ಬೆಂಗಳೂರು (ಸೆ.29): ಹುದ್ದೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಕೇಡರ್‌ನ ಐಎಎಸ್‌ ಅಧಿಕಾರಿ ರಮಣದೀಪ್‌ ಚೌಧರಿ ಅವರನ್ನು ಕೇಂದ್ರ ನೀರು ಸರಬರಾಜು ಹಾಗೂ ನೈರ್ಮಲ್ಯ ಖಾತೆ ಸಚಿವ ರಮೇಶ್‌ ಜಿಗಜಿಣಗಿ ಅವರ ಆಪ್ತ ಕಾರ್ಯದರ್ಶಿಯಾಗಿ ನಿಯೋಜನೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಐಎಎಸ್‌ ಅಧಿಕಾರಿ ವಯೋ ನಿವೃತ್ತಿಯಿಂದ ತೆರವಾದ ಸಹಕಾರ ಇಲಾಖೆ ಕಾರ್ಯದರ್ಶಿ ಹುದ್ದೆಯನ್ನು ಕೃಷಿ ಇಲಾಖೆ ಕಾರ್ಯದರ್ಶಿ ಅವರಿಗೆ ಹೆಚ್ಚುವರಿಯಾಗಿ ಹಾಗೂ ಮೈಸೂರು ಪ್ರಾದೇಶಿಕ ಆಯುಕ್ತ ಎಂ.ಎ.ಕುಂಜಪ್ಪ ಅವರ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ಬೆಂಗಳೂರು ಪ್ರಾದೇಶಿಕ ಆಯುಕ್ತರಿಗೆ ಹೆಚ್ಚುವರಿಯಾಗಿ ಮತ್ತು ಎನ್‌.ಎಂ.ಪನಾಲಿ ಅವರ ನಿವೃತ್ತಿಯಿಂದ ತೆರವಾದ ಅಂತರ್ಜಾಲ ನಿರ್ದೇಶಕ ಹುದ್ದೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಿಗೆ ಹೆಚ್ಚುವರಿಯಾಗಿ ವಹಿಸಿ, ಸರ್ಕಾರ ಆದೇಶಿಸಿದೆ.