣೆ ಕೇಳಿಲ್ಲ. ನಾನಾಗಿಯೇ ವಿವರಣೆ ಕೊಡಲು ಹೋಗಲ್ಲ. ನನ್ನ ಕೈಬಿಟ್ಟು ಸತೀಶ್ ಜಾರಕಿಹೊಳಿಯವರನ್ನು ಸಂಪುಟ ಸೇರಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಯವರನ್ನು ಕೇಳಿ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.