ನವದೆಹಲಿ[ಆ.17]: ಕಳೆದೊಂದು ವಾರದಿಂದ ಅಯೋಧ್ಯೆಯ ರಾಮ ಜನ್ಮಭೂಮಿ ಹಾಗೂ ಬಾಬ್ರಿ ಮಸೀದಿಯ ವಿವಾದಿತ ಭೂಮಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಪಂಚ ಪೀಠ ವಿಚರಣೆ ನಡೆಸುತ್ತಿದೆ. ಸದ್ಯ ರಾಮಲಲ್ಲಾ ವೀರಜಮಾನ್ ಪರ ಹಿರಿಯ ವಕೀಲ ತಮ್ಮ ವಾದ ಮಂಡಿಸುತ್ತಾ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೂ ಮೊದಲು ರಾಮ ಮಂದಿರ ಇತ್ತೆಂದು ವಾದಿಸಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ತಮ್ಮ ವಾದ ಮಂಡಿಸಿದ ರಾಮಲಲ್ಲಾ ವೀರಜಮಾನ್ ಪರ ಹಿರಿಯ ವಕೀಲ ಸಿ. ಎಸ್ ವೈದ್ಯನಾಥನ್ 'ಬಾಬ್ರಿ ಮಸೀದಿಯ ಕಂಬಗಳ ಮೇಲೆ ರಾಮ, ಕೃಷ್ಣ ಹಗೂ ಶಿವ ಹೀಗೆ ಹಿಂದೂ ದೇವರ ಚಿತ್ರಗಳಿವೆ. ಯಾವುದೇ ಮಸೀದಿಯಲ್ಲಿ ಇಂತಹ ದೃಶ್ಯ ನೋಡಲು ಸಿಗುವುದಿಲ್ಲ' ಎಂದಿದ್ದಾರೆ. ಅಲ್ಲದೇ ಈ ವಿಚಾರವನ್ನು ಉಲ್ಲೇಖಿಸಿದ್ದ 1950ರಲ್ಲಿ ಅಯೋಧ್ಯೆಯಲ್ಲಿ ತಪಾಸಣೆಗೆ ನೇಮಿಸಿದ್ದ ಅಧಿಕಾರಿಗಳು ಸಂಗ್ರಹಿಸಿದ್ದ ವರದಿಯನ್ನೂ ಸಲ್ಲಿಸಿದ್ದಾರೆ. 

ಅಯೋಧ್ಯೆ ರಾಮನ ಜನ್ಮಸ್ಥಳ ಎಂಬುದಕ್ಕೆ ನಂಬಿಕೆಯೇ ಸಾಕ್ಷಿ

ಇದನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳ ಪಂಚಪೀಠ 'ಇವುಗಳನ್ನು ಮಸೀದಿಗಾಗಿಯೇ ನಿರ್ಮಿಸಿದ್ದಾರೆಯೇ ಅಥವಾ ಮಸೀದಿಯನ್ನೇ ಹೀಗೆ ಬಳಸಿದ್ದಾರೆಯೇ?' ಎಂದು ಪ್ರಶ್ನಿಸಿದೆ.

ಜಡ್ಜ್ ಗಳ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಕೀಲ ವೈದ್ಯನಾಥನ್ 'ಈ ರಚನೆಗಳು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿವೆ. ಹೀಗಾಗಿ ಇದು ಮಸೀದಿ ಎನ್ನುವುದು ಅಸಾಧ್ಯ. ರಸ್ತೆಯಲ್ಲಿ ಮುಸಲ್ಮಾನರು ನಮಾಜ್ ಮಾಡಿದರೆ, ಅದು ಮಸೀದಿಯಾಗಲು ಸಾಧ್ಯವಿಲ್ಲ. ಭಾರತಪ ಪುರಾತತ್ರವ ಇಲಾಖೆ ಅನ್ವಯ ವಿವಾದಿತ ಭೂಮಿಯಾಗಲಿ ಕಟ್ಟಡವೊಂದಿತ್ತು. ಅದು ಕ್ರಿ. ಪೂ. 2ನೇ ಶತಮಾನದಲ್ಲಿ ನಿರ್ಮಾಣಗೊಂಡಿತ್ತೆಂದು ಇತಿಹಾಸದದಲ್ಲಿ ಉಲ್ಲೇಖವಾಗಿದೆ' ಎಂದು ತಿಳಿಸಿದ್ದಾರೆ.