ಗುಜರಾತ್ ಕೇಡರ್'ನ 1984ನೇ ಬ್ಯಾಜಿನ ಅಧಿಕಾರಿಯಾದ ಅಸ್ತನಾ ವಡೊದರಾ ಹಾಗೂ ಸೂರತ್'ನಲ್ಲಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದು, ಗೋದ್ರಾ ರೈಲು ಘಟನೆಯ ತನಿಖೆಯ ಮೇಲ್ವಿಚಾರರಾಗಿ ಕೆಲಸ ನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಆಪ್ತರೂ ಕೂಡ.
ನವದೆಹಲಿ(ಡಿ.2): ರಾಷ್ಟ್ರದ ಪ್ರಮುಖ ತನಿಖಾ ಸಂಸ್ಥೆಯಾದ ಕೇಂದ್ರೀಯ ತನಿಖಾ ದಳದ ನೂತನ ಮುಖ್ಯಸ್ಥರಾಗಿ ರಾಕೇಶ್ ಅಸ್ತನಾ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇವರು ಮಧ್ಯಂತರ ಅವಧಿಗೆ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಪ್ರಸ್ತುತ ಸಿಬಿಐ ನಿರ್ದೇಶಕವಾಗಿರುವ ಅನಿಲ್ ಸಿನ್ಹಾ ಇಂದು ನಿವೃತ್ತರಾದರು.
ಗುಜರಾತ್ ಕೇಡರ್'ನ 1984ನೇ ಬ್ಯಾಜಿನ ಅಧಿಕಾರಿಯಾದ ಅಸ್ತನಾ ವಡೊದರಾ ಹಾಗೂ ಸೂರತ್'ನಲ್ಲಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದು, ಗೋದ್ರಾ ರೈಲು ಘಟನೆಯ ತನಿಖೆಯ ಮೇಲ್ವಿಚಾರರಾಗಿ ಕೆಲಸ ನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಆಪ್ತರೂ ಕೂಡ.
ಅನಿಲ್ ಸಿನ್ಹಾ ನಂತರ ಸಿಬಿಐ ಮುಖ್ಯಸ್ಥರಾಗಬೇಕಿದ್ದ 2ನೇ ಹಂತದ ಮುಖ್ಯಸ್ಥರಾದ ಆರ್.ಕೆ. ದತ್ತಾ ಅವರನ್ನು ಕೇಂದ್ರ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯನ್ನು ಗೃಹ ಇಲಾಖೆಯಲ್ಲಿ ಹೊಸದಾಗಿ ಸೃಷ್ಟಿಸಲಾಗಿದೆ. ಕಳೆದ 10 ವರ್ಷದಲ್ಲಿ ಸಿಬಿಐನಲ್ಲಿ 2 ವರ್ಷ ಪೂರ್ಣಗೊಳಿಸಿದವರು ಅನಿಲ್ ಸಿನ್ಹಾ ಮಾತ್ರ.
ಪ್ರಧಾನಿ, ವಿರೋಧ ಪಕ್ಷದ ನಾಯಕ ಅಥವಾ ಲೋಕಸಭೆಯ ಹೆಚ್ಚು ಸದಸ್ಯ ಬಲದ ನಾಯಕ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಮಂಡಳಿ ಸಿಬಿಐ ನಿರ್ದೇಶಕರನ್ನು ನೇಮಿಸುತ್ತದೆ.