ಮಡಿಕೇರಿಯಲ್ಲಿ ರಾಷ್ಟ್ರಪತಿ, ದೇಶಾದ್ಯಂತ ಕಿಸಾನ್ ಕ್ರಾಂತಿ; ಫೆ.6ರ ಟಾಪ್ 10 ಸುದ್ದಿ!
ವೀರ ಸೇನಾನಿಗಳ ನಾಡು ಮಡಿಕೇರಿಗೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಲಕಾವೇರಿಯಲ್ಲಿ ಪೂಜೆ ಬಳಿಕ ಜ.ತಿಮ್ಮಯ್ಯ ಸ್ಮಾರಕ ಉದ್ಘಾಟನೆ ಮಾಡಿದ್ದಾರೆ. ದೇಶಾದ್ಯಂತ ರೈತರು ಚಕ್ಕಾ ಜಾಮ್ ಪ್ರತಿಭಟನೆ ಮೂಲಕ ಕೇಂದ್ರದ ವಿರುದ್ದ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಪ್ರಿಯಾಂಕ ಚೋಪ್ರಾ ಫೋಟೋ ವೈರಲ್, ಚೆನ್ನೈ ಟೆಸ್ಟ್ ಸೇರಿದಂತೆ ಫೆಬ್ರವರಿ 6ರ ಟಾಪ್ 10 ಸುದ್ದಿ.
ಕೊರೋನಾ ನಿಯಂತ್ರಣಕ್ಕೆ ಭಾರತದ ಸಿಂಪಲ್ ಟೆಕ್ನಿಕ್ಸ್: ಭೇಷ್ ಎಂದ WHO...
ಭಾರತದ ಸರಳ ಕೊರೋನಾ ಪರಿಹಾರಗಳಿಗೆ WHO ಭೇಷ್ | ದೇಶದ ಸಿಂಪಲ್ ಐಡಿಯಾಗಳೇ ರಕ್ಷಾ ಕವಚವಾಗಿದ್ದು ಹೇಗೆ..?
ದಕ್ಷಿಣ ಕಾಶ್ಮೀರದಲ್ಲಿ ರಾಷ್ಟ್ರಪತಿ: ಮಡಿಕೇರಿ ಜ.ತಿಮ್ಮಯ್ಯ ಮ್ಯೂಸಿಯಂನಲ್ಲೇನಿದೆ?...
ಭಾರತ-ಚೀನಾ ಯುದ್ದದಲ್ಲಿ ಪಾಲ್ಗೊಂಡಿದ್ದ ಯುದ್ದ ಟ್ಯಾಂಕರ್, ಪಾಕಿಸ್ತಾನದೊಂದಿಗೆ ಸೆಣಸಾಡಿದ ಮಿಗ್ ಯುದ್ಧ ವಿಮಾನ, ಮತ್ತೊಂದೆಡೆ ಹುತಾತ್ಮ ವೀರ ಯೋಧರಿಗಾಗಿ ನಿರ್ಮಾಣವಾಗಿರುವ ಯುದ್ಧ ಸ್ಮಾರಕ. ಇದನ್ನೆಲ್ಲಾ ನೋಡ್ತಿದ್ರೆ ನಾವು ಭೂಮಿಯಲ್ಲಿದ್ದೀವಾ ಎಂಬ ಸಂಶಯ ಮೂಡದಿರದು. ಇಂಥದ್ದೊಂದು ರೋಮಾಂಚಕಾರಿ, ಅದ್ಭುತ ಜಗತ್ತು ತೆರೆದುಕೊಂಡಿರೋದು ಮಂಜಿನ ನಗರಿ, ವೀರ ಸೇನಾನಿಗಳ ನಾಡು ಮಡಿಕೇರಿಯಲ್ಲಿ.
LRC : ಕಿಸಾನ್ ಕ್ರಾಂತಿ, ಹೆದ್ದಾರಿ ಬಂದ್, ಅನ್ನದಾತನ ಆಕ್ರೋಶಕ್ಕೆ ಮಣಿಯುತ್ತಾ ಕೇಂದ್ರ.?...
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರೈತ ಸಂಘಟನೆಗಳು ಇಂದು ‘ಚಕ್ಕಾ ಜಾಮ್’ಗೆ ಕರೆ ಕೊಟ್ಟಿವೆ. ಈ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ಸೂಚಿಸಿದೆ.
ಚೆನ್ನೈ ಟೆಸ್ಟ್; ರೂಟ್ ಡಬಲ್ ಸೆಂಚುರಿಗೆ ಹಲವು ದಾಖಲೆ ಉಡೀಸ್!...
ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅಬ್ಬರಿಸಿದೆ. ಮೊದಲೆರೆಡು ದಿನ ಮೇಲುಗೈ ಸಾಧಿಸಿದ್ದು, ಟೀಂ ಇಂಡಿಯಾವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರ ನಡುವೆ ನಾಯಕ ಜೋ ರೂಟ್ ಡಬಲ್ ಸೆಂಚುರಿ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಇನ್ಜಮಾನ್ ಉಲ್ ಹಕ್ ದಾಖಲೆ ಪುಡಿ ಪುಡಿ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾರ ಹಾಟ್ ಫೋಟೋಶೂಟ್ ಫೋಟೋ ವೈರಲ್!...
ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ಸಾಕಷ್ಟು ಹೆಸರು ಮಾಡಿದ್ದಾರೆ. ಎರಡೂ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಪ್ರಿಯಾಂಕಾ. ಇತ್ತೀಚೆಗೆ ಅವರ ಚಿತ್ರ ದಿ ವೈಟ್ ಟೈಗರ್ ಬಿಡುಗಡೆಯಾಗಿದ್ದು, ನಟಿಯದ್ದೇ ಸುದ್ದಿ ಸದ್ದು ಮಾಡುತ್ತಿವೆ. ಅದರ ಜೊತೆಗೆ ಪ್ರಿಯಾಂಕಾ ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.
ಭಾರತದ ರೈತರ ಬಗ್ಗೆ ಮಾತನಾಡಿದ್ದಕ್ಕೆ ಬ್ರಿಟಿಷ್ ನಟಿಗೆ ರೇಪ್ ಬೆದರಿಕೆ...
ಭಾರತದಲ್ಲಿ ರೈತ ಪ್ರತಿಭಟನೆ ಪರ-ವಿರೋಧಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವಾಗಲೇ ಖ್ಯಾತ ನಟಿ ಕೊಟ್ರು ಶಾಕಿಂಗ್ ಸ್ಟೇಟ್‌ಮೆಂಟ್
ಭಾರತದ ಆರ್ಥಿಕತೆ ಬಗ್ಗೆ ಆರ್‌ಬಿಐ ಭವಿಷ್ಯ...
ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕತೆ ಬಗ್ಗೆ ಭವಿಷ್ಯ ಒಂದನ್ನು ನುಡಿದಿದೆ. ಆರ್ಥಿಕತೆ ಭಾರೀ ಚೇತರಿಕೆ ಕಾಣಲಿದೆ ಎಂದು ಭವಿಷ್ಯ ನುಡಿದಿದೆ.
ಸರ್ಕಾರದಿಂದ ಭರ್ಜರಿ ಆಫರ್; ಟಾಟಾ ನೆಕ್ಸಾನ್, ಟಿಗೋರ್ ಎಲೆಕ್ಟ್ರಿಕ್ ಕಾರಿನ ಮೇಲೆ 3 ಲಕ್ಷ ರೂ ಡಿಸ್ಕೌಂಟ್!...
ಎಲೆಕ್ಟ್ರಿಕ್ ಕಾರು ಖರೀದಿಯನ್ನು ಉತ್ತೇಜಿಸಲು ಇದೀಗ ಸರ್ಕಾರ ಭರ್ಜರಿ ಆಫರ್ ಘೋಷಿಸಿದೆ. ಟಾಟಾ ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಬರೋಬ್ಬರಿ 3.02 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ. ಈ ಮೊತ್ತವನ್ನು ಸರ್ಕಾರ ನೀಡಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ರೈತರ ಪ್ರತಿಭಟನೆ: ರಾಷ್ಟ್ರದ್ರೋಹಿ ಪಟ್ಟ ಕಟ್ಟಿಕೊಳ್ಳಲು ಸಿದ್ಧ ಎಂದ ಜೆಡಿಎಸ್...
ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನು ಈ ಬಗ್ಗೆ ಜೆಡಿಎಸ್ ತನ್ನ ನಿಲುವು ಸ್ಪಷ್ಟಪಡಿಸಿದೆ.
'ರಾತ್ರಿ ವೇಳೆ ಅಪ್ರಾಪ್ತ ಬಾಲಕಿಯರಿಂದ ಇಂತ ಕೆಲಸ : ರಕ್ಷಣೆ...
ರಾತ್ರಿ ವೇಳೆ ಇಂತಹ ಕೆಲಸದಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕಿಯರನ್ನು ರಕ್ಷಣೆ ಮಾಡಲಾಗಿದೆ. ಮಂಗಳೂರಿನಲ್ಲಿ ಕಾರ್ಯಾಚರಣೆ ಮಾಡಿ ರಕ್ಷಿಸಲಾಗಿದೆ.