ರಾಮನಗರ ಕ್ಷೇತ್ರದಿಂದ ಕಣಕ್ಕಿಳಿದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ತಮ್ಮ ಆಸ್ತಿ ಮೊತ್ತವನ್ನು ಘೋಷಿಸಿಕೊಂಡಿದ್ದಾರೆ. ಈ ವೇಳೆ ಅವರು ಸಿಎಂಗಿಂತಲೂ ಶ್ರೀಮಂತೆ ಎನ್ನುವ ವಿಚಾರ ತಿಳಿದು ಬಂದಿದೆ. ಅನಿತಾ ಬಳಿ  ಹಾರ್ಲೆ ಡೇವಿಡ್ಸನ್‌ ಬೈಕ್‌ ಸಹ ಇದೆ. ಆದರೆ ಅನಿತಾ ಕುಟುಂಬ ಸದಸ್ಯರ ಬಳಿ ಸಾಕಷ್ಟು ಕೈ ಸಾಲ ಮಾಡಿಕೊಂಡಿದ್ದಾರೆ.

ರಾಮನಗರ[ಅ.16)  ಸಿಎಂ ಕುಮಾರಸ್ವಾಮಿ ಅವರಿಗಿಂತ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಹೆಚ್ಚು ಸಿರಿವಂತೆ. ಆದರೆ ಸಾಲವನ್ನು ಮಾಡಿಕೊಂಡಿದ್ದಾರಂತೆ. ಹಾಗಾದರೆ ಏನಿದು ಕೂತುಹಲಕಾರಿ ಮಾಹಿತಿ ಇಲ್ಲಿದೆ ಒಂದು ವಿವರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಎಂ ಗಿಂತ ಪತ್ನಿ ಸಿರಿವಂತೆ : ಅನಿತಾ ಕುಮಾರಸ್ವಾಮಿ ಆಸ್ತಿ ಮೊತ್ತವೆಷ್ಟು..?

ಅನಿತಾ ಕುಮಾರಸ್ವಾಮಿ ಕುಟುಂಬ ಸದಸ್ಯರಿಂದ ಪಡೆದುಕೊಂಡ ಕೈ ಸಾಲದ ವಿವರ
ಭವಾನಿ ರೇವಣ್ಣ [ಓರಗೆ ಅಕ್ಕ] 3,26,565 ರೂ.
ಎಚ್‌.ಡಿ ಕುಮಾರಸ್ವಾಮಿ [ಗಂಡ] 14,51,633 ರೂ.
ಎಚ್‌.ಡಿ.ರಮೇಶ್‌[ಭಾವ] 1,00,97,000 ರೂ.

ತಮ್ಮ ಬಳಿ ಮುಕ್ಕಾಲು ಕೆಜಿ ಚಿನ್ನ, 12.5 ಕೆಜಿ ಬೆಳ್ಳಿ ಹಾಗೂ 4 ಕ್ಯಾರೆಟ್‌ ವಜ್ರ ಇದೆ ಎಂದೂ ಅನಿತಾ ಘೋಷಿಸಿದ್ದಾರೆ. ಅವರ ಬಳಿ ಅಮೆರಿಕದ ಹಾರ್ಲೆ ಡೇವಿಡ್ಸನ್‌ ಬೈಕ್‌ ಕೂಡ ಇರುವುದು ವಿಶೇಷ.