ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡಿನಲ್ಲಿ ದೊಡ್ಡನಟರೇ ಆಗಿದ್ದರು, ಐಷಾರಾಮಿ ಜೀವನಕ್ಕೆ ಮಾರು ಹೋದವರಲ್ಲ. ಆದರೆ ಈಗ ರಜನಿಕಾಂತ್ ಹೊಸದೊಂದು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ರಾಜಕೀಯ ಪ್ರವೇಶಕ್ಕೆ ರಜನಿಕಾಂತ್ ಸನ್ನದ್ಧರಾಗಿದ್ದು, ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಿದ್ದಾರೆ. ಅದಕ್ಕಾಗಿಯೇ ರಜನಿಕಾಂತ್ ಬಿಎಂಡಬ್ಲ್ಯು ಎಕ್ಸ್ 5 ಎಂಬ ಐಷಾರಾಮಿ ಕಾರನ್ನ ಖರೀದಿಸಿದ್ದು, ಅಭಿಮಾನಿಗಳನ್ನು ಭೇಟಿಯಾಗುತ್ತ ಪ್ರಚಾರದಲ್ಲಿ ತೊಡಗಿದ್ದಾರೆ.

ಚೆನ್ನೈ(ಮೇ.25): ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡಿನಲ್ಲಿ ದೊಡ್ಡನಟರೇ ಆಗಿದ್ದರು, ಐಷಾರಾಮಿ ಜೀವನಕ್ಕೆ ಮಾರು ಹೋದವರಲ್ಲ. ಆದರೆ ಈಗ ರಜನಿಕಾಂತ್ ಹೊಸದೊಂದು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ರಾಜಕೀಯ ಪ್ರವೇಶಕ್ಕೆ ರಜನಿಕಾಂತ್ ಸನ್ನದ್ಧರಾಗಿದ್ದು, ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಿದ್ದಾರೆ. ಅದಕ್ಕಾಗಿಯೇ ರಜನಿಕಾಂತ್ ಬಿಎಂಡಬ್ಲ್ಯು ಎಕ್ಸ್ 5 ಎಂಬ ಐಷಾರಾಮಿ ಕಾರನ್ನ ಖರೀದಿಸಿದ್ದು, ಅಭಿಮಾನಿಗಳನ್ನು ಭೇಟಿಯಾಗುತ್ತ ಪ್ರಚಾರದಲ್ಲಿ ತೊಡಗಿದ್ದಾರೆ.

ರಜನಿ ಖರೀದಿಸಿರುವ ಈ ಐಷಾರಾಮಿ ಕಾರಿನ ಬೆಲೆ ಬರೋಬ್ಬರಿ 1.8 ಕೋಟಿ..ಈ ಹಿಂದೆ ಬಾಲಿವುಡ್ ನಟ ಶಾರೂಖ್ ಖಾನ್ ರಜನಿಕಾಂತ್‌ಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದರೆ. ಆದರೆ ಶಾರುಕ್ ಖಾನ್ ಆಫರನ್ನು ರಜನಿಕಾಂತ್ ನಿರಾಕರಿಸಿದ್ದರು. ಇದೀಗ ರಜನಿಕಾಂತ್ ರಾಜಕೀಯ ಪ್ರವೇಶಿಸಲು ಸಜ್ಜಾಗಿದ್ದು, ಅಭಿಮಾನಿಗಳನ್ನು ಭೇಟಿಯಾಗಿ ಪ್ರಚಾರ ನಡೆಸುವ ಸಲುವಾಗಿಯೇ ಐಷಾರಾಮಿ ಕಾರನ್ನು ಖರೀದಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.