ರಾಜ್ಯ ಬಿಜೆಪಿ ವಿರುದ್ಧ ಅರಣ್ಯ ಸಚಿವ ರಮಾನಾಥ್ ರೈ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಜನರ ಹತ್ಯೆಗಳನ್ನು ಮಾಡಿ ರಾಜಕಾರಣ ಮಾಡುವುದು ಎರಡೇ ಪಕ್ಷಗಳು, ಅದು SDPI-PFI ಮತ್ತು ಬಿಜೆಪಿ ಎಂದು ಹೇಳಿದ್ದಾರೆ.

ಬೆಂಗಳೂರು: ರಾಜ್ಯ ಬಿಜೆಪಿ ವಿರುದ್ಧ ಅರಣ್ಯ ಸಚಿವ ರಮಾನಾಥ್ ರೈ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಜನರ ಹತ್ಯೆಗಳನ್ನು ಮಾಡಿ ರಾಜಕಾರಣ ಮಾಡುವುದು ಎರಡೇ ಪಕ್ಷಗಳು, ಅದು SDPI-PFI ಮತ್ತು ಬಿಜೆಪಿ ಎಂದು ಹೇಳಿದ್ದಾರೆ.

ಅಶ್ರಫ್’​ನನ್ನು ಬಿಜೆಪಿ ಕೊಲೆ ಮಾಡಿದೆ. ಶರತ್​’ನನ್ನು SDPI-PFI ಕೊಲೆ ಮಾಡಿದೆ. ಎರಡು ಮತೀಯ ಶಕ್ತಿಗಳು ಕೊಲೆ ರಾಜಕಾರಣ ಮಾಡುತ್ತಿದೆ. ಎರಡೂ ಮತೀಯ ಶಕ್ತಿಗಳು ನನ್ನ ರಾಜೀನಾಮೆ ಕೇಳುತ್ತಿವೆ ಎಂದು ಕಿಡಿಕಾರಿದ್ದಾರೆ.