ರಕ್ಷಾ ಬಂಧನಕ್ಕೆ ಚೀನಾ ರಾಖಿ ನಿಷೇಧ, ಅಂತಿಮ ಪ್ರಯೋಗದಲ್ಲಿ ಕೊರೋನಾ ಔಷಧ; ಜು.23ರ ಟಾಪ್ 10 ಸುದ್ದಿ!
ರಾಮ ಮಂದಿರ ನಿರ್ಮಾಣಕ ಕಾರ್ಯಕ್ಕೆ ಪ್ರಧಾನಿ ಮೋದಿ ಗುದ್ದಲಿ ಪೂಜೆ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ವಿರೋಧಗಳು ವ್ಯಕ್ತವಾಗಿದೆ. ಇತ್ತ ರಕ್ಷಾ ಬಂಧನಕ್ಕೆ ಚೀನಾ ರಾಖಿಗಳಿಗ ಭಾರತೀಯು ಬಹಿಷ್ಕಾರ ಹಾಕಿದ್ದಾರೆ. ಆಕ್ಸ್‌ಫರ್ಡ್ ಅಸ್ಟ್ರಾ ಝೆನೇಕಾ ಕೊರೋನಾ ಔಷಧ (ಕೊವಿಶೀಲ್ಡ್) ಅಂತಿಮ ಹಂತದ ಪ್ರಯೋಗದಲ್ಲಿದೆ. ಐಪಿಎಲ್ ಆಯೋಜನೆ ಕುರಿತು ಬಿಸಿಸಿಐ ಪ್ರಕಟಣೆಗೆ ದುಬೈ ಕಾಯುತ್ತಿದೆ. ನೆಗಟೀವ್ ರೋಲ್‌ನಲ್ಲಿ ಸಮಂತ, ಅಮೆರಿಕ ಉದ್ಯಮಿಗಳಿಗೆ ಸ್ವಾಗತ ಸೇರಿದಂತೆ ಜುಲೈ 23ರ ಟಾಪ್ 10 ಸುದ್ದಿ ಇಲ್ಲಿವೆ.
ರಕ್ಷಾ ಬಂಧನಕ್ಕೆ ತಯಾರಿ, ಚೀನಾ ರಾಖಿಗಿಲ್ಲ ಬೇಡಿಕೆ!...
ಲಡಾಖ್ ಗಡಿ ಸಂಘರ್ಷದ ಬಳಿಕ ಚೀನಾ ವಿರುದ್ದ ಪ್ರತಿಯೊಬ್ಬರು ಆಕ್ರೋಶ ಹೊರಹಾಕುತ್ತಿದ್ದಾರೆ. ಚೀನಿ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದಾರೆ. ಇದೀಗ ಭಾರತ ರಕ್ಷಾ ಬಂಧನಕ್ಕೆ ತಯಾರಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಚೀನಾ ರಾಖಿಗಳಿಗೆ ಬೇಡಿಕೆ ಕುಸಿದಿದೆ. ಭಾರತದ ರಾಖಿಗಳಿಗೆ ಭಾರಿ ಬೇಡಿಕೆ ಕಂಡು ಬರುತ್ತಿದೆ.
ಬಿಜೆಪಿ ಸೇರಿದ 24 ಗಂಟೆಯಲ್ಲಿ ರಾಜಕೀಯಕ್ಕೆ ಗುಡ್ ಬೈ ಹೇಳಿದ ಮಾಜಿ ಫುಟ್ಬಾಲ್ ಪಟು ಹುಸೈನ್!...
ವಿದಾಯದ ಬಳಿಕ ಕ್ರೀಡಾಪಟುಗಳು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಇದರಲ್ಲಿ ಹಲವರು ಯಶಸ್ವಿಯಾಗಿದ್ದರೆ, ಮತ್ತೆ ಕೆಲವರು ಮೊದಲ ಪ್ರಯತ್ನದಲ್ಲೇ ಹಿನ್ನಡೆ ಅನುಭವಿಸಿದ್ದಾರೆ. ಆದರೆ ಭಾರತದ ಮಾಜಿ ಫುಟ್ಬಾಲ್ ಪಟು ಬಿಜೆಪಿ ಸೇರಿದ 24 ಗಂಟೆಯಲ್ಲೇ ರಾಜಕೀಯಕ್ಕೇ ಗುಡ್‌ಬೈ ಹೇಳೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ರಾಮ ಮಂದಿರಕ್ಕೆ ಪ್ರಧಾನಿ ಮೋದಿ ಅಡಿಗಲ್ಲು..!
ರಾಮ ಮಂದಿರ ಕುರಿತಂತೆ ಸುಮಾರು ಮುನ್ನೂರು ವರ್ಷಗಳ ಹೋರಾಟ ಇದೀಗ ತಾರ್ಕಿಕ ಹಂತಕ್ಕೆ ಬಂದು ನಿಂತಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇದೀಗ ಪ್ರಧಾನಿ ಮೋದಿ ಸ್ವತಃ ಗುದ್ದಲಿ ಪೂಜೆ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ವಿರೋಧಗಳು ವ್ಯಕ್ತವಾಗಿವೆ.
1000 ರೂ.ಗಿಂತ ಕಡಿಮೆಗೆ ಸಿಗುತ್ತೆ ಕೊರೋನಾ ಔಷಧ..! ಕೊನೆಯ ಪ್ರಯೋಗವಷ್ಟೇ ಬಾಕಿ...
ಆಕ್ಸ್‌ಫರ್ಡ್ ಅಸ್ಟ್ರಾ ಝೆನೇಕಾ ಔಷಧ (ಕೊವಿಶೀಲ್ಡ್) ದುರ್ಬಲರಿಗೂ, ಅತ್ಯಂತ ಕಡೆಯ ವ್ಯಕ್ತಿಗೂ ಲಭ್ಯವಾಗಿಸಬೇಕಾಗಿದೆ. ಆರೋಗ್ಯ ಮೂಲಸೌಕರ್ಯ, ಆರೋಗ್ಯ ನಿಯಮಗಳು, ಅಗತ್ಯ ಪ್ರಯೋಗಗಳು ಮತ್ತು ಪರೀಕ್ಷೆಗಳನ್ನು ಅನುಸರಿಸುವುದರಿಂದ ಇದು ಸಾಧ್ಯವಿದೆ ಎಂದು ಸೇರಂ ಸಂಸ್ಥೆಯ ಸಿಇಒ ಅದರ್ಪೂನವಲ್ಲ ತಿಳಿಸಿದ್ದಾರೆ.
ಐಪಿಎಲ್ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿಗೆ ಕಾಯ್ತಿದ್ದೇವೆ: ಇಸಿಬಿ
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯುಎಇನಲ್ಲಿ ನಡೆಯುವುದು ಬಹುತೇಕ ಪಕ್ಕಾ ಎನಿಸಿದೆ, ಆದಾಗಿಯೂ ಬಿಸಿಸಿಐ ಅಧಿಕೃತ ಹೇಳಿಕೆಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಕಾಯುತ್ತಿದೆ.
ಸಮಂತಾ ಅಕ್ಕಿನೇನಿ -ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವ ಸ್ಲೀಪರ್ ಏಜೆಂಟ್?
ಡಾಲಿವುಡ್‌ನ ಟಾಪ್ ನಟಿ ಸಮಂತಾ ಅಕ್ಕಿನೇನಿ ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವ ಸ್ಲೀಪರ್ ಏಜೆಂಟ್ ಎಂಬ ಸುದ್ದಿ ಬಂದಿದೆ. ಗಾಬರಿಯಾಗ ಬೇಡಿ ಇದು ತೆಲಗು ನಟಿಯ ನಿರ್ವಹಿಸಲಿರುವ ಹೊಸ ಪಾತ್ರ. ಸಮಂತಾ ನೆಗಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿದೆ ಡಿಟೇಲ್ಸ್.
ಕಾರು ಅಪಘಾತ: ಪ್ರಾಣಾಪಾಯದಿಂದ ಪಾರಾದ ಡಿ.ಎಚ್.ಶಂಕರಮೂರ್ತಿ ಪುತ್ರ...
ಮಾಜಿ ಉಪ ಸಭಾವತಿ ಡಿ.ಎಚ್.ಶಂಕರಮೂರ್ತಿ ಅವರ ಪುತ್ರ ಕರ್ನಾಟಕ ರಾಜ್ಯ ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾದ ಘಟನೆ ತುಮಕೂರು ಜಿಲ್ಲೆಯ ಶಿರಾ ನಗರದ ಬಳಿ ಇಂದು(ಗುರುವಾರ) ಬೆಳಿಗ್ಗೆ ನಡೆದಿದೆ. ಆದರೆ, ಡಿ.ಎಸ್. ಅರುಣ್ ಅವರು ಅಪಘಾತದಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಮೆರಿಕದ ಉದ್ಯಮಿಗಳಿಗೆ ಮೋದಿ ರತ್ನಗಂಬಳಿ!...
ಭಾರತಕ್ಕೆ ಜಾಗತಿಕ ಉದ್ಯಮಿಗಳನ್ನು ಆಹ್ವಾನಿಸುವ ಪರಿಪಾಠ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ಅಮೆರಿಕ ಉದ್ಯಮಿಗಳಿಗೆ ಭಾರತದಲ್ಲಿ ಬಂಡವಾಳ ಹೂಡಲು ರತ್ನಗಂಬಳಿ ಹಾಸಿದ್ದಾರೆ. ಭಾರತದಲ್ಲಿ ಬಂಡವಾಳ ಹೂಡಿಕೆ ಈಗ ಪ್ರಶಸ್ತ ಸಮಯ. ಭಾರತ ಅವಕಾಶಗಳಿಗೆ ಮುಕ್ತವಾಗಿ ತೆರೆದುಕೊಂಡಿದೆ. ಇಂತಹ ಅವಕಾಶ ಇನ್ನೊಂದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಲಾಕ್‌ಡೌನ್‌ನಲ್ಲಿ ಸಿಕ್ತು ಇಂಟರ್‌ನೆಟ್: 10 ವರ್ಷದ ನಂತ್ರ ಪೋಷಕರ ಸೇರಿದ ಬಾಲಕ...
ಕೊರೋನಾ ವೈರಸ್ ಸಂದರ್ಭ ಲಾಕ್‌ಡೌನ್‌ನಿಂದ ಜನ ಕಷ್ಟಪಡುತ್ತಿದ್ದಾರೆ. ಇನ್ನೂ ಕೆಲವೊಂದು ಘಟನೆಗಳಲ್ಲಿ ಜನರಿಗೆ ಒಳಿತಾಗುತ್ತಿದೆ. ಇಂತಹುದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವಿಜಯಪುರ: ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದ ಮಹಿಳೆ, ಯುವಕನ ಬರ್ಬರ ಕೊಲೆ..!...
ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಮಹಿಳೆ ಹಾಗೂ ಯುವಕನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಅಲಿಯಾಬಾದ ಗ್ರಾಮದ ತೋಟದ ಮನೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಅಲಿಯಾಬಾದ್ ಗ್ರಾಮದ ಯುವಕ ಅಮರನಾಥ ಸೊಲ್ಲಾಪುರ(25) ಅದೇ ಗ್ರಾಮದ ಮಹಿಳೆ ಸುನೀತಾ ತಳವಾರ (35) ಕೊಲೆಗೀಡಾದವರು.