ಬಿಟಿಎಂ ಲೇಔಟ್ ಶಾಸಕ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ಸುದ್ದಿ  ಟೌನ್ ಹಾಲ್'​​ನಲ್ಲಿ ದಕ್ಷಿಣ ಭಾಗದ ಪೌರಕಾರ್ಮಿಕರಿಗೆ ಉಚಿತ ಬಿಸಿಯೂಟ ಕಾರ್ಯಕ್ರಮ ಉದ್ಘಾಟನೆ ವೇಳೆ ಹೊರಬಿತ್ತು. ಕಳೆದ ೧೦ ವರ್ಷ ಗಳಿಂದ ಸಾಮಾಜಿಕ ಸೇವೆ ಮಾಡುತ್ತಿದ್ದೇನೆ. ಈಗ ಸ್ಟೇಟ್ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದೇನೆ. ಮುಂದೆ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಲ್ಲುತ್ತೇನೆ ಅಂತ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರು(ಜ.03): ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬರ್ತಾರೆ ಎನ್ನುವ ಮಾತಿದೆ. ಇದಕ್ಕೆ ತಕ್ಕಂತೆಯೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‌ಅವರ ಪುತ್ರಿ ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ಸೂಚನೆ ನೀಡಿದ್ದಾರೆ. ಎಲ್ಲಿಂದ ಸ್ಪರ್ಧೆ? ಶಾಸಕ ಅಥವಾ ಕಾರ್ಪೊರೇಟ್ ಸ್ಥಾನಕ್ಕಾ? ಈ ಕುತೂಹಲಕ್ಕೆ ಇಲ್ಲಿದೆ ಉತ್ತರ ಇಲ್ಲಿದೆ ನೋಡಿ.

ರಾಮಲಿಂಗಾರೆಡ್ಡಿ ಮಗಳು ರಾಜಕೀಯಕ್ಕೆ!: ಕಾರ್ಪೊರೇಟರ್​ ಅಥವಾ ಎಂಎಲ್​ಎ ಸ್ಥಾನಕ್ಕೆ ಸ್ಪರ್ಧಿ?

ಬಿಟಿಎಂ ಲೇಔಟ್ ಶಾಸಕ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ಸುದ್ದಿ ಟೌನ್ ಹಾಲ್'​​ನಲ್ಲಿ ದಕ್ಷಿಣ ಭಾಗದ ಪೌರಕಾರ್ಮಿಕರಿಗೆ ಉಚಿತ ಬಿಸಿಯೂಟ ಕಾರ್ಯಕ್ರಮ ಉದ್ಘಾಟನೆ ವೇಳೆ ಹೊರಬಿತ್ತು. ಕಳೆದ ೧೦ ವರ್ಷ ಗಳಿಂದ ಸಾಮಾಜಿಕ ಸೇವೆ ಮಾಡುತ್ತಿದ್ದೇನೆ. ಈಗ ಸ್ಟೇಟ್ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದೇನೆ. ಮುಂದೆ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಲ್ಲುತ್ತೇನೆ ಅಂತ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ತಿಳಿಸಿದ್ದಾರೆ.

ಕಾರ್ಪೊರೇಟರ್ ಅಥವಾ ಅಸೆಂಬ್ಲಿ ಎಲೆಕ್ಷನ್​​​'​ಗೆ ನಿಲ್ಲುತ್ತೀರಾ ಎನ್ನುವ ಪ್ರಶ್ನೆಗೆ ಸೌಮ್ಯ ಬಳಿ ಉತ್ತರ ಇರಲಿಲ್ಲ. ಅವಕಾಶ ಸಿಕ್ಕರೆ ಓಕೆ ಅಂತಿದ್ದಾರೆ. ಇನ್ನು ೬೮೫೪ ಪೌರ ಕಾರ್ಮಿಕ ರಿಗೆ ಉಚಿತ ಊಟಕ್ಕೆ ಚಾಲನೆ ಸಿಕ್ಕಿತು. ಈ ವೇಳೆ ಮೇಯರ್ ಪದ್ಮಾವತಿ ಮಾತನಾಡಿ, ಪೌರಕಾರ್ಮಿಕರ ವಿಮೆ ಹಣವನ್ನ ಗುತ್ತಿಗೆದಾರರಿಗೆ ಕೊಡದೆ ಪಾಲಿಕೆ ನೇರವಾಗಿ ಪಾವತಿಸುವ ನಿರ್ಧಾರ ಹೊರ ಹಾಕಿದ್ರು. ಅದೇನಿದ್ದರೂ ಸಾರಿಗೆ ಸಚಿವರ ಮಗಳು ಜನಪರ ಕೆಲಸ ಹೇಗೆ‌ ಮಾಡುತ್ತಾರೆ? ಪಕ್ಷ ಇದನ್ನು ಹೇಗೆ ಪರಿಗಣಿಸುತ್ತದೆ ಎಂದು ಕಾದು ನೋಡಬೇಕಿದೆ.