Asianet Suvarna News Asianet Suvarna News

ಶಾಂತ ಕಾಶ್ಮೀರಕ್ಕೆ ರಾಜನಾಥ್ ಸಪ್ತ ಸೂತ್ರ

  • ಕಳೆದ ಒಂದುವರೆ ವರ್ಷದಿಂದ ಪ್ರಕ್ಷುಬ್ಧವಾಗಿರುವ ಕಾಶ್ಮೀರ ಕಣಿವೆ
  • ಕಣಿವೆಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ  ರಾಜನಾಥ್ ಸಿಂಗ್ ಸಪ್ತ ಸೂತ್ರ

 

Rajnath Singh announces seven measures to restore normalcy in Kashmir

ನವದೆಹಲಿ: ಕಳೆದ ಒಂದುವರೆ ವರ್ಷದಿಂದ ನಿರಂತರವಾಗಿ ಪ್ರಕ್ಷುಬ್ಧವಾಗಿರುವ ಕಾಶ್ಮೀರ ಕಣಿವೆಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಪ್ತ ಸೂತ್ರಗಳನ್ನು ಘೋಷಿಸಿದ್ದಾರೆ.

ಕಣಿವೆಯಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಪ್ರಯತ್ನವಾಗಿ ರಾಜನಾಥ್ ಸಿಂಗ್,  ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕೈಗೊಳ್ಳಬಹುದಾದ 7 ಕ್ರಮಗಳನ್ನು ಪ್ರಕಟಿಸಿದ್ದಾರೆ.

ಕಲ್ಲೆಸತಗಾರರಿಗೆ ಕ್ಷಮೆ: ಭದ್ರತಾ ಪಡೆಗಳಿಗೆ ಕಲ್ಲೆಸೆದ ಆರೋಪ ಹೊತ್ತಿರುವ ಸುಮಾರು 3685 ವಿದ್ಯಾರ್ಥಿ-ಯುವಜನರಿಗೆ ಕ್ಷಮಿಸುವುವುದಾಗಿ ರಾಜ್ಯ ಸರ್ಕಾರ ಕಳೆದ ವರ್ಷ ನ.23ರಂದು ಘೋಷಿಸಿತ್ತು. ಕೇಂದ್ರ ಗೃಹ ಇಲಾಖೆಯು ಈ ಕ್ರಮಕ್ಕೆ ಸಮ್ಮತಿಯನ್ನು ಸೂಚಿಸಿದೆ.

ಉನ್ನತ ಮಟ್ಟದ ಸಮಿತಿ: ಇನ್ನುಳಿದ ಗಂಭೀರ ಕಲ್ಲೆಸೆತ ಪ್ರಕರಣಗಳ ಪರಿಶೀಲನೆಗಾಗಿ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವಂತೆ ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

ಶರಣಾಗತಿ & ಪುನರ್ವಸತಿ ಯೋಜನೆ: ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯುವಕರು ಮುಖ್ಯವಾಹಿನಿಯಲ್ಲಿ ಸೇರಲು ಪ್ರೇರೆಪಿಸುವ ನಿಟ್ಟಿನಲ್ಲಿ ಹೊಸ’ ಶರಣಾಗತಿ & ಪುನರ್ವಸತಿ’ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

ಸಲಹಾ ಮಂಡಳಿ: ವಲಸಿಗರು, ಸ್ಥಳಾಂತರಗೊಂಡವರು ಹಾಗೂ ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರ ದೂರು ದುಮ್ಮಾನಗಳನ್ನು ಪರಿಹರಿಸಲು ಸಲಹಾ ಮಂಡಳಿಯನ್ನು ರಚಿಸುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸಲಹೆ ನೀಡಲಾಗಿದೆ.

ದುರಸ್ತಿ ಹಾಗೂ ಪುನರ್ನಿರ್ಮಾಣ: ಜಗತಿ ಮತ್ತು ತಲ್ವಾರದಲ್ಲಿ ಶಿಥಿಲಗೊಂಡ ನಿರಾಶ್ರಿತರ ಶಿಬಿರಗಳ ದುರಸ್ತಿ ಹಾಗೂ ಪುನರ್ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳುವಂತೆ ಕೇಂದ್ರವು ಸೂಚಿಸಿದೆ.

ಜಮ್ಮುವಿನಲ್ಲಿ ಕೃತಕ ಕೆರೆಗಳನ್ನು ನಿರ್ಮಿಸುವ ಕೆಲಸವನ್ನು ಪುನಾರಂಬಿಸುವಂತೆಯೂ ನಿರ್ಧರಿಸಲಾಗಿದೆ.

Follow Us:
Download App:
  • android
  • ios