ಅಶೋಕ್ ಸತ್ಯ ಹರಿಶ್ಚಂದ್ರರು ಎಂದು ಗೊತ್ತಾಗಿದೆ, ನಾನು ಅವರ ಡಿಎನ್'ಎ ಟೆಸ್ಟ್ ಮಾಡಿಸಿದ್ದೀನಿ

First Published 1, Feb 2018, 9:11 PM IST
Ramalinga reddy slams R Ashok
Highlights

ಅಶೋಕ್ ಸತ್ಯ ಹರಿಶ್ಚಂದ್ರರು ಎಂದು ಗೊತ್ತಾಗಿದೆ, ನಾನು ಅವರ ಡಿಎನ್'ಎ ಟೆಸ್ಟ್ ಮಾಡಿಸಿದ್ದೀನಿ

ಬೆಂಗಳೂರು(ಫೆ.01): ಬಿಜೆಪಿ ನಾಯಕ ಆರ್. ಅಶೋಕ್ ಒಬ್ಬರೆ ಸತ್ಯ ಹರಿಶ್ಚಂದ್ರರು ನಾನು ಅವರ ಡಿಎನ್'ಎ ಟೆಸ್ಟ್ ಮಾಡಿಸಿದ್ದೀನಿ. ಅವರು ಸತ್ಯ ಹರಿಶ್ಚಂದ್ರರ ಸಂಬಂಧಿಕರು ಎಂದು ಡಿಎನ್'ಎ ಟೆಸ್ಟ್ ಬಳಿಕ ಗೊತ್ತಾಗಿದೆ. ನಾವು ಆಗಾಗ ಸುಳ್ಳು ಹೇಳುತ್ತೇವೆ. ಅಶೋಕ್ ಅವರು ಸುಳ್ಳು ಹೇಳೋದೆ ಇಲ್ಲ' ಎಂದು ಮಾಜಿ ಉಪ ಮುಖ್ಯಮಂತ್ರಿಯ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದರು.

ಓವೈಸಿ ಜೊತೆ ಬಿಜೆಪಿ ನಾಯಕರ ಮಾತುಕತೆ ಬಗ್ಗೆ ವಿಚಾರ ಪ್ರಸ್ತಾಪಿಸಿದ ಅವರು, ಅಶೋಕ್ ಗೃಹ ಸಚಿವರಾಗಿದ್ದಾಗಲೇ ಅತಿ ಹೆಚ್ಚು ಕೊಲೆಗಳಾಗಿವೆ. ನಮ್ಮ ಅವಧಿಯಲ್ಲಿ ಅಷ್ಟೋಂದು ಹತ್ಯೆಗಳಾಗಿಲ್ಲಾ. ಈ ಬಗ್ಗೆ ಬಹಿರಂಗ ಚರ್ಚೆ ನಡೆಸಲು ಸಿದ್ಧ. ನಾನು ಸುಳ್ಳು ಹೇಳ್ತೇನೆ ಎಂದು ಅವರು ಆರೋಪ ಮಾಡ್ತಾರೆ. ಅಶೋಕ್ ಮಾತ್ರವಲ್ಲ, ಶೋಭಾ, ಸಿ.ಟಿ ರವಿ ಕೂಡ ಸತ್ಯಹರಿಶ್ಚಂದ್ರ ವಂಶಸ್ಥರು. ಅವರೆಲ್ಲರೂ ಎಂದೂ ಅಪ್ಪಿತಪ್ಪಿಯೂ ಸುಳ್ಳು ಹೇಳುವುದಿಲ್ಲಾ. ಇವರನ್ನು ಡಿಎನ್'ಎ ಪರೀಕ್ಷೆಗೆ ಒಳಪಡಿಸಬೇಕು' ಎಂದು ವ್ಯಂಗ್ಯವಾಗಿವೇ ಟೀಕಾ ಪ್ರಹಾರ ಮಾಡಿದರು.

loader