ಶಾಂತಿಯುತ ಹೋರಾಟಕ್ಕೆ ರಜನೀ ಬೇಷರತ್ತಿನ ಬೆಂಬಲ ನೀಡಿದ್ದಾರೆ. ರಜನೀಕಾಂತ್ ಅಷ್ಟೇ ಅಲ್ಲ, ಕಾಲಿವುಡ್'ನ ಬಹುತೇಕ ಸೆಲಬ್ರಿಟಿಗಳು ಜಲ್ಲಿಕಟ್ಟು ಪರ ನಿಂತಿದ್ದಾರೆ.
ಚೆನ್ನೈ(ಜ. 20): ಜಲ್ಲಿಕಟ್ಟು ಮೇಲಿನ ನಿಷೇಧ ಹಿಂಪಡೆಯುವಂತೆ ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಬೃಹತ್ ಜನಾಂದೋಲನಕ್ಕೆ ಇಡೀ ತಮಿಳುನಾಡು ಚಿತ್ರರಂಗ ಒಂದಾಗಿದೆ. ಜಲ್ಲಿಕಟ್ಟು ಹೋರಾಟ ನಡೆಯುತ್ತಿರುವ ಇಲ್ಲಿಯ ಮರೀನಾ ಬೀಚ್'ಗೆ ಸೂಪರ್'ಸ್ಟಾರ್ ರಜನೀಕಾಂತ್ ಇಂದು ಆಗಮಿಸಿದ್ದಾರೆ. ಶಾಂತಿಯುತ ಹೋರಾಟಕ್ಕೆ ರಜನೀ ಬೇಷರತ್ತಿನ ಬೆಂಬಲ ನೀಡಿದ್ದಾರೆ. ರಜನೀಕಾಂತ್ ಅಷ್ಟೇ ಅಲ್ಲ, ಕಾಲಿವುಡ್'ನ ಬಹುತೇಕ ಸೆಲಬ್ರಿಟಿಗಳು ಜಲ್ಲಿಕಟ್ಟು ಪರ ನಿಂತಿದ್ದಾರೆ. ಸಂಗೀತ ದಿಗ್ಗಜ ಎಆರ್ ರೆಹ್ಮಾನ್ ಅವರು ಇಂದು ಸಂಜೆಯವರೆಗೂ ಉಪವಾಸ ನಡೆಸಿದ್ದಾರೆ. ಅಜಿತ್, ಧನುಶ್, ಶರತ್'ಕುಮಾರ್, ಸೂರ್ಯ ಮೊದಲಾದ ಸ್ಟಾರ್'ಗಳು ಜನಾಂದೋಲನಕ್ಕೆ ಬೆಂಬಲ ಸೂಚಿಸಿದ್ದಾರೆ.
ಮತ್ತೊಬ್ಬ ಸೂಪರ್'ಸ್ಟಾರ್ ಕಮಲ್ ಹಾಸನ್ ಅವರು ಜಲ್ಲಿಕಟ್ಟು ನಿಷೇಧಿಸಿರುವದೇ ಆದರೆ ಬಿರಿಯಾನಿಯನ್ನೂ ನಿಷೇಧಿಸಿ ಎಂದು ಹೇಳುವ ಮೂಲಕ ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಗೆ ಬೆಂಬಲ ಸೂಚಿಸಿದ್ದರು. ಆದರೆ, ಕಮಲ್ ಹೇಳಿಕೆಗೆ ಬಿರ್ಯಾನಿ ಪ್ರಿಯರು ಬೇಸರ ವ್ಯಕ್ತಪಡಿಸಿದ್ದುಂಟು.
