ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ – ಖರ್ಗೆ ಆಪ್ತನ ಫೈಟ್..!

Ramalinga Reddy Doughter Contest In Election
Highlights

ಬಿಜೆಪಿಯ ಹಾಲಿ ಶಾಸಕ ವಿಜಯಕುಮಾರ್‌ಗೆ ಟಿಕೆಟ್ ದೊರೆಯಲಿದೆ. ಜೆಡಿಎಸ್ ನಿಂದ ರವಿಕುಮಾರ್ ಪ್ರತಿಸ್ಪರ್ಧಿಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ನಲ್ಲಿ ಮಾತ್ರ ಟಿಕೆಟ್‌ಗಾಗಿ ಭಾರಿ ಪೈಪೋಟಿ ಇದೆ.

ಜಯನಗರ : ಬಿಜೆಪಿಯ ಹಾಲಿ ಶಾಸಕ ವಿಜಯಕುಮಾರ್‌ಗೆ ಟಿಕೆಟ್ ದೊರೆಯಲಿದೆ. ಜೆಡಿಎಸ್ ನಿಂದ ರವಿಕುಮಾರ್ ಪ್ರತಿಸ್ಪರ್ಧಿಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ನಲ್ಲಿ ಮಾತ್ರ ಟಿಕೆಟ್‌ಗಾಗಿ ಭಾರಿ ಪೈಪೋಟಿ ಇದೆ.

ಪ್ರಭಾವಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಹಾಗೂ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ಯು.ಬಿ. ವೆಂಕಟೇಶ್ ಪ್ರಬಲ ಆಕಾಂಕ್ಷಿಗಳಾಗಿರುವುದು ಇದಕ್ಕೆ ಕಾರಣ.

ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿರುವ ಸೌಮ್ಯ ರೆಡ್ಡಿ, ಚುನಾವಣೆಗಿಳಿಯಲು ಒಂದು ವರ್ಷದ ಹಿಂದೆಯೇ ತಾಲೀಮು ಆರಂಭಿಸಿದ್ದರು. ಮೂಲಗಳ ಪ್ರಕಾರ ಖರ್ಗೆ ಅವರು ಯು.ಬಿ.ವೆಂಕಟೇಶ್‌ಗಾಗಿ ತೀವ್ರ ಪ್ರಯತ್ನ ಮಾಡಲಿದ್ದಾರೆ.

ಹೀಗಾಗಿ ಈ ಕ್ಷೇತ್ರದ ಟಿಕೆಟ್ ನಿರ್ಧಾರ ಹೈಕಮಾಂಡ್ ಮಟ್ಟದಲ್ಲೇ ನಿರ್ಧಾರವಾಗುವ ಸಾಧ್ಯತೆ ಮೂಡಿಸಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ.ಸಿ. ವೇಣುಗೋಪಾಲ್ ಹಾಗೂ ಸ್ಥಳೀಯ ಮನ್ಸೂರ್ ಅಲಿಖಾನ್ ಸಹ ಪ್ರಯತ್ನ ನಡೆಸಿದ್ದಾರೆ.

loader