ರಕ್ಷಾ ಬಂಧನಕ್ಕೆ ತಯಾರಿ, ಚೀನಾ ರಾಖಿಗಿಲ್ಲ ಬೇಡಿಕೆ!

ಲಡಾಖ್ ಗಡಿ ಸಂಘರ್ಷದ ಬಳಿಕ ಚೀನಾ ವಿರುದ್ದ ಪ್ರತಿಯೊಬ್ಬರು ಆಕ್ರೋಶ ಹೊರಹಾಕುತ್ತಿದ್ದಾರೆ. ಚೀನಿ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದಾರೆ. ಇದೀಗ ಭಾರತ ರಕ್ಷಾ ಬಂಧನಕ್ಕೆ ತಯಾರಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಚೀನಾ ರಾಖಿಗಳಿಗೆ ಬೇಡಿಕೆ ಕುಸಿದಿದೆ. ಭಾರತದ ರಾಖಿಗಳಿಗೆ ಭಾರಿ ಬೇಡಿಕೆ ಕಂಡು ಬರುತ್ತಿದೆ.

People are refusing to buy Chinese rakhis due to tensions between India and China

ನವದೆಹಲಿ(ಜು.23): ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷದ ಬಳಿಕ ಭಾರತದಲ್ಲಿ ಚೀನಿ ವಸ್ತುಗಳನ್ನು ಬಹಿಷ್ಕರಿಸಲಾಗುತ್ತದೆ. ಚೀನಿ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಗಡಿ ಸಂಘರ್ಷದ ಬಳಿಕ ಭಾರತದಲ್ಲಿ ರಕ್ಷಾ ಬಂಧನಕ್ಕೆ ತಯಾರಿಗಳು ನಡೆಯುತ್ತಿದೆ. ಪ್ರತಿ ಬಾರಿ ಚೀನಾ ರಾಖಿಗಳು ಭಾರತದಲ್ಲಿ ಅಬ್ಬರಿಸುತ್ತಿತ್ತು. ಆದರೆ ಇದೀಗ ಚೀನಾ ರಾಖಿಗೆ ಬೇಡಿಕೆ ಇಲ್ಲದಾಗಿದೆ. 

ಗಲ್ವಾನ್‌ನಲ್ಲಿ ಹತ ತನ್ನ ಯೋಧರ ಅಂತ್ಯಸಂಸ್ಕಾರಕ್ಕೂ ಚೀನಾ ಕ್ಯಾತೆ!

ಭಾರತೀಯರು ಇದೀಗ ಭಾರತದ ರಾಖಿಗಳನ್ನೇ ಕೇಳುತ್ತಿದ್ದಾರೆ. ಚೀನಾ ರಾಖಿಗಳಿಗೆ ಬೇಡಿಕೆ ಇಲ್ಲದಾಗಿದೆ. ಹೀಗಾಗಿ ನಾವು ಭಾರತದಲ್ಲೇ ತಯಾರಾದ, ಸ್ಥಳೀಯ ರಾಖಿಗಗಳನ್ನೇ ಮಾರಾಟಕ್ಕಿಟ್ಟಿದ್ದೇವೆ ಎಂದು ಮಾರಾಟಗಾರರು ಹೇಳುತ್ತಿದ್ದಾರೆ.  ನಾವು ಪ್ರತಿ ವರ್ಷ ರಾಖಿ ಖರೀದಿಸುವಾಗ ಚೀನಾ ರಾಖಿಗಳು ಮಾತ್ರ ಸಿಗುತಿತ್ತು. ಆದರೆ ಈ ಬಾರಿ ಭಾರತದ ರಾಖಿಗಳು ಖರೀದಿಗೆ ಲಭ್ಯವಿದೆ. ನಾವೀಗ ಭಾರತದ ರಾಖಿ ಖರೀದಿಸಿದ ಸಂತಸದಲ್ಲಿದ್ದೇವೆ ಎಂದು ಹಿಮಾಚಲ ಪ್ರದೇಶದ ಶಿಮ್ಲಾ ನಿವಾಸಿ ಅಂಚಲ್ ಹೇಳಿದ್ದಾರೆ.

ಲಡಾಖ್‌ನ ಲೆಹ್‌ನಲ್ಲಿ ಯೋಧರ ಜೊತೆ ರಕ್ಷಣಾ ಸಚಿವ..! ಇಲ್ಲಿವೆ ಫೋಟೋಸ್

ನಮ್ಮ ಸೈನಿಕರ ಮೇಲೆ ಆಕ್ರಮಣ ಮಾಡಿದ ದೇಶದ ವಸ್ತುಗಳನ್ನು ನಾವು ಖರೀದಿಸುವುದಿಲ್ಲ. ನಮ್ಮ ವಸ್ತುಗಳಿಗೆ ನಾವು ಆದ್ಯತೆ ನೀಡುತ್ತೇವೆ. ಇದರಿಂದ ನಮ್ಮ ದೇಶದ ಆರ್ಥಿಕತೆಯೂ ಸದೃಢವಾಗಲಿದೆ ಎಂದು ರಾಖಿ ಖರೀದಿಸಲು ಬಂದ ಗ್ರಾಹಕರು ಹೇಳುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಮಾರಾಟಗಾರರು ಕೇವಲ ಭಾರತದ ರಾಖಿಗಳನ್ನು ಮಾತ್ರ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾರೆ. ಚೀನಾ ರಾಖಿಗಳ ಮಾರಾಟ ಮಾಡುತ್ತಿಲ್ಲ. ೀ ಹಿಂದೆ ಚೀನಾ ರಾಖಿಗಳು ಭರ್ಜರಿ ಮಾರಾಟವಾಗುತ್ತಿತ್ತು. ಇಷ್ಟೇ ಅಲ್ಲ ಚೀನಾ ರಾಖಿಗಳ ಮೇಲೆ ಗರಿಷ್ಠ ಲಾಭವೂ ಇತ್ತು. ದೇಶದ ಹಿತದೃಷ್ಟಿ ಹಾಗೂ ಗ್ರಾಹಕರ ಆಗ್ರಹದಿಂದ ನಾವೂ ಕೂಡ ಚೀನಾ ರಾಖಿ ಹಾಗೂ ವಸ್ತುಗಳ ಮಾರಾಟ ಮಾಡುತ್ತಿಲ್ಲ ಎಂದು ಉತ್ತರ ಪ್ರದೇಶದ ಮಾರಾಟಗಾರರು ಹೇಳಿದ್ದಾರೆ.

ಕೊರೋನಾ ವೈರಸ್ ಕಾರಣ ಈ ಹಿಂದೆ ಇದ್ದಂತ ಬೇಡಿಕೆ, ಖರೀದಿಗಳು ಕಾಣುತ್ತಿಲ್ಲ. ಆದರೆ ಖರೀದಿಗೆ ಬರವು ಗ್ರಾಹಕರೆಲ್ಲಾ ಮೇಡ್ ಇನ್ ಇಂಡಿಯಾ ರಾಖಿ ಕೇಳುತ್ತಿದ್ದಾರೆ ಎಂದು ಕೋಲ್ಕತಾ ಶಾಪ್‌ಕೀಪರ್ ಅಜಯ್ ಹೇಳಿದ್ದಾರೆ. ಆಗಸ್ಟ್ 3 ರಂದು ಭಾರತದಲ್ಲಿ ರಕ್ಷಾ ಬಂಧನ ಆಚರಿಸಲಾಗುತ್ತಿದೆ. 

Latest Videos
Follow Us:
Download App:
  • android
  • ios