ರಾಜೀವ್ ಗಾಂಧಿ ಹಂತಕಿಗೆ ಒಂದು ತಿಂಗಳು ಪರೋಲ್| ಮಗಳ ಮದುವೆ ತಯಾರಿಗೆ 6 ತಿಂಗಳು ಪರೋಲ್ ಕೇಳಿದ್ದ ನಳಿನಿ| ದೋಷಿ ಮನವಿಗೆ ಕೇವಲ ಒಂದು ತಿಂಗಳ ಷರತ್ತು ಬದ್ಧ  ಪರೋಲ್‌ ನೀಡಿದ ಮದ್ರಾಸ್ ಹೈಕೋರ್ಟ್

ಮದ್ರಾಸ್[ಜು.25]: ಪುತ್ರಿ ಮದುವೆ ಸಂಬಂಧ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಮಾಜಿ ಪಿಎಂ ರಾಜೀವ್ ಗಾಂಧಿ ಹತ್ಯೆ ಅಪರಾಧಿ ನಳಿನಿ ಶ್ರೀಹರನ್‌ ಗೆ ಮದ್ರಾಸ್‌ ಹೈಕೋರ್ಟ್‌ 30 ದಿನಗಳ ಪರೋಲ್ ನೀಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತನ್ನ ಪುತ್ರಿಯ ವಿವಾಹ ಸಂಬಂಧ ತಯಾರಿಗಾಗಿ 6 ತಿಂಗಳು ಪರೋಲ್‌ ನೀಡುವಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅಪರಾಧಿ ನಳಿನಿ ಶ್ರೀಹರನ್‌ ಮದ್ರಾಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜುಲೈ 5 ರಂದು ಈ ಅರ್ಜಿ ಕೋರ್ಟ್‌ ಪುಸ್ಕರಿಸಿದೆಯಾದರೂ ಕೇವಲ ಒಂದು ತಿಂಗಳ ಷರತ್ತು ಬದ್ಧ ಪರೋಲ್‌ ಗೆ ಅನುಮತಿ ನೀಡಿದೆ. 

ಜೈಲಿನಿಂದ ಹೊರಗಿರುವ ಸಂದರ್ಭದಲ್ಲಿ ಸುದ್ದಿ ಮಾಧ್ಯಮಗಳಿಗೆ ಸಂದರ್ಶನ, ಹೇಳಿಕೆ ನೀಡಬಾರದು ಎಂದು ಮದ್ರಾಸ್ ಹೈಕೋರ್ಟ್ ಷರತ್ತು ವಿಧಿಸಿದೆ. ಈ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್‌, 30 ದಿನಗಳ ಕಾಲ ಷರತ್ತು ಬದ್ಧ ಪರೋಲ್‌ಗೆ ಅನುಮತಿ ನೀಡಿದೆ.

Scroll to load tweet…

ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿಜೀವಾವಧಿ ಶಿಕ್ಷೆಗೊಳಗಾಗಿದ್ದ ನಳಿನಿ ಶ್ರೀಹರನ್‌ ಕಳೆದ 28 ವರ್ಷಗಳಿಂದ ವೆಲ್ಲೂರು ಸೆಂಟ್ರಲ್ ಜೈಲಿನಲ್ಲಿದ್ದರು. ಈ ಹಿಂದೆ 2016ರಲ್ಲಿ ನಳಿನಿಗೆ ಅವರ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 12 ಗಂಟೆಗಳ ಪರೋಲ್‌ ನೀಡಲಾಗಿತ್ತು.