ಸಿಎಂ ಬಿಎಸ್‌ವೈ ಬೆನ್ನಲ್ಲೇ ಮಗಳು ಪದ್ಮಾವತಿಗೂ ಕೊರೋನಾ ಸೋಂಕು| ಮಗ ವಿಜಯೇಂದ್ರ ವರದಿ ನೆಗೆಟಿವ್| ಯಡಿಯೂರಪ್ಪ ಹಾಗೂ ಮಗಳು ಪದ್ಮಾವತಿ ಮಣಿಪಾಲ್ ಆಸ್ಪತ್ರೆಗೆ ದಾಖಲು

ಬೆಂಗಳೂರು(ಆ.03) ಕರ್ನಾಟಕ ಸಿಎಂ ಬಿ. ಎಸ್. ಯಡಿಯೂರಪ್ಪಗೆ ಕೊರೋನಾ ಸೋಂಕು ಇರುವುದು ದೇಢವಾದ ಬೆನ್ನಲ್ಲೇ ಅವರನ್ನು ಭೇಟಿಯಾಗಿದ್ದವರೆಲ್ಲರಿಗೂ ಕೊರೋನಾ ಟೆಸ್ಟ್ ಮಾಡಲಾಗತ್ತಿದೆ. ಅಲ್ಲದೇ ಅವರನ್ನು ಕೆಲ ದಿನಗಳಿಂದ ಸಂಪರ್ಕಿಸಿದವರನ್ನು ಕ್ವಾರಂಟೈನ್ ಕೂಡಾ ಮಾಡಲಾಗಿದೆ. ಸದ್ಯ ಟೆಸ್ಟ್ ವರದಿ ಬಂದಿದ್ದು, ಬಿಎಸ್‌ವೈ ಪುತ್ರನಿಗೆ ಕೊರೋನಾ ನೆಗೆಟಿವ್ ಬಂದರೆ, ಮಗಳಿಗೆ ಪಾಸಿಟಿವ್ ಬಂದಿದೆ.

"

ಭಾನುವಾರ ಟ್ವೀಟ್ ಒಂದನ್ನು ಮಾಡಿದ್ದ ಸಿಎಂ ಯಡಿಯೂರಪ್ಪ ತಮಗೆ ಕೊರೋನಾ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದರು. ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನೆ ಎಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.

Scroll to load tweet…

ಆದರೀಗ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರ ಕೊರೋನಾ ವರದಿ ಬಂದಿದ್ದು, ಮಗಳು ಪದ್ಮಾವತಿಗೂ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಅವರೂ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 

Scroll to load tweet…

ಇನ್ನು, ಸಿಎಂ ಮಗ ವಿಜಯೇಂದ್ರ ಮತ್ತು ಅವರ ಪಿಎಗೆ ನೆಗೆಟಿವ್ ಬಂದಿದೆ. ಸಿಎಂ ಒಎಸ್​ಡಿ ವಿಜಯ ಮಹಂತೇಶ್ ಅವರಿಗೂ ನೆಗೆಟಿವ್ ಬಂದಿದೆ. ಇನ್ನೂ ಕೆಲವರ ರಿಪೋರ್ಟ್ ಇವತ್ತು ಬರಬೇಕಿದೆ. ಸದ್ಯ, ವಿಜಯೇಂದ್ರ ಅವರು ಒಂದು ವಾರ ಸೆಲ್ಫ್ ಕ್ವಾರಂಟೈನ್​ನಲ್ಲಿ ಇರಲಿದ್ದಾರೆ.

"