ಕಾಂಗ್ರೆಸ್ ಬೆಂಬಲಿಸುತ್ತೋ, ಬಿಡುತ್ತೋ ಗೋ ಹತ್ಯೆ ನಿಷೇಧವನ್ನ ನಾನು ಬೆಂಬಲಿಸುತ್ತೇನೆ: ರಾಮಲಿಂಗಾ ರೆಡ್ಡಿ

First Published 31, Mar 2018, 1:48 PM IST
Ramalinga Reddy Support to Beef Ban
Highlights

ಬಿಜೆಪಿ ಅಶ್ವಮೇಧ ಯಾಗವನ್ನು ರಾಜ್ಯದಲ್ಲಿ ಕಟ್ಟಿ ಹಾಕುತ್ತೇವೆ. ರಾಜ್ಯಕ್ಕೆ ಬಿಜೆಪಿ ಕೊಡುಗೆ ಏನು ಎಂಬುದನ್ನು ಮುಂದಿನ ದಿನಗಳಲ್ಲೂ ಬಿಚ್ಚಿಡುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. 

ಬೆಂಗಳೂರು (ಮಾ. 31):  ಬಿಜೆಪಿ ಅಶ್ವಮೇಧ ಯಾಗವನ್ನು ರಾಜ್ಯದಲ್ಲಿ ಕಟ್ಟಿ ಹಾಕುತ್ತೇವೆ. ರಾಜ್ಯಕ್ಕೆ ಬಿಜೆಪಿ ಕೊಡುಗೆ ಏನು ಎಂಬುದನ್ನು ಮುಂದಿನ ದಿನಗಳಲ್ಲೂ ಬಿಚ್ಚಿಡುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. 

ಆರ್.ಎಸ್.ಎಸ್. ಕಾರ್ಯಕರ್ತರನ್ನು ಕೊಂದವರು  ಈಗಾಗಲೇ ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೂ ಆರೋಪಿಗಳು ಪಾತಾಳದಲ್ಲಿದ್ದರೂ ಹಿಡಿದು ಜೈಲಿಗೆ ಹಾಕುತ್ತೇವೆ ಎನ್ನುತ್ತಿದ್ದಾರೆ. ಜೈಲಿಗೆ ಹಾಕೋಕೆ ಇವರ್ಯಾರು?   22 ಜನರನ್ನ ಸಂಘಪರಿವಾರದವರು  ಕೊಂದಿದ್ದಾರೆ.  ಈ ಬಗ್ಗೆ  ಮೋದಿ  ಅಮಿತ್ ಶಾ ಚಕಾರ ಎತ್ತಿಲ್ಲ ಎಂದಿದ್ದಾರೆ. 

ಗೋ  ಹತ್ಯೆ ನಿಷೇಧಕ್ಕೆ ನನ್ನ ವೈಯಕ್ತಿಕ ಬೆಂಬಲ ಇದೆ.   ಕಾಂಗ್ರೆಸ್ ಬೆಂಬಲಿಸುತ್ತೋ ಬಿಡುತ್ತೋ  ಗೋ ಹತ್ಯೆ ನಿಷೇಧವನ್ನ ನಾನು ಬೆಂಬಲಿಸುತ್ತೇನೆ.  ಗೋವುಗಳ ಮೇಲೆ ನನಗೆ ಪ್ರೀತಿ ಇದೆ.  ಗೋ ಹತ್ಯೆ ನಿಲ್ಲಬೇಕು.  ಬಿಜೆಪಿ ಗೋ ಹತ್ಯೆ ನಿಲ್ಲಿಸಲಿ. ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾರೆ.  ಗೋ ಮಾಂಸ ರಫ್ತಿಗೆ ನಿಷೇಧ ಹೇರಲಿ.  ತನ್ನಿಂದ ತಾನೇ ಗೋ ಹತ್ಯೆ ಕಡಿಮೆ ಆಗಲಿದೆ. ಶೇ  75 ರಷ್ಟು ಗೋ ಹತ್ಯೆ ನಿಲ್ಲಲಿದೆ ಎಂದಿದ್ದಾರೆ. 
 

loader