ರಾಜಕೀಯ ಪ್ರವೇಶಕ್ಕೂ ಮುನ್ನ ರಜನಿ ಹಿಮಾಲಯ ಪ್ರವಾಸಕ್ಕೆ!

First Published 11, Mar 2018, 10:04 AM IST
Rajini Go to Himalaya
Highlights

ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಅವಧಿಯಿಂದ ಹಿಮಾಲಯದ ತಪ್ಪಲಿನಲ್ಲಿ ಧ್ಯಾನದ ಅಭ್ಯಾಸ ಬೆಳೆಸಿಕೊಂಡಿರುವ ಸೂಪರ್‌ಸ್ಟಾರ್‌, ರಾಜಕಾರಣಿ ರಜನೀಕಾಂತ್‌ ಈ ವರ್ಷವೂ ತಮ್ಮ ವಾರ್ಷಿಕ ಪ್ರವಾಸ ಕೈಗೊಂಡಿದ್ದಾರೆ. ಧ್ಯಾನ ಮತ್ತು ಸಂತರೊಂದಿಗೆ ಕೆಲಕಾಲ ಬೆರೆಯುವುದಕ್ಕಾಗಿ ರಜನೀಕಾಂತ್‌ ಶನಿವಾರ ಉತ್ತರಾಖಂಡದ ದುನಾಗಿರಿಗೆ ಪ್ರವಾಸ ಕೈಗೊಂಡಿದ್ದಾರೆ.

ಚೆನ್ನೈ: ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಅವಧಿಯಿಂದ ಹಿಮಾಲಯದ ತಪ್ಪಲಿನಲ್ಲಿ ಧ್ಯಾನದ ಅಭ್ಯಾಸ ಬೆಳೆಸಿಕೊಂಡಿರುವ ಸೂಪರ್‌ಸ್ಟಾರ್‌, ರಾಜಕಾರಣಿ ರಜನೀಕಾಂತ್‌ ಈ ವರ್ಷವೂ ತಮ್ಮ ವಾರ್ಷಿಕ ಪ್ರವಾಸ ಕೈಗೊಂಡಿದ್ದಾರೆ. ಧ್ಯಾನ ಮತ್ತು ಸಂತರೊಂದಿಗೆ ಕೆಲಕಾಲ ಬೆರೆಯುವುದಕ್ಕಾಗಿ ರಜನೀಕಾಂತ್‌ ಶನಿವಾರ ಉತ್ತರಾಖಂಡದ ದುನಾಗಿರಿಗೆ ಪ್ರವಾಸ ಕೈಗೊಂಡಿದ್ದಾರೆ.

ರಜನಿಯ ಈ ಹಿಂದಿನ ಹಿಮಾಲಯ ಪ್ರವಾಸಗಳು ಯಾವುದಾದರೂ, ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದ್ದವು. ಇದೀಗ ಅವರ ರಾಜಕೀಯ ಪ್ರವೇಶ, ಎರಡು ಪ್ರಮುಖ ಚಿತ್ರಗಳಾದ ಕಾಲಾ ಮತ್ತು 2.0 ಬಿಡುಗಡೆಯ ನಡುವೆಯೇ ರಜನಿ ಹಿಮಾಲಯದತ್ತ ಹೊರಟಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.

ಪ್ರವಾಸದ ಉದ್ದೇಶ ತಿಳಿಸಲಿಲ್ಲವಾದರೂ, ತಾವು ಎರಡು ವಾರ ದೂರವಿರಲಿದ್ದೇನೆ ಎಂದು ರಜನೀಕಾಂತ್‌ ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ. ಹಿಮಾಲಯದ ತಪ್ಪಲಲ್ಲಿ ತಮ್ಮ ಸ್ನೇಹಿತರು ನಿರ್ಮಿಸಿರುವ ಯೋಗೊದ ಸಾಷ್ಟಾಂಗ ಸೊಸೈಟಿ ಆಫ್‌ ಇಂಡಿಯಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಜನೀಕಾಂತ್‌ ಭಾಗವಹಿಸು ಸಾಧ್ಯತೆಯಿದೆ ಎನ್ನಲಾಗಿದೆ.

loader