Asianet Suvarna News Asianet Suvarna News

ಗುಂಪು ಥಳಿತದ ವಿರುದ್ಧ ಪ್ರಧಾನಿಗೆ ಪತ್ರ ಬರೆದ ಗಣ್ಯರ ವಿರುದ್ಧ ಕೇಸು!

ಗುಂಪು ಥಳಿತದ ವಿರುದ್ಧ ಪ್ರಧಾನಿಗೆ ಪತ್ರ ಬರೆದ ಗಣ್ಯರ ವಿರುದ್ಧ ಕೇಸು| ಗುಹಾ, ಮಣಿರತ್ನಂ ಸೇರಿ 50 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ

Ramchandra Guha Mani Ratnam Aparna Sen among 49 booked for sedition for letter to Modi against mob lynching
Author
Bangalore, First Published Oct 5, 2019, 1:11 PM IST

ಮುಜಫ್ಫರ್‌ಪುರ[ಅ.05]: ‘ದೇಶದಲ್ಲಿ ಮುಸ್ಲಿಮರು, ದಲಿತರು ಹಾಗೂ ಇತರ ಅಲ್ಪಸಂಖ್ಯಾತ ಧರ್ಮೀಯರನ್ನು ಬಡಿದು ಸಾಯಿಸಲಾಗುತ್ತಿದೆ. ಇದನ್ನು ನಿಲ್ಲಿಸಲು ಕ್ರಮ ಜರುಗಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ನಿರ್ದೇಶಕ ಮಣಿರತ್ನಂ, ಬೆಂಗಳೂರಿನ ಲೇಖಕ ರಾಮಚಂದ್ರ ಗುಹಾ ಸೇರಿದಂತೆ 50 ಗಣ್ಯರ ವಿರುದ್ಧ ಬಿಹಾರದ ಮುಜಫ್ಫರ್‌ಪುರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇಶದ್ರೋಹ, ಸಾರ್ವಜನಿಕ ಶಾಂತಿಭಂಗ, ಧಾರ್ಮಿಕ ಭಾವನೆಗೆ ಧಕ್ಕೆ ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಪ್ರಕರಣಗಳನ್ನು ಇವರ ಮೇಲೆ ದಾಖಲಿಸಲಾಗಿದೆ.

ಗೋಹತ್ಯೆಗಳ ಹೆಸರಿನಲ್ಲಿ ಹಿಂದೂ ಸಂಸ್ಕೃತಿ ಹಾನಿಗೆ ಸಂಚು: ಭಾಗವತ್ ಕಿಡಿ

ಸ್ಥಳೀಯ ವಕೀಲ ಸುಧೀರ್‌ ಕುಮಾರ್‌ ಓಝಾ, ಕಳೆದ ತಿಂಗಳು ಮಜ್ಫಫäರ್‌ಪುರ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ದಾಖಲಿಸಿದ್ದರು, ಅದರಲ್ಲಿ ‘ಕೆಲ ದಿನಗಳ ಹಿಂದೆ ಮಣಿರತ್ನಂ, ಅನುರಾಗ್‌ ಕಶ್ಯಪ್‌, ಶ್ಯಾಮ್‌ ಬೆನಗಲ್‌, ಸೌಮಿತ್ರಾ ಚಟರ್ಜಿ, ರಾಮಚಂದ್ರ ಗುಹಾ ಸೇರಿದಂತೆ 49 ಖ್ಯಾತನಾಮರು, ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆದಿದ್ದರು. ಅದರಲ್ಲಿ ಸರ್ಕಾರವನ್ನು ವಿರೋಧಿಸಿದವರನ್ನು ಥಳಿಸಿ ಕೊಲ್ಲಲಾಗುತ್ತಿದೆ. ಭಿನ್ನದನಿ ಇಲ್ಲದೇ ಪ್ರಜಾಸತ್ತೆ ಇರಲಾರದು. ಅಲ್ಲದೆ, ಜೈ ಶ್ರೀರಾಂ ಘೋಷಣೆಯನ್ನು ಯುದ್ಧಘೋಷ ಮಾಡಲಾಗಿದೆ ಎಂದೆಲ್ಲಾ ದೂರಿದ್ದಾರೆ.

ಮೋದಿಗೆ ಬರೆದ ಪತ್ರಕ್ಕೆ ಪ್ರತಿಯಾಗಿ ಮತ್ತೆ ಮೋದಿಗೆ ಪತ್ರ ಬರೆದ 62 ಗಣ್ಯರು!

ಇಂಥ ಆರೋಪಗಳ ಮೂಲಕ ಇವರೆಲ್ಲಾ ದೇಶದ ಘನತೆಗೆ ಧಕ್ಕೆ ತಂದಿದ್ದಾರೆ ಮತ್ತು ಪ್ರಧಾನಿಗಳ ಪ್ರಭಾವಶಾಲಿ ಆಡಳಿತವನ್ನು ಕಡೆಗಣಿಸಿದ್ದಾರೆ. ಅಲ್ಲದೇ ಅವರ ಭಾಷೆ ಪ್ರತ್ಯೇಕತಾವಾದವನ್ನು ಬೆಂಬಲಿಸುವಂತಿದೆ. ಹೀಗಾಗಿ ಎಲ್ಲಾ 49 ಜನರ ವಿರುದ್ಧ ದೇಶದ್ರೋಹದ, ಸಾರ್ವಜನಿಕ ಶಾಂತಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಿಸಲು ಪೊಲೀಸರು ಸೂಚಿಸಬೇಕು’ ಎಂದು ಕೋರಿದ್ದರು. ಈ ಅರ್ಜಿ ಮಾನ್ಯ ಮಾಡಿದ್ದ ಕೋರ್ಟ್‌ ಆ.20ರಂದೇ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು.

ಗುಂಪು ಹತ್ಯೆ ನಿಲ್ಲಿಸಿ ಎಂದು ಪ್ರಧಾನಿಗೆ ಪತ್ರ: ನಟನಿಗೆ ಜೀವ ಬೆದರಿಕೆ!

ಈ ಸೂಚನೆ ಅನ್ವಯ ಪೊಲೀಸರು ಎಲ್ಲಾ 49 ಜನರ ವಿರುದ್ಧ ಕೇಸು ದಾಖಲಿಸಿದ್ದಾರೆ.

ಈ ನಡುವೆ ಖ್ಯಾತನಾಮರ ವಿರುದ್ಧ ಕೇಸು ದಾಖಲಿಸಿದ ಕ್ರಮವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧೀ ಕಟುವಾಗಿ ಟೀಕಿಸಿದ್ದಾರೆ. ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ಅದೇನು ರಹಸ್ಯವಾಗಿ ಉಳಿದಿಲ್ಲ. ಅಷ್ಟೇ ಏಕೆ ಈ ವಿಷಯಗಳು ಇಡೀ ಜಗತ್ತಿಗೆ ಗೊತ್ತಾಗಿದೆ. ದೇಶ ಸರ್ವಾಧಿಕಾರದತ್ತ ಸಾಗುತ್ತಿದೆ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ಇಲ್ಲಿ ಮೋದಿ ಅಥವಾ ಅವರ ಸರ್ಕಾರವನ್ನು ಟೀಕಿಸಿದವರನ್ನೆಲ್ಲಾ ಜೈಲಿಗೆ ಹಾಕಲಾಗುತ್ತಿದೆ ಎಂದು ದೂರಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಕೂಡಾ ಇದನ್ನು ಖಂಡಿಸಿದ್ದು, 'ಇದೊಂದು ಆಘಾತಕಾರಿ ಬೆಳವಣಿಗೆ. ಸಂವಿಧಾನದ 19ನೇ ವಿಧಿಗೆ ಯಾವುದೇ ಮಹತ್ವ್ಲಿಇಲ್ಲವೇ? ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ?' ಎಂದು ಪ್ರಶ್ನಿಸಿದ್ದಾರೆ.

ಗುಂಪು ಹಲ್ಲೆ ತಡೆಯಿರಿ: ಪ್ರಧಾನಿ ಮೋದಿಗೆ 49 ಗಣ್ಯರ ಪತ್ರ ಓದಿರಿ!

Follow Us:
Download App:
  • android
  • ios