ರಾಮನಗರ(ಆ.09): ವಿಶೇಷ ಬೇಡಿಕೆಗಾಗಿ ರಾಮನಗರದ ಜನತೆ ಇಂದು ಬೆಂಗಳೂರಿನತ್ತ ಮುಖಮಾಡಿದ್ದರು. ತಮಗೆ ಮನ ಕಟ್ಟಲು ಜಾಗ ಬೇಡ. ಆದರೆ ಸ್ಮಶಾನಕ್ಕೆ ಜಾಗ ನೀಡಿ ಎಂದು ಇಲ್ಲಿನ ಚಾಮುಂಡಿಪುರದ ನಿವಾಸಿಗಳು  ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಗೆ ಮನವಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದಾರೆ.

ಕುಮಾಸ್ವಾಮಿಯ ಜೆಪಿ‌ನಗರದ ಸಿಎಂ ನಿವಾಸಕ್ಕೆ ತೆರಳಿ ಮನವಿ ಮಾಡಲು ನಿವಾಸಿಗಳು ಮುಂದಾಗಿದ್ದಾರೆ. ಚಾಮುಂಡಿಪುರದಲ್ಲಿ ದಲಿತ ಸಮುದಾಯದವರಿಗೆ ಸ್ಮಶಾನವಿಲ್ಲದೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಸಿಂಗ್ರಾಬೋವಿದೊಡ್ಡಿದಲ್ಲಿ ಸ್ಮಶಾನಕ್ಕೆ ಜಾಗ ಬೇಕು ಅಂತ  ಸಿಎಂ ಗೆ ಮನವಿ ಮಾಡಿದ್ದಾರೆ.

ಚಾಮುಂಡಿಪುರದ ನಿವಾಸಿಗಳಿಗೆ ಮನೆ ಇದೆ. ಆದರೆ ಸ್ಮಶಾನವಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸುಮಾರು 60 ಜನರು ತಂಡ ಸಿಎಂ ಕುಮಾರಸ್ವಾಮಿಗೆ ಮನವಿ ಸಲ್ಲಿಸಲು ರಾಮನಗರದಿಂದ ಬೆಂಗಳೂರಿಗೆ ಆಗಮಿಸಿದ್ದರು.