ಈಗ ರಾಮ್'ದೇವ್ ಅವರು 10 ಸಾವಿರ ಕೋಟಿ ಮೌಲ್ಯ ಹೊಂದಿರುವ ತಮ್ಮ ಸಂಸ್ಥೆಯ ಮುಂದಿನ ಉತ್ತರಾಧಿಕಾರಿ ಯಾರೆಂದು ಘೋಷಿಸಿದ್ದಾರೆ.
ನವದೆಹಲಿ(ಸೆ.30): ವಿದೇಶಿ ಕಂಪನಿಗಳಿಗೆ ಸೆಡ್ಡು ಹೊಡೆದು ದೇಶದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಿಯ ಆಹಾರ ಉತ್ಪನ್ನ ಸಂಸ್ಥೆ ಪತಾಂಜಲಿ. ಕೆಲವೇ ವರ್ಷಗಳಲ್ಲಿ ಪತಾಂಜಲಿ ಸಂಸ್ಥೆ ದೇಶದಲ್ಲಿಯೇ ನಂ.1 ಸಂಸ್ಥೆಯನ್ನಾಗಿ ರೂಪಿಸುವ ವಿಶ್ವಾಸ ಯೋಗ'ಗುರು ರಾಮ್'ದೇವ್ ಅವರದು.
ಈಗ ರಾಮ್'ದೇವ್ ಅವರು 10 ಸಾವಿರ ಕೋಟಿ ಮೌಲ್ಯ ಹೊಂದಿರುವ ತಮ್ಮ ಸಂಸ್ಥೆಯ ಮುಂದಿನ ಉತ್ತರಾಧಿಕಾರಿ ಯಾರೆಂದು ಘೋಷಿಸಿದ್ದಾರೆ. ತಮ್ಮಂದ ತರಬೇತಿ ಪಡೆಯುತ್ತಿರುವ 500 ಮಂದಿ ಸಾಧುಗಳೆ ಮುಂದಿನ ನನ್ನ ಪತಾಂಜಲಿ ಸಂಸ್ಥೆಯ ಉತ್ತರಾಧಿಕಾರಿಯಾಗಲಿದ್ದಾರೆ 'ಎಂದು ತಿಳಿಸಿದ್ದಾರೆ.
ಪ್ರಸ್ತುತ 45 ಸಾವಿರ ಕೋಟಿ ವಹಿವಾಟು ನಡೆಸುತ್ತಿರುವ ಪತಾಂಜಲಿ ಸಂಸ್ಥೆ ಮುಂದಿನ 4 ವರ್ಷಗಳಲ್ಲಿ 1 ಲಕ್ಷ ಕೋಟಿ ವಹಿವಾಟು ನಡೆಸುವ ಆಶಯ ಹೊಂದಿದೆ. ಹರಿದ್ವಾರ, ತೇಜ್'ಪುರ್'ದಲ್ಲಿರುವ ಆಹಾರ ಉತ್ಪನ್ನ ಘಟಕಗಳು ಮುಂದಿನ ದಿನಗಳಲ್ಲಿ ನೋಯ್ಡಾ, ಇಂಧೂರ್ ಹಾಗೂ ಆಂಧ್ರಪ್ರದೇಶದಲ್ಲಿ ಘಟಕ ಸ್ಥಾಪಿಸಲು ಯೋಜಿಸುತ್ತಿದೆ.
ಜವಳಿ ಕ್ಷೇತ್ರದ ಕಡೆ ನೋಟ
ಯೋಗ ಗುರು ಸಂಸ್ಥೆ ಶೀಘ್ರದಲ್ಲಿಯೇ ಜವಳಿ ಉತ್ಪನ್ನ ಕ್ಷೇತ್ರದ ಕಡೆ ಮುಖ ಮಾಡಲಿದ್ದು, ಜೀನ್ಸ್,ಕುರ್ತಾ, ಪ್ಯಾಂಟ್ ಶರ್ಟ್ ಯೊಗ ಹಾಗೂ ಕ್ರೀಡಾ ಧರಿಸುಗಳನ್ನು ತಯಾರಿಸಲಿದೆ. ನಾನು ಇಲ್ಲಿಯವರೆಗೂ ತನ್ನ ಸಂಸ್ಥೆಯ ಅಭಿವೃದ್ಧಿಗೆ ರಾಜಕೀಯ ಲಾಭವನ್ನು ಬಳಸಿಕೊಂಡಿಲ್ಲ. ಅದಲ್ಲದೆ ಮೋದಿ ಸರ್ಕಾರದಿಂದ ಒಂದು ಪೈಸೆಯ ಅನುಕೂಲವನ್ನು ಪಡೆದಿಲ್ಲ' ಮುಂದೆಯೂ ಪಡೆದುಕೊಳ್ಳುವುದಿಲ್ಲ' ಎನ್ನುತ್ತಾರೆ ಬಾಬಾ.
