ಮುಂಬೈ :  ನಟ-ನಟಿಯರ ನಡುವೆ ಸಮರ ಹೊಸದೇನಲ್ಲ. ಆದರೆ ಈ ಬಾರಿ ನಟಿ ರಾಖಿ ಸಾವಂತ್ ಆರಂಭಿಸಿರುವ ಸಮರ ಮಾತ್ರ ಭಾರೀ ಪ್ರಮಾಣದಲ್ಲಿ ಎಲ್ಲರಲ್ಲೂ ಕುತೂಹಲ ಕಾವೇರಿಸಿದೆ. ಅಷ್ಟಕ್ಕೂ ಸುದ್ದಿ ಏನೆಂದರೆ ರಾಖಿ, ಇತ್ತೀಚೆಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾಳೆ. 

ಆ ವಿಡಿಯೋದಲ್ಲಿ ಸಹನಟಿಯರಾದ ಸನ್ನಿ ಲಿಯೋನ್ ಮತ್ತು ಬಿಪಾಶಾ ಬಸು ಜಾಹೀರಾತು ರಾಯಭಾರಿಗಳಾದ ಕಾಂಡೋಂ ಬಳಸಬೇಡಿ. ಅದಕ್ಕಿಂತ ತಾನು ಪ್ರಚಾರ ರಾಯಭಾರಿಯಾಗಿರುವ ಕಾಂಡೋಂ ಬಲು ಸೊಗಸಾಗಿದೆ. ಅದನ್ನೇ ಬಳಸಿ ಎಂದು ಪ್ರಚಾರ ಮಾಡಿದ್ದಾಳೆ. 

ಸಾಲದೆಂಬಂತೆ ನೂತನವಾಗಿ ವಿವಾಹವಾದ ಕೊಹ್ಲಿ- ಅನುಷ್ಕಾ ದಂಪತಿಗೂ ತನ್ನದೇ ಬ್ರ್ಯಾಂಡ್ ಬಳಸುವಂತೆ ಸಲಹೆ ನೀಡಿದ್ದಾಳೆ. ಈ ವಿಡಿಯೋ ಇದೀಗ ಫುಲ್ ಫೇಮಸ್.