ಮಿರ್ಜಾಪುರದಲ್ಲಿರುವ ರಾಜೀವ್ ಗಾಂಧಿ ಪ್ರತಿಮೆಯನ್ನು ನೆಲಸಮ ಮಾಡಲಾಗಿದ್ದು, ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸಿದೆ. ರಾಜ್ಯ ಸರ್ಕಾರ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಉತ್ತರ ಪ್ರದೇಶ (ಜೂ.05); ಮಿರ್ಜಾಪುರದಲ್ಲಿರುವ ರಾಜೀವ್ ಗಾಂಧಿ ಪ್ರತಿಮೆಯನ್ನು ನೆಲಸಮ ಮಾಡಲಾಗಿದ್ದು, ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸಿದೆ. ರಾಜ್ಯ ಸರ್ಕಾರ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಮಿರ್ಜಾಪುರದಲ್ಲಿರುವ ರಾಜೀವ್ ಗಾಂಧಿ ಪ್ರತಿಮೆಯನ್ನು ನೆಲಸಮ ಮಾಡಿರುವುದನ್ನು ನಾವು ಖಂಡಿಸುತ್ತೇವೆ. ಸರ್ಕಾರದ ಈ ನಡೆ ಸಾವಿರಾರು ಕಾಂಗ್ರೆಸ್ ಅನುಯಾಯಿಗಳ ಭಾವನೆಗಳಿಗೆ ನೋವುಂಟು ಮಾಡಿದೆ. ರಾಜೀವ್ ಗಾಂಧಿ ಒಬ್ಬ ಗ್ರೇಟ್ ನಾಯಕ. ಅವರ ಬಗ್ಗೆ ನಮಗೆಲ್ಲಾ ಬಹಳ ಗೌರವವಿದೆ. ಹಾಗಾಗಿ ಈ ಕೂಡಲೇ ಸರ್ಕಾರ ತನಿಖೆಗೆ ಆದೇಶಿಸಬೇಕು ಹಾಗೂ ಶಿಕ್ಷೆ ನೀಡಬೇಕು ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಹಾನಿಗೊಳಿಸಿದ ಪ್ರತಿಮೆಯ ಕೆಳಗೆ ಕಿಡಿಗೇಡಿಗಳು, ಇದು ನಮ್ಮ ಸರ್ಕಾರ. ರಾಜೀವ್ ಗಾಂದಿಯನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ಬರೆದಿದ್ದಾರೆ.
