Asianet Suvarna News Asianet Suvarna News

ಎಲ್ಲರ ಬಿಟ್ಟು ರಾಜೀವ್ ಹೊಗಳುತ್ತಿದ್ದ ಅಟಲ್!

ಅಟಲ್ ಗೆ ಪುನರ್ಜನ್ಮ ನೀಡಿದ್ದು ರಾಜೀವ್ ಗಾಂಧಿ! ರಾಜೀವ್ ಸಹಾಯವನ್ನು ಸ್ಮರಿಸುತ್ತಿದ್ದ ರಾಜೀವ್! ಅಟಲ್ ಆರೋಗ್ಯದತ್ತ ರಾಜೀವ್ ವಿಶೇಷ ಗಮನ! ಅಟಲ್ ಗೆ ಅಮೆರಿಕದಲ್ಲಿ ಚಿಕಿತ್ಸೆ ಕೊಡಿಸಿದ್ದ ರಾಜೀವ್ 

Rajiv Gandhi Is Why I Am Alive: Story In Atal Bihari Vajpayee's Words
Author
Bengaluru, First Published Aug 17, 2018, 11:42 AM IST

ನವದೆಹಲಿ(ಆ.17): ಭಾರತೀಯ ರಾಜಕಾರಣದಲ್ಲಿ ಆತ್ಮೀಯತೆ, ವಿರೋಧಿಗಳನ್ನೂ ಗೌರವದಿಂದ ನೋಡುವ ಟ್ರೆಂಡ್ ಬೆಳೆಸಿದವರಲ್ಲಿ ಅಟಲ್ ಅಗ್ರಗಣ್ಯರು. 1957ರಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದಿರುವ ಅಟಲ್, ಸೋಲಿಲ್ಲದ ಸರದಾರರಾಗಿದ್ದರು. ತಮ್ಮ ರಾಜಕೀಯ ಕಡುವೈರಿ ನೆಹರು-ಗಾಂಧಿ ಕುಟುಂಬದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು. 

ನೆಹರು ಕುಟುಂಬದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ವಾಜಪೇಯಿ ಅವರಿಗೆ ಅಪಾರವಾದ ಗೌರವವಿತ್ತು. 1987ರಲ್ಲಿ ಅಟಲ್ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಮಯದಲ್ಲಿ ಅಮೆರಿಕದಲ್ಲಿ ಮಾತ್ರ ಇದಕ್ಕೆ ಚಿಕಿತ್ಸೆ ದೊರೆಯುತ್ತಿತ್ತು. ಆದರೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲು ಅಟಲ್ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿ ಇರಲಿಲ್ಲ.

ಅಟಲ್ ಅವರ ಅನಾರೋಗ್ಯದ ವಿಷಯ ತಿಳಿದ ರಾಜೀವ್ ಗಾಂಧಿ, ವಾಜಪೇಯಿ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡರು. ಈ ವೇಳೆ ಅವರಿಗೆ ನ್ಯೂಯಾರ್ಕ್ ನಲ್ಲಿರುವ ಭಾರತ ನಿಯೋಗವನ್ನು ಭೇಟಿ ಮಾಡಿ ಎಂದು ರಾಜೀವ್ ಗಾಂಧಿ ತಿಳಿಸಿದ್ದರು. ಹಾಗಾಗಿ ಅಟಲ್ ಚಿಕಿತ್ಸೆ ಪಡೆಯಲು ಸಾಧ್ಯವಾಯಿತು. 
1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ಅವರನ್ನು ನೆನೆಯುತ್ತಾ ಇದನ್ನು ಸಾರ್ವಜನಿಕವಾಗಿ ಮೊದಲ ಬಾರಿಗೆ ಹೇಳಿದ್ದರು ಎಂದು ಎಂಬ ಅಂಶ ದಿ ಡೆವಿಲ್ಸ್ ಅಡ್ವೋಕೇಟ್ ನಲ್ಲಿ ಪ್ರಕಟವಾದ ಪುಸ್ತಕದಲ್ಲಿ ಪ್ರಖ್ಯಾತ ಪತ್ರಕರ್ತ ಕರಣ್ ಥಾಪರ್ ಅವರು ಉಲ್ಲೇಖಿಸಿದ್ದರು. 

ಅಟಲ್ ಅವರು ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಹಿಂದಿರುಗಿದ ಬಳಿಕ ಇಬ್ಬರು ನಾಯಕರು ಈ ವಿಷಯವನ್ನು ಯಾರೊಂದಿಗೂ ಹೇಳಿಕೊಂಡಿರಲ್ಲಿಲ್ಲ. ಆದರೆ ಅಟಲ್ ತಮ್ಮ ಆರೋಗ್ಯ ಸುಧಾರಣೆಗೆ ಕಾರಣೀಭೂತರಾದ  ರಾಜೀವ್ ಗಾಂಧಿ ಅವರಿಗೆ ಅಂಚೆ ಪತ್ರ ಕಳುಹಿಸುವ ಮೂಲಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರಂತೆ.

Follow Us:
Download App:
  • android
  • ios