Asianet Suvarna News Asianet Suvarna News

ರಾಮನಗರದ ಈ ಕುಗ್ರಾಮವೀಗ ಕ್ಯಾಷ್'ಲೆಸ್ ವಿಲೇಜ್

ಜಿಲ್ಲೆಯ ಮೊದಲ ಕ್ಯಾಶ್‌ಲೆಸ್ ವಿಲೇಜ್ ಆಗಿ ವಂದಾರಗುಪ್ಪೆ ಗ್ರಾಮ ಪರಿವರ್ತನೆಯಾಗಿದೆ. ಬ್ಯಾಂಕ್ ಆಫ್ ಬರೋಡಾ ಡಿಜಿಟಲೀಕರಣಕ್ಕೆ ಜಿಲ್ಲೆಯಲ್ಲಿ ಈ ಗ್ರಾಮವನ್ನು ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಇದೀಗ ಒಂದು ವರ್ಷದಲ್ಲಿ  ಹಲವಾರು ಬದಲಾವಣೆಯನ್ನ ತಂದಿದ್ದು ಡಿಜಿಟಲ್ ಗ್ರಾಮವನ್ನಾಗಿಸುವಲ್ಲಿ ಸಫಲವಾಗಿದೆ.

ramanagara vandarakuppe is now cashless village

ರಾಮನಗರ(ನ. 08): ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿ ಇಂದಿಗೆ ವರ್ಷವಾಗಿದೆ. ಕೇಂದ್ರ ಸರ್ಕಾರವು ನೋಟು ಅಮಾನ್ಯೀಕರಣ ಕ್ರಮದ ನಂತರ ಡಿಜಿಟಲೀಕರಣಕ್ಕೆ ಮುಂದಾಯ್ತು. ಆ ಮೂಲಕ ಕ್ಯಾಶ್'ಲೆಸ್ ವಹಿವಾಟುಗಳಿಗೆ ಪ್ರಾತಿನಿಧ್ಯ ನೀಡಲಾಯ್ತು. ಈ ನಿಟ್ಟಿನಲ್ಲಿ ಇದೀಗ ರಾಮನಗರ ಜಿಲ್ಲೆಯ ಕುಗ್ರಾಮವೊಂದು ಕ್ಯಾಶ್'ಲೆಶ್ ವಿಲೇಜ್ ಆಗಿ ಪರಿವರ್ತನೆಗೊಂಡಿದೆ. ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಗ್ರಾಮದ ಎಲ್ಲರೂ ಚಾಲ್ತಿ ಖಾತೆ ತೆರೆದಿದ್ದು, ಆಧಾರ್ ಲಿಂಕ್ ಪಡೆದು ತಮ್ಮ ಖಾತೆಯನ್ನು ನಿಭಾಯಿಸ್ತಾ ಇದ್ದಾರೆ. ಆ ಮೂಲಕ ಜಿಲ್ಲೆಯ ಮೊದಲ ಕ್ಯಾಶ್‌ಲೆಸ್ ವಿಲೇಜ್ ಆಗಿ ವಂದಾರಗುಪ್ಪೆ ಗ್ರಾಮ ಪರಿವರ್ತನೆಯಾಗಿದೆ. ಬ್ಯಾಂಕ್ ಆಫ್ ಬರೋಡಾ ಡಿಜಿಟಲೀಕರಣಕ್ಕೆ ಜಿಲ್ಲೆಯಲ್ಲಿ ಈ ಗ್ರಾಮವನ್ನು ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಇದೀಗ ಒಂದು ವರ್ಷದಲ್ಲಿ  ಹಲವಾರು ಬದಲಾವಣೆಯನ್ನ ತಂದಿದ್ದು ಡಿಜಿಟಲ್ ಗ್ರಾಮವನ್ನಾಗಿಸುವಲ್ಲಿ ಸಫಲವಾಗಿದೆ.

Follow Us:
Download App:
  • android
  • ios