ರಾಜ್ಯಸಭಾ ಚುನಾವಣೆಗೆ ಕೈನ ಮೂವರು ಕಣಕ್ಕೆ

Rajya Sabha Election Congress 23 Candidate Contest
Highlights

ರಾಜ್ಯದಿಂದ ತೆರವಾಗಿರುವ 4 ಸ್ಥಾನಗಳಿಗೆ ಮಾ.23ರಂದು ನಡೆಯ ಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ 3 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ರಾತ್ರಿ ಬಿಡುಗಡೆ ಮಾಡಿದೆ.

ಬೆಂಗಳೂರು: ರಾಜ್ಯದಿಂದ ತೆರವಾಗಿರುವ 4 ಸ್ಥಾನಗಳಿಗೆ ಮಾ.23ರಂದು ನಡೆಯ ಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ 3 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ರಾತ್ರಿ ಬಿಡುಗಡೆ ಮಾಡಿದೆ.

ಅಲ್ಪಸಂಖ್ಯಾತ ಮೀಸಲಾತಿ ಕೋಟಾದಿಂದ ಹಾಗೂ ಹೈಕಮಾಂಡ್ ಪರವಾಗಿ ಡಾ.ಸಯ್ಯದ್ ನಸೀರ್ ಹುಸೇನ್, ದಲಿತ ಸಮುದಾಯದ ವತಿಯಿಂದ ಡಾ.ಎಲ್. ಹನುಮಂತಯ್ಯ ಹಾಗೂ ಒಕ್ಕಲಿಗ ಸಮುದಾಯದ ಜಿ.ಸಿ. ಚಂದ್ರಶೇಖರ್ ಅವರಿಗೆ ಟಿಕೆಟ್ ದೊರಕಿದೆ.

ಅಭ್ಯರ್ಥಿಗಳ ಆಯ್ಕೆಯಲ್ಲಿ ಹೈಕಮಾಂಡ್ ರಾಜ್ಯ ನಾಯಕರ ನಿರೀಕ್ಷೆ ಹುಸಿಗೊಳಿಸಿ ಹೊಸ ಮುಖಗಳಿಗೆ ಮಣೆ ಹಾಕುವ ಮೂಲಕ ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರು ಸೂಚಿಸಿದ ಪಟ್ಟಿಯನ್ನು ಬದಿಗಿರಿಸಿ ರೇಸ್‌ನಲ್ಲಿ ಮುಂಚೂಣಿಯಲ್ಲಿರದ ಮುಖಗಳಿಗೆ ಟಿಕೆಟ್ ಘೋಷಿಸಿದೆ.

loader