ತಮಿಳುನಾಡಿನಲ್ಲಿ ಜಿಎಸ್‌ಟಿ ಜೊತೆಗೆ  ರಾಜ್ಯ ಸರ್ಕಾರ ಶೇಕಡ 30ರಷ್ಟು ಮನರಂಜನೆ ತೆರಿಗೆ ವಿಧಿಸಿರುವುದನ್ನು ಖಂಡಿಸಿ ಮೂರು ದಿನಗಳಿಂದ ಚಿತ್ರಮಂದಿರಗಳು ಮುಚ್ಚಿವೆ. ಈ ಹಿನ್ನೆಲೆಯಲ್ಲಿ  ಸ್ಟಾರ್ ನಟರು ಸ್ಪಂಧಿಸಿದ್ದಾರೆ. ಹೊಸ ತೆರಿಗೆ ವಿಷಯದಲ್ಲಿ ರಜನಿಕಾಂತ್ ಯಾಕೆ ಸ್ಪಂದಿಸುತ್ತಿಲ್ಲ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಮೂಡಿತ್ತು.

ಚೆನ್ನೈ(ಜು.05): ತಮಿಳುನಾಡಿನಲ್ಲಿ ಜಿಎಸ್‌ಟಿ ಜೊತೆಗೆ ರಾಜ್ಯ ಸರ್ಕಾರ ಶೇಕಡ 30ರಷ್ಟು ಮನರಂಜನೆ ತೆರಿಗೆ ವಿಧಿಸಿರುವುದನ್ನು ಖಂಡಿಸಿ ಮೂರು ದಿನಗಳಿಂದ ಚಿತ್ರಮಂದಿರಗಳು ಮುಚ್ಚಿವೆ. ಈ ಹಿನ್ನೆಲೆಯಲ್ಲಿ ಸ್ಟಾರ್ ನಟರು ಸ್ಪಂಧಿಸಿದ್ದಾರೆ. ಹೊಸ ತೆರಿಗೆ ವಿಷಯದಲ್ಲಿ ರಜನಿಕಾಂತ್ ಯಾಕೆ ಸ್ಪಂದಿಸುತ್ತಿಲ್ಲ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಮೂಡಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ರಾಜ್ಯ ಸರ್ಕಾರ ವಿಧಿಸುತ್ತಿರುವ ತೆರಿಗೆಯನ್ನು ರದ್ದುಗೊಳಿಸಬೇಕೆಂದು ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ .ತಮಿಳು ಚಿತ್ರರಂಗದ ಲಕ್ಷಾಂತರ ಜನರ ಒಳಿತನ್ನು ದೃಷ್ಟಿಯಲ್ಲಿರಿಸಿ ತೆರಿಗೆ ರದ್ದುಗೊಳಿಸಬೇಕೆಂದು ರಜನಿ ತಮಿಳು ನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Scroll to load tweet…