ರಾಮ ಮಂದಿರ ಭೂಮಿ ಪೂಜೆಗೆ ತಯಾರಿ, BSYಗೆ ಅಂಟಿದ ಕೊರೋನಾ ಮಹಾಮಾರಿ; ಆ.03ರ ಟಾಪ್ 10 ಸುದ್ದಿ!
ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಪ್ರಧಾನಿ ಮೋದಿ ಭೂಮಿ ಸೇರಿದಂತೆ ಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಮಂದಿರ ನಿರ್ಮಾಣ ಸಂತಸದ ಬೆನ್ನಲ್ಲೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಕೊರೋನಾ ವಕ್ಕರಿಸಿದೆ. ಮಾರಕ ಕೊರೋನಾ ವೈರಸ್‌ನ್ನು ಚೀನಾ ತನ್ನ ಮಿಲಿಟರಿ ಲ್ಯಾಬ್‌ನಲ್ಲಿ ತಯಾರಿಸಿರುವ ಮಾಹಿತಿ ಬಹಿರಂಗಗೊಂಡಿದೆ. ಅಭಿಮಾನಿಗಳಿಗೆ ಯಶ್ ಗುಡ್‌ನ್ಯೂಸ್, ಟಿಕ್‌ಟಾಕ್ ಖರೀದಿಗೆ ಅಂಬಾನಿ ತಯಾರಿ ಸೇರಿದಂತೆ ಆಗಸ್ಟ್ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಮಿಲಿಟರಿ ಲ್ಯಾಬ್‌ನಲ್ಲಿ ಕೊರೋನಾ ತಯಾರಿಸಿದ್ದ ಡ್ರ್ಯಾಗನ್: ಚೀನಾ ಬಂಡವಾಳ ಬಯಲು!...
ಚೀನಾ ಆಡಳಿತದಲ್ಲಿರುವ ಹಾಂಗ್‌ಕಾಂಗ್‌ನಿಂದ ಓಡಿಹೋಗಿ ಅಮೆರಿಕಾ ತಲುಪಿರುವ ಹಾಂಗ್‌ಕಾಂಗ್ ಸ್ಕೂಲ್ ಆಫ್ ಹೆಲ್ತ್‌ನ ಹಿರಿಯ ವೈರಾಲಾಜಿಸ್ಟ್ ಡಾ. ಲೀ ಮೆಂಗ್ ಯಾನ್ ಚೀನಾ ಮಾರಕ ಕೊರೋನಾ ವೈರಸ್‌ನ್ನು ಇಲ್ಲಿನ ಮಿಲಿಟರಿ ಲ್ಯಾಬ್‌ನಲ್ಲಿ ತಯಾರಿಸಿದೆ ಎಂದು ಹೇಳಿದೆ. ಅಲ್ಲದೇ ಇದು ವೆಟ್ ಮಾರ್ಕೆಟ್‌ನಿಂದ ಹರಡಿತು ಎಂದಿರುವ ಚೀನಾ ಮಾತನ್ನೂ ತಳ್ಳಿ ಹಾಕಿದ್ದಾರೆ. ಈ ವಿಚಾರ ಬಯಲಾಗುತ್ತಿದ್ದಂತೆಯೇ ಚೀನಾ ಈ ವಿಜ್ಞಾನಿ ಆರೋಪ ಸತ್ಯಕ್ಕೆ ದೂರವಾಗಿದ್ದು ಎಂದಿದ್ದಾರೆ.
ರಾಮ ಮಂದಿರ ಭೂಮಿ ಪೂಜೆ ಆಮಂತ್ರಣ ಪತ್ರಿಕೆ ವೈರಲ್: ಮೋದಿ ಜೊತೆ ಮೂವರ ಹೆಸರು!...
ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಇನ್ನು ಎರಡೇ ದಿನಗಳು ಉಳಿದಿವೆ. ಹೀಗಿರುವಾಗ ಕೇಸರಿ ಬಣ್ಣದ ಆಮಂತ್ರಣ ಪತ್ರಿಕೆಯೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಹೊರತುಪಡಿಸಿ ಇನ್ನು ಕೇವಲ ಮೂರು ಮಂದಿಯ ಹೆಸರು ಶಾಮೀಲಾಗಿದೆ. ಇದು ಅತಿಥಿಗಳ ಪಟ್ಟಿಯನ್ನು ಕಡಿತಗೊಳಿಸಿರುವ ಸಂಕೇತವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಬರಹ: ಕಾಂಗ್ರೆಸ್ ಮುಖಂಡನ ಬಂಧನ
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕೆಪಿಸಿಸಿ ಸೋಷಿಯಲ್ ಮೀಡಿಯಾ ಸೆಕ್ರೆಟರಿ ಆನಂದ್ ಪ್ರಸಾದ್ ಆಕ್ಷೇಪಾರ್ಹ ಬರಹ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ(ಭಾನುವಾರ) ನಗರದ ಕಬ್ಬನ್ ಪಾರ್ಕ್ ಪೊಲೀಸರು ಆನಂದ್ ಪ್ರಸಾದ್ ಅವರನ್ನ ಬಂಧಿಸಿದ್ದಾರೆ.
ಬಿಎಸ್‌ವೈ ಬೆನ್ನಲ್ಲೇ ಮಗಳಿಗೂ ಕೊರೋನಾ, ಆಸ್ಪತ್ರೆಗೆ ದಾಖಲು!...
ಕರ್ನಾಟಕ ಸಿಎಂ ಬಿ. ಎಸ್. ಯಡಿಯೂರಪ್ಪಗೆ ಕೊರೋನಾ ಸೋಂಕು ಇರುವುದು ದೇಢವಾದ ಬೆನ್ನಲ್ಲೇ ಅವರನ್ನು ಭೇಟಿಯಾಗಿದ್ದವರೆಲ್ಲರಿಗೂ ಕೊರೋನಾ ಟೆಸ್ಟ್ ಮಾಡಲಾಗತ್ತಿದೆ. ಅಲ್ಲದೇ ಅವರನ್ನು ಕೆಲ ದಿನಗಳಿಂದ ಸಂಪರ್ಕಿಸಿದವರನ್ನು ಕ್ವಾರಂಟೈನ್ ಕೂಡಾ ಮಾಡಲಾಗಿದೆ. ಸದ್ಯ ಟೆಸ್ಟ್ ವರದಿ ಬಂದಿದ್ದು, ಬಿಎಸ್‌ವೈ ಪುತ್ರನಿಗೆ ಕೊರೋನಾ ನೆಗೆಟಿವ್ ಬಂದರೆ, ಮಗಳಿಗೆ ಪಾಸಿಟಿವ್ ಬಂದಿದೆ.
ಗುಡ್ ನ್ಯೂಸ್: ರಾಜ್ಯದಲ್ಲಿ ಕೊರೋನಾ ಸೋಂಕಿತರ ಚೇತರಿಕೆಯ ಪ್ರಮಾಣ ಹೆಚ್ಚಳ...
ಕರ್ನಾಟಕದಲ್ಲಿ ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾ ಸೋಂಕು ಪೀಡಿತರಾಗುತ್ತಿದ್ದಾರೆ. ಆ ಆತಂಕದ ನಡುವೆ ಚೇತರಿಕೆ ಪ್ರಮಾಣದಲ್ಲೂ ಏರಿಕೆಯಾಗಿರುವುದು ಸಮಾಧಾನ ಮೂಡಿಸಿದೆ. ಈ ಬಗ್ಗೆ ಸಚಿವ ಸುಧಾಕರ್ ಅಂಕಿ-ಅಂಶಗಳ ಮೂಲಕ ಮಾಹಿತಿ ನಿಡಿದ್ದಾರೆ.
IPL ಆಯೋಜನೆಗೆ ಅಭಿಮಾನಿಗಳಿಂದ ವಿರೋಧ; #BoycottIPL ಅಭಿಯಾನ ಆರಂಭ!...
ಕೊರೋನಾ ವೈರಸ್, ಲಾಕ್‌ಡೌನ್, ಸರ್ಕಾರದ ಮಾರ್ಗಸೂಚಿ, ಏಷ್ಯಾಕಪ್, ಟಿ20 ವಿಶ್ವಕಪ್ ಟೂರ್ನಿ ಸೇರಿದಂತೆ ಹಲವು ಅಡೆತಡೆ ನಿವಾಸಿದ BCCI ಇದೀಗ IPL2020 ಆಯೋಜನೆಗೆ ಸಜ್ಜಾಗಿದೆ. ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ತಯಾರಿಗಳು ಭರದಿಂದ ಸಾಗಿದೆ. ಇದರ ನಡುವೆ ಅಭಿಮಾನಿಗಳೇ ಐಪಿಎಲ್ ಟೂರ್ನಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಕಿಂಗ್ ಸ್ಟಾರ್ - ರೋರಿಂಗ್ ಸ್ಟಾರ್ fansಗೆ ಗುಡ್ ನ್ಯೂಸ್!...
ಕೊರೋನಾ ವೈರಸ್ ಆರ್ಭಟದಿಂದ ನಟ-ನಟಿಯರು ಇಷ್ಟು ದಿನ ಮನೆಯಲ್ಲಿಯೇ ಇದ್ದರು. ಆದರೆ ಸೋಂಕು ಕಡಿಮೆಯಾಗದ ಕಾರಣ ಸಿನಿಮಾ ಸ್ಟಾರ್‌ಗಳು ನಿ ಧಾನವಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಶ್ರೀ ಮುರುಳಿ ಅಭಿನಯದ ಮದಜಗ ಆಗಸ್ಟ್‌ನಲ್ಲಿ ಸೆಟ್ ಏರಲಿದ್ದು, ಕೆಜಿಎಫ್-2 ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ.
ಐಶ್ವರ್ಯಾಳ ಅಣ್ಣನಾಗಿ ನಟಿಸಲು ಕೇಳಿದಾಗ, ಹೇಗಿತ್ತು ಸಲ್ಮಾನ್ ರಿಯಾಕ್ಷನ್?
ಸಲ್ಮಾನ್ ಖಾನ್, ಐಶ್ವರ್ಯಾ ರೈ ಪ್ರೇಮಕಥೆ ಎಲ್ಲರಿಗೂ ತಿಳಿದೆ ಇದೆ. ಅವರ ಅನ್ ಸ್ಕ್ರೀನ್ ಹಾಗೂ ಅಫ್ ಸ್ಕ್ರೀನ್ ಪ್ರೀತಿಗೆ ಫ್ಯಾನ್ಸ್ ಸೇರಿ ಬಾಲಿವುಡ್ ಸಹ ಫಿದಾ ಆಗಿತ್ತು. ಅವರ ಲವ್‌ಸ್ಟೋರಿ ಚಾಲ್ತಿಯಲ್ಲಿದಾಗಲೇ ಒಬ್ಬ ಸಿನಿಮಾ ನಿರ್ಮಾಪಕರು ಸಲ್ಮಾನ್ ಖಾನ್‌ರನ್ನು ಐಶ್ವರ್ಯಾ ರೈ ಅಣ್ಣನಾಗಿ ನಟಿಸಲು ಕೇಳಿದ್ದರು.
ಟಿಕ್‌ಟಾಕ್ ಭಾರತೀಯ ಘಟಕ ಖರೀದಿಗೆ ರಿಲಯನ್ಸ್ ಆಸಕ್ತಿ?...
ಕಿರು ವಿಡಿಯೋ ಸೇವೆಯ ಟಿಕ್‌ಟಾಕ್‌ನ ಅಮೆರಿಕ ಘಟಕ ಖರೀದಿಗೆ ಮೈಕ್ರೋಸಾಫ್ಟ್ ಸಜ್ಜಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಟಿಕ್‌ಟಾಕ್‌ನ ಭಾರತೀಯ ಘಟಕ ಖರೀದಿಗೆ ಭಾರತದ ನಂ.1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಕೂಡಾ ಮುಂದಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ರಿಲಯನ್ಸ್ ಜೊತೆಗೆ ಕೋಲ್ಕತಾ ಮೂಲದ ಉದ್ಯಮಿ ಸಂಜೀವ್ ಗೋಯಂಕಾ ಕೂಡಾ ಈ ರೇಸ್‌ನಲ್ಲಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಭಾರತದ ಹೆಮ್ಮೆಯ ಟಾಟಾ ಮೋಟಾರ್ಸ್‌ನಿಂದ ಶೀಘ್ರದಲ್ಲಿ 4 ಕಾರು ಬಿಡುಗಡೆ!...
ಗರಿಷ್ಠ ಸುರಕ್ಷತೆ, ಅತ್ಯುತ್ತಮ ದಕ್ಷತೆ, ಆಕರ್ಷಕ ಶೈಲಿ, ಕಡಿಮೆ ಬೆಲೆ ಸೇರಿದಂತೆ ಎಲ್ಲಾ ರೀತಿಯಲ್ಲೂ ಇತರ ಕಾರುಗಳಿಂದ ಟಾಟಾ ಮೋಟಾರ್ಸ್ ಕಾರುಗಳ ಬೆಸ್ಟ್ ಎನಿಸಿಕೊಂಡಿದೆ. ಟಾಟಾ ನೆಕ್ಸಾನ್, ಹ್ಯಾರಿಯರ್, ಟಿಯಾಗೋ, ಅಲ್ಟ್ರೋಜ್, ಟಿಗೋರ್ ಸೇರಿದಂತೆ ಹಲವು ಕಾರುಗಳು ಭಾರತದಲ್ಲಿ ಸಂಚಲನ ಮೂಡಿಸಿದೆ. ಇದೀಗ ಟಾಟಾ ಮೋಟಾರ್ಸ್ 4 ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಭಾರತದ ಕಾರು ಮಾರುಕಟ್ಟೆಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ.