Asianet Suvarna News Asianet Suvarna News

ರೈತರ ಪ್ರತಿಭಟನೆ: ರಾಷ್ಟ್ರದ್ರೋಹಿ ಪಟ್ಟ ಕಟ್ಟಿಕೊಳ್ಳಲು ಸಿದ್ಧ ಎಂದ ಜೆಡಿಎಸ್

ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನು ಈ ಬಗ್ಗೆ ಜೆಡಿಎಸ್ ತನ್ನ ನಿಲುವು ಸ್ಪಷ್ಟಪಡಿಸಿದೆ.

JDS Leader Talks about Farmers Protest against agriculture laws rbj
Author
Bengaluru, First Published Feb 6, 2021, 4:08 PM IST

ಬೆಂಗಳೂರು, (ಫೆ.6): ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ, ಹೋರಾಟಕ್ಕೆ ಸಂಬಂಧಿಸಿದಂತೆ ಜೆಡಿಎಸ್ ತನ್ನ ನಿಲುವು ಪ್ರಕಟಿಸಿದೆ.

ಈ  ಬಗ್ಗೆ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹೋರಾಟಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲವನ್ನು ನೀಡಲಿದ್ದು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸುತ್ತೇವೆ  ಸ್ಪಷ್ಟಪಡಿಸಿದರು.

ದಿಲ್ಲಿ ಗಡಿಯಲ್ಲಿ ಹೈ ಅಲರ್ಟ್‌ : ಸಾಮಾಜಿಕ ಜಾಲತಾಣಗಳ ಮೇಲೂ ಹದ್ದಿನ ಕಣ್ಣು

ಸರ್ಕಾರದ ನಡವಳಿಕೆಯನ್ನು ಟೀಕಿಸಿದ ಮಾತ್ರಕ್ಕೆ ರಾಷ್ಟ್ರದ್ರೋಹಿ ಎನ್ನುವುದಾದರೆ ಸಾವಿರ ಸಲ ರಾಷ್ಟ್ರದ್ರೋಹಿ ಪಟ್ಟ ಕಟ್ಟಿಕೊಳ್ಳಲು ಸಿದ್ದರಿರುವುದಾಗಿ ಹೇಳಿದರು.

ನಮ್ಮದು ರೈತಪರವಾದ ಪಕ್ಷ, ರೈತರಿಗೆ ಅನ್ಯಾಯವಾದಾಗ ತಾವು ಸುಮ್ಮನೆ ಕೂರುವುದಿಲ್ಲ. ಸರ್ಕಾರದ ವಿರುದ್ಧ ಮಾತನಾಡಿದರೆ ರೈತರನ್ನು ಅಪರಾಧಪಟ್ಟಿಗೆ ಸೇರಿಸುತ್ತಾರೆ. ದೇಶದ್ರೋಹಿಗಳ ಪಟ್ಟಿಗೆ ಸೇರಿಸಿ ಕೇಸು ಹಾಕುತ್ತಾರೆ. ಕೇಸು ಹಾಕುವ ಮೂಲಕ ರೈತರ ಹೋರಾಟವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

Follow Us:
Download App:
  • android
  • ios