ಕೇರಳದಂತಹ ಸಣ್ಣ ರಾಜ್ಯದಲ್ಲಿ ದೊಡ್ಡ ಮಟ್ಟದ ರಾಜಕೀಯ ಪ್ರೇರಿತ ಕೊಲೆಗಳು ನಡೆದಿರುವುದು, ಜಮ್ಮು- ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರು ನಡೆಸಿದ ಮುಗ್ಧ ಭಾರತೀಯ ನಾಗರಿಕರ ಕ್ರೂರ ಹತ್ಯೆಯನ್ನು ನೆನಪಿಸಿದೆ ಎಂದು ಹೇಳಿದ್ದಾರೆ.

ತಿರುವನಂತಪುರಂ(ಮಾ.01): ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎ್ ಸರ್ಕಾರ ಅಕಾರಕ್ಕೆ ಬಂದ ಬಳಿಕ ನಡೆದ 18 ರಾಜಕೀಯ ಪ್ರೇರಿತ ಕೊಲೆಗಳು ವರದಿಯಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇರಳದಂತಹ ಸಣ್ಣ ರಾಜ್ಯದಲ್ಲಿ ದೊಡ್ಡ ಮಟ್ಟದ ರಾಜಕೀಯ ಪ್ರೇರಿತ ಕೊಲೆಗಳು ನಡೆದಿರುವುದು, ಜಮ್ಮು- ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರು ನಡೆಸಿದ ಮುಗ್ಧ ಭಾರತೀಯ ನಾಗರಿಕರ ಕ್ರೂರ ಹತ್ಯೆಯನ್ನು ನೆನಪಿಸಿದೆ ಎಂದು ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊಸ ಸರ್ಕಾರ ಅಕಾರಕ್ಕೆ ಬಂದ 9 ತಿಂಗಳಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಮತ್ತು ಆರ್ಥಿಕತೆ ಕುಸಿದಿರುವುದು, ಎಡರಂಗದ ಮೈತ್ರಿಕೂಟ ಆಡಳಿತ ನಡೆಸಲು ಅಸಮರ್ಥವಾಗಿದೆ ಎನ್ನುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ.