ಶೀಘ್ರದಲ್ಲೇ ಪತಂಜಲಿ ಬ್ರಾಂಡ್ ಅಡಿಯಲ್ಲಿ ಜೀನ್ಸ್ ತಯಾರಿ : ರಾಮ್’ದೇವ್

Ramdev to launch Patanjali Garments in 2019
Highlights

ಶೀಘ್ರದಲ್ಲೇ  ಯೋಗಗುರು ಬಾಬಾ ರಾಮ್’ದೇವ್ ಪತಂಜಲಿ ಆಯುರ್ವೇದ ಬ್ರಾಂಡ್ ಅಡಿಯಲ್ಲಿ ದೇಸಿ ಜೀನ್ಸ್’ಗಳನ್ನು ತಯಾರು ಮಾಡುವುದಾಗಿ ಘೋಷಿಸಿದ್ದಾರೆ. 2019ರ ವೇಳೆಗೆ ಜೀನ್ಸ್ ತಯಾರು ಮಾಡುವುದಾಗಿ ತಿಳಿಸಿದ್ದಾರೆ.

ನವದೆಹಲಿ : ಶೀಘ್ರದಲ್ಲೇ  ಯೋಗಗುರು ಬಾಬಾ ರಾಮ್’ದೇವ್ ಪತಂಜಲಿ ಆಯುರ್ವೇದ ಬ್ರಾಂಡ್ ಅಡಿಯಲ್ಲಿ ದೇಸಿ ಜೀನ್ಸ್’ಗಳನ್ನು ತಯಾರು ಮಾಡುವುದಾಗಿ ಘೋಷಿಸಿದ್ದಾರೆ. 2019ರ ವೇಳೆಗೆ ಜೀನ್ಸ್ ತಯಾರು ಮಾಡುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಜನರು ನನ್ನ ಬಳಿ ಸಾಕಷ್ಟು ಬಾರಿ ಕೇಳುತ್ತಿದ್ದರು. ಯಾವಾಗ ನಿಮ್ಮ ಜೀನ್ಸ್’ಗಳು ಮಾರುಕಟ್ಟೆಗೆ ಬರುತ್ತವೆ ಎನ್ನುತ್ತಿದ್ದರು. ಇದೀಗ  ಈ ಬಗ್ಗೆ ನಿರ್ಧಾರ ಮಾಡಿದ್ದು, ಜೀನ್ಸ್ ತಯಾರು ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ಮಕ್ಕಳು, ಮಹಿಳೆಯರು ಉಡುಪುಗಳನ್ನೂ ಕೂಡ ಮುಂದಿನ ವರ್ಷದಿಂದ ತಯಾರು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ಪತಂಜಲಿ ಬ್ರಾಂಡ್ ಅಡಿಯಲ್ಲಿ ಸೌಂದರ್ಯ ವರ್ಧಕಗಳು, ಆಹಾರ ವಸ್ತುಗಳನ್ನು ತಯಾರು ಮಾಡಲಾಗುತ್ತಿದೆ. ಇನ್ನು ಬಟ್ಟೆಗಳ ತಯಾರಿಯನ್ನೂ ಶೀಘ್ರದಲ್ಲೇ ಮಾಡುವುದಾಗಿ ಘೋಷಿಸಿದ್ದಾರೆ.

loader