ನಾನು ಕೂಡ ಒಂದು ಸಮಯದಲ್ಲಿ ಪತ್ರಕರ್ತ ನಾಗಿದ್ದೆ. ಬೆಂಗಳೂರಿನ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿಯೂ ಸೇವೆ ಸಲ್ಲಿಸಿದ್ದೆ. ಕಂಡಕ್ಟರ್ ಆದ ಮೇಲೆ ಸಿನಿಮಾ ರಂಗ ಸೆಳೆಯಿತು. ಅಲ್ಲಿಂದ ಇಲ್ಲಿಯವರೆಗೂ ಸಾಗಿ ಬಂದಿದ್ದೇನೆ ಎಂದು ರಜನಿ ತಮ್ಮ ಗತ ವೈಭವದ ದಿನ ಮೆಲುಕು ಹಾಕಿದ್ದಾರೆ.
ಚೆನ್ನೈ: ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶಿಸಿರುವ ನಟ ರಜನಿಕಾಂತ್ ಬುಧವಾರ ಪತ್ರಕರ್ತರ ಜತೆ ಮನ ಬಿಚ್ಚಿ ಮಾತನಾಡಿದ್ದಾರೆ. ‘ನಾನು ಕೂಡ ಒಂದು ಸಮಯದಲ್ಲಿ ಪತ್ರಕರ್ತ ನಾಗಿದ್ದೆ. ಬೆಂಗಳೂರಿನ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿಯೂ ಸೇವೆ ಸಲ್ಲಿಸಿದ್ದೆ. ಕಂಡಕ್ಟರ್ ಆದ ಮೇಲೆ ಸಿನಿಮಾ ರಂಗ ಸೆಳೆಯಿತು. ಅಲ್ಲಿಂದ ಇಲ್ಲಿಯವರೆಗೂ ಸಾಗಿ ಬಂದಿದ್ದೇನೆ ಎಂದು ರಜನಿ ತಮ್ಮ ಗತ ವೈಭವದ ದಿನ ಮೆಲುಕು ಹಾಕಿದ್ದಾರೆ.
ರಾಜಕೀಯ ಕ್ರಾಂತಿ ಅಗತ್ಯವಿದೆ: ಈಗ ತಮಿಳುನಾಡಿನಲ್ಲಿ ಕ್ರಾಂತಿಯ ಅಗತ್ಯವಿದೆ. ಅದನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ. ಇದಕ್ಕಾಗಿ ಕೆಲವು ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ. ಮುಂದಿನ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 234 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗಿದೆ ಎಂದು ರಜನಿ ತಿಳಿಸಿದರು.
ಈ ನಡುವೆ ರಜನಿ ಹೇಳಿಕೆ ಕುರಿತು ಪತ್ರಿಕೆಯ ಮೂಲಗಳನ್ನು ಸಂಪರ್ಕಿಸಿದ ವೇಳೆ, ರಜನಿ ಗೆಳೆಯ ರಾಮಚಂದ್ರರಾವ್ ಪ್ರೂಫ್ ರೀಡರ್ ಆಗಿದ್ದರು. ಅವರನ್ನು ಭೇಟಿ ಮಾಡಲು ಬಂದಾಗ,ರಜನಿ ನೆರವಾಗುತ್ತಿದ್ದರು ಎಂದು ಹೇಳಿವೆ.
