ದಕ್ಷಿಣ ಕಾಶ್ಮೀರದಲ್ಲಿ ರಾಷ್ಟ್ರಪತಿ: ಮಡಿಕೇರಿ ಜ.ತಿಮ್ಮಯ್ಯ ಮ್ಯೂಸಿಯಂನಲ್ಲೇನಿದೆ?
ಭಾರತ-ಚೀನಾ ಯುದ್ದದಲ್ಲಿ ಪಾಲ್ಗೊಂಡಿದ್ದ ಯುದ್ದ ಟ್ಯಾಂಕರ್, ಪಾಕಿಸ್ತಾನದೊಂದಿಗೆ ಸೆಣಸಾಡಿದ ಮಿಗ್ ಯುದ್ಧ ವಿಮಾನ, ಮತ್ತೊಂದೆಡೆ ಹುತಾತ್ಮ ವೀರ ಯೋಧರಿಗಾಗಿ ನಿರ್ಮಾಣವಾಗಿರುವ ಯುದ್ಧ ಸ್ಮಾರಕ. ಇದನ್ನೆಲ್ಲಾ ನೋಡ್ತಿದ್ರೆ ನಾವು ಭೂಮಿಯಲ್ಲಿದ್ದೀವಾ ಎಂಬ ಸಂಶಯ ಮೂಡದಿರದು. ಇಂಥದ್ದೊಂದು ರೋಮಾಂಚಕಾರಿ, ಅದ್ಭುತ ಜಗತ್ತು ತೆರೆದುಕೊಂಡಿರೋದು ಮಂಜಿನ ನಗರಿ, ವೀರ ಸೇನಾನಿಗಳ ನಾಡು ಮಡಿಕೇರಿಯಲ್ಲಿ. ಅಷ್ಟಕ್ಕೂ ರಾಷ್ಟ್ರಪತಿ ರಮಾನಾಥ್ ಕೋವಿಂದು ಲೋಕಾರ್ಪಣೆ ಮಾಡುತ್ತಿರುವ ಭಾರತದ ಮಹಾನ್ ದೇಶಪ್ರೇಮಿ ಜ.ತಿಮ್ಮಯ್ಯ ಹೆಸರಿನ ಮ್ಯುಸಿಯಂನಲ್ಲೇನಿದೆ?

ದೇಶದ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಸನ್ನಿಸೈಡ್ ಮನೆಯನ್ನು ವಾರ್ ಮ್ಯೂಸಿಯಂ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು.

2006ರಲ್ಲಿ ತಿಮ್ಮಯ್ಯ ಅವರ ನೂರನೇ ವರ್ಷದ ಹುಟ್ಟು ಹಬ್ಬಕ್ಕೆ ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮಡಿಕೇರಿಗೆ ಆಗಮಿಸಿದ್ದರು. ಈ ಸಂದರ್ಭ ರಾಜ್ಯ ಸರಕಾರ ತಿಮ್ಮಯ್ಯ ಮನೆಯನ್ನು ಮ್ಯೂಸಿಯಂ ಮಾಡುವುದಾಗಿ ಘೋಷಣೆ ಮಾಡಿತ್ತು.

14 ವರ್ಷಗಳ ಬಳಿಕ ಈಗ ಕೊಡಗು ಜಿಲ್ಲೆಯ ಜನತೆಯ ಕನಸು ನನಸಾಗಿದೆ.

ವಿಶೇಷ ಎಂದರೆ ಈಗಿನ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಈ ವಾರ್ ಮ್ಯೂಸಿಯಂ ಅನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

ಜನರಲ್ ತಿಮ್ಮಯ್ಯ -ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಫೋರಂ ಪದಾಧಿಕಾರಿಗಳು ಈ ವಾರ್ ಮ್ಯೂಸಿಯಂ ನಿರ್ಮಾಣಕ್ಕೆ ಹಗಲಿರುಳು ದುಡಿದಿದ್ದಾರೆ. ಅವರ ಪ್ರಯತ್ನದಿಂದಾಗಿ ಇಷ್ಟೊಂದು ಸುಂದರವಾದ ಮ್ಯೂಸಿಯಂ ನಿರ್ಮಾಣವಾಗಿದೆ.

ಭಾರತ-ಪಾಕಿಸ್ತಾನ,ಭಾರತ-ಚೀನಾ ಯುದ್ಧದಲ್ಲಿ ಭಾಗಿಯಾಗಿದ್ದ ಟಿ55 ಯುದ್ಧ ಟ್ಯಾಂಕರ್, ಮಿಗ್21 ಯುದ್ಧ ವಿಮಾನ,1947 ರಿಂದ ಇಲ್ಲಿಯವರೆಗೆ ಮಡಿದ ವೀರಯೋಧರಿಗಾಗಿ ನಿರ್ಮಾಣವಾದ ಯುದ್ಧ ಸ್ಮಾರಕ, ನೌಕಾಪಡೆಯಲ್ಲಿನ ಲಂಗರು ಈ ಮ್ಯೂಸಿಯಂ ಪ್ರಮುಖ ಆಕರ್ಷಣೆ.

ಮನೆಯೊಳಗೆ ಪ್ರವೇಶಿಸಿದರೆ ಜನರಲ್ ತಿಮ್ಮಯ್ಯ ಅವರ ಜೀವನ ಚರಿತ್ರೆ, ಅವರ ಮದುವೆ ಹಾಗೂ ಹಲವು ಅಮೂಲ್ಯ ಪೋಟೋಗಳು, ಸೇನೆಗೆ ಸೇರಿದ ವಿವಿಧ ಬಗೆಯ ಬಂದೂಕುಗಳು, ತಿಮ್ಮಯ್ಯ ಅವರು ನಡೆಸಿದ ಯುದ್ಧಗಳ ಸಂಪೂರ್ಣ ಚಿತ್ರಣವಿದೆ.

ಜನ್ಮ ಶತಮಾನೋತ್ಸವ ಸಂದರ್ಭ ರಾಷ್ಟ್ರಪತಿ ಉಪಸ್ಥಿತಿಯಲ್ಲಿ ಘೋಷಣೆಯಾಗಿದ್ದ ಯೋಜನೆ ದಶಕದ ಬಳಿಕ ಉದ್ಘಾಟನೆಗೆ ಸಿದ್ಧವಾಗಿದೆ.

ಅದನ್ನ ಉದ್ಘಾಟಿಸಲು ರಾಷ್ಟ್ರಪತಿ ಬರುತ್ತಿರೋದು ಮತ್ತೊಂದು ವಿಶೇಷ. ರಾಷ್ಟ್ರಪತಿ ಜತೆ ಸೇನಾ ಮುಖ್ಯಸ್ಥರು, ರಾಜ್ಯಪಾಲ ಸೇರಿದಂತೆ ಹಲವು ಗಣ್ಯರು ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.

ಇಂಥದ್ದೊಂದು ವಿಶೇಷ ಮ್ಯೂಸಿಯಂ ಉದ್ಘಾಟನೆಗೆ ರಾಷ್ಟ್ರದ ಪ್ರಥಮ ಮಹಿಳೆ ಸವಿತಾ ಕೋವಿಂದ್ ಅವರೂ ರಾಷ್ಟ್ರಪತಿಯವರ ಜೊತೆಯಲ್ಲಿ ಕೊಡುಗು ಜಿಲ್ಲೆಗೆ ಆಗಮಿಸಿದ್ದಾರೆ.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವರಾದ ವಿ. ಸೋಮಣ್ಣ ಅವರು ಸಹ ರಾಷ್ಟ್ರಪತಿಯವರ ಜೊತೆ ಆಗಮಿಸಿದರು.

ಘನತೆವೆತ್ತ ರಾಷ್ಟ್ರಪತಿಯವರನ್ನು ಜಿಲ್ಲಾಡಳಿತದ ವತಿಯಿಂದ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು.

ರಾಷ್ಟ್ರಪತಿಯವರು ನಮ್ಮ ದೇಶದ ಅಪ್ರತಿಮ ಹೋರಾಟಗಾರ ಜ.ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೂ ಮುನ್ನ ತಲಕಾವೇರಿ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಪೂಜೆ ಸಲ್ಲಿಸಿದರು.