ರಾಜಧಾನಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕೇಕ್ ಪ್ರದರ್ಶನದಲ್ಲಿ ವಿವಿಧ ವಿನ್ಯಾಸ, ಗಾತ್ರ, ಬಣ್ಣ ಬಣ್ಣದ ಕೇಕ್ ಪ್ರದರ್ಶನ ಕ್ಕಿಡಲಾಗಿದೆ. ಈಗ ಶಂಕರ್ ನಾಗ್ ಟ್ರಸ್ಟ್ ಸುಮಾರು 5.7 ಅಡಿ ಉದ್ದವಿರುವ,150 ಕೆ.ಜಿ. ತೂಕದ ವರನಟ ಡಾ.ರಾಜ್‌ಕುಮಾರ್ ಅವರ ಕೇಕ್ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಡಿಸೆಂಬರ್ ಮಾಸವೆಂದರೆ ಕೇಕ್! ವಿವಿಧ ಕೇಕ್ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಕೇಕ್ ಪ್ರಿಯರು ಹಾತೊರೆಯುತ್ತಾರೆ. ಇಂಥ ಸುವರ್ಣಾವಕಾಶಕ್ಕೆ ಡಾ. ರಾಜ್ಕುಮಾರ್ ಮಾದರಿಯ 3ಡಿ ಕೇಕ್ ಸೇರ್ಪಡೆಯಾಗಿದೆ. ‘ಮಯೂರ’ ಚಿತ್ರದ ರಾಜ್ಕುಮಾರ್ ಮಾದರಿ ಕೇಕ್ ಅಭಿಮಾನಿಗಳನ್ನು ಸೆಳೆಯುತ್ತಿದೆ.
ರಾಜಧಾನಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕೇಕ್ ಪ್ರದರ್ಶನದಲ್ಲಿ ವಿವಿಧ ವಿನ್ಯಾಸ, ಗಾತ್ರ, ಬಣ್ಣ ಬಣ್ಣದ ಕೇಕ್ ಪ್ರದರ್ಶನ ಕ್ಕಿಡಲಾಗಿದೆ. ಈಗ ಶಂಕರ್ ನಾಗ್ ಟ್ರಸ್ಟ್ ಸುಮಾರು 5.7 ಅಡಿ ಉದ್ದವಿರುವ,150 ಕೆ.ಜಿ. ತೂಕದ ವರನಟ ಡಾ.ರಾಜ್ಕುಮಾರ್ ಅವರ ಕೇಕ್ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ನಗರದ ಕಂಠೀರವ ಸ್ಟುಡಿಯೋದಲ್ಲಿನ ಡಾ. ರಾಜ್ಕುಮಾರ್ ಸ್ಮಾರಕದ ಬಳಿ ಈ ಕೇಕ್ ಪ್ರದರ್ಶನಕ್ಕೆ ಭಾನುವಾರ ನಟ ರಾಘವೇಂದ್ರ ರಾಜ್ಕುಮಾರ್ ಅವರು ಚಾಲನೆ ನೀಡಿದರು. ಕೇಕ್ ಪ್ರದರ್ಶನ ಉದ್ಘಾಟಿಸಿ ನಂತರ ಮಾತನಾಡಿದ ನಟ ರಾಘವೇಂದ್ರ ರಾಜ್ಕುಮಾರ್, ಮಯೂರ ನಮ್ಮ ರಾಜ್ಯದ ಮೊದಲ ಚಕ್ರವರ್ತಿ. ಮಯೂರ ಮಾದರಿಯ ಬೃಹತ್ ಗಾತ್ರದ ಅಣ್ಣಾವ್ರ ಕೇಕ್ ಪ್ರದರ್ಶನಕ್ಕಿಟ್ಟಿರುವುದು ತುಂಬಾ ಖುಷಿ ನೀಡಿದೆ. ರಾಜ್ಕುಮಾರ್ ಅಭಿಮಾನಿಗಳಿಗೆ ಇದು ಪ್ರಿಯವಾಗಲಿದೆ ಎಂದು ಹೇಳಿದರು. ಅಪ್ಪಾಜಿ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಬೇಕು ಎಂದು ಕೂಡ ಅವರು ಕರೆ ನೀಡಿದರು.
ಸಸಿ ನೆಟ್ಟು ಫೋಟೋ ಹಾಕಿ:
ಏ.24ರೊಳಗಾಗಿ ಡಾ.ರಾಜ್ಕುಮಾರ್ ಅಭಿಮಾನಿಗಳು ಒಂದೊಂದು ಸಸಿ ನೆಟ್ಟು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಅಣ್ಣಾವ್ರಿಗೆ ಬರ್ತ್ ಡೇ ಶುಭಾಶಯ ತಿಳಿಸಬೇಕು. ಒಟ್ಟು ಒಂದು ಲಕ್ಷ ಸಸಿ ನೆಡುವಲ್ಲಿ ಯೋಜನೆ ರೂಪಿಸಬೇಕು. ಇದು ಅವರಿಗೆ ತೋರುವ ನಿಜವಾದ ಪ್ರೀತಿ. ಇದಕ್ಕೆ ಪ್ರೇರಣೆಯಾಗಿ ಮೊದಲು ನಾನು, ಪುನೀತ್ ಹಾಗೂ ಶಿವಣ್ಣ ಸಸಿ ನೆಡು ತ್ತೇವೆ. ನೀವೆಲ್ಲರೂ ಸಸಿ ನೆಟ್ಟು ಪರಿಸರ ಸಂರಕ್ಷಿಸಬೇಕು ಎಂದು ಕರೆ ನೀಡಿದರು.
